spot_img
spot_img

ವಂದೇ ಭಾರತ ರೈಲು ಬೆಳಗಾವಿಯವರೆಗೆ ವಿಸ್ತರಿಸುವ ಬಗ್ಗೆ ಚರ್ಚೆ -ಕಡಾಡಿ

Must Read

spot_img
- Advertisement -

ಬೆಳಗಾವಿ:- ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರ ಕಛೇರಿಯಲ್ಲಿ ಇಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರು ಬೆಳಗಾವಿ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಕುರಿತು ಪ್ರಧಾನ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ಇರುವ ತೊಡಕುಗಳು ಹಾಗೂ ಅದರ ನಿವಾರಣೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಹಾಗೂ ಆದಷ್ಟು ಬೇಗ ವಂದೇ ಭಾರತ ರೈಲು ಪ್ರಾರಂಭಿಸಬೇಕೆಂದು ಸಂಸದ ಈರಣ್ಣ ಕಡಾಡಿಯವರು ಅಧಿಕಾರಿಗಳಿಗೆ ಒತ್ತಾಯಿಸಿದರು

ಧಾರವಾಡ-ಕಿತ್ತೂರ ಮಾರ್ಗವಾಗಿ ಬೆಳಗಾವಿವರೆಗಿನ ನೂತನ ರೈಲು ಮಾರ್ಗದ ನಿರ್ಮಾಣ ಕಾಮಗಾರಿಯು ನಿಧಾನಗತಿಯಲ್ಲಿ ನಡೆದಿದ್ದು, ತ್ವರಿತ ಗತಿಯಲ್ಲಿ ಕೈಗೊಳ್ಳಲು ನಿರ್ದೇಶಿಸಲಾಯಿತು ಮತ್ತು ಬೆಳಗಾವಿ-ಮಿರಜ ನಡುವೆ ಈ ಹಿಂದೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲುಗಳನ್ನು ಪುನಃ ಪ್ರಾರಂಭಿಸುವುದಕ್ಕೆ ಅಗತ್ಯಕ್ಕೆ ಕ್ರಮ ಕೈಗೊಳ್ಳುವುದು, ಪಂಢರಪುರ ಹಾಗೂ ರಾಜಸ್ಥಾನ ಕಡೆಗೆ ತೆರಳುವ ರೈಲುಗಳನ್ನು ಖಾನಾಪುರ, ಘಟಪ್ರಭಾ, ರಾಯಬಾಗ ನಿಲ್ದಾಣಗಳಲ್ಲಿ ನಿಲುಗಡೆಗೆ ಕ್ರಮ ಕೈಕೊಳ್ಳಲು ನಿರ್ದೇಶಿಸಲಾಯಿತು.

- Advertisement -

ಬೆಳಗಾವಿ ಜಿಲ್ಲೆಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಗೆ ಹೊಂದಿಕೊಂಡಿದ್ದು ಎಲ್ಲ ಸಾರ್ವಜನಿಕರ ಅನುಕೂಲಕ್ಕಾಗಿ ಮುಂಬೈ, ದೆಹಲಿ. ತಿರುಪತಿ, ಮಂಗಳೂರು, ಹೈದರಾಬಾದ, ಬೀದರ ಹಾಗೂ ಸೊಲ್ಲಾಪುರ ನಗರಗಳನ್ನು ಸಂಪರ್ಕಿಸುವ ನೂತನ ರೈಲುಗಳನ್ನು ಪ್ರಾರಂಭಿಸುವುದಕ್ಕಾಗಿ ಚರ್ಚಿಸಲಾಯಿತು.

ಬೆಳಗಾವಿ ರೈಲು ನಿಲ್ದಾಣದ ಪಶ್ಚಿಮದ ಬಾಜು ಎಫ್.ಒ.ಬಿ ನಿರ್ಮಾಣ ಮಾಡುವುದು, ಪ್ಲಾಟ್‌ಫಾರ್ಮ್ ನಂಬರ್ 4ರಲ್ಲಿ ಎಸ್ಕಲೇಟರ್ ಅಳವಡಿಸುವುದು, ದೇಸೂರಿನಲ್ಲಿ ಇನ್ನೊಂದು ಫಿಟ್ ಲೈನ್ ಪ್ರಾರಂಭಿಸುವುದು. ಹೀಗೆ ಹಲವು ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗೀಯ ಪ್ರಧಾನ ವ್ಯವಸ್ಥಾಪಕರಾದ ಅರವಿಂದ್ ಶ್ರೀವಾಸ್ತವ್, ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ, ಪ್ರಧಾನ ವ್ಯವಸ್ಥಾಪಕರ ಆಪ್ತ ಕಾರ್ಯದರ್ಶಿ ಸುನೀಲ ಸೇರಿದಂತೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group