Homeಸುದ್ದಿಗಳುಕಮಲಾ ಹಂಪನಾ ನಿಧನ ; ಬೆಳಗಾವಿ ಕಸಾಪ ಸಂತಾಪ

ಕಮಲಾ ಹಂಪನಾ ನಿಧನ ; ಬೆಳಗಾವಿ ಕಸಾಪ ಸಂತಾಪ

ಕನ್ನಡ ನಾಡಿನ ಹಿರಿಯ ಅಗ್ರಗಣ್ಯ ಮಹಿಳಾ ಸಾಹಿತಿ ನಾಡೋಜ ಡಾ//ಕಮಲಾ ಹಂಪನಾ ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಿ. ರಂಗಧಾಮಾನಾಯಕ್ ಮತ್ತು ಲಕ್ಷ್ಮಮ್ಮ ದಂಪತಿಯ ಪುತ್ರಿಯಾಗಿ ೧೯೩೫ ಅಕ್ಟೋಬರ್ ೨೮ ರಂದು ಜನಿಸಿದರು.
೬೦ವರ್ಷಗಳ ಕಾಲ ಸತತವಾಗಿ ಸಾಹಿತ್ಯ ಸೇವೆಯನ್ನು ಮಾಡಿದ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿಯಾಗಿದ್ದರು.

ಅವರು ಬರೆದ ಅನೇಕ ಗ್ರಂಥಗಳಲ್ಲಿ “ಬೇರು,ಬೆಂಕಿ, ಬಿಳಲು”ಎಂಬ ಬೃಹತ್ ಗ್ರಂಥ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಮೂಡುಬಿದರೆಯಲ್ಲಿ ನಡೆದ ೭೧ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡ ಮಾಡುವ ಪ್ರತಿಷ್ಠಿತ “ನಾಡೋಜ” ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ಲದೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರದಿಂದ ಬರುವ ಅನೇಕ ಪ್ರಶಸ್ತಿಗಳನ್ನೂ ಕೂಡ ಇವರು ಪಡೆದುಕೊಂಡಿದ್ದಾರೆ. ಇಂತಹ ಹಿರಿಯ ಮಹಿಳಾ ಸಾಹಿತಿಯನ್ನು ಕಳೆದುಕೊಂಡ ಕನ್ನಡ ಸಾರಸ್ವತ ಲೋಕ ಇಂದು ಬಡವಾಗಿದೆ.

ಅವರ ಕುಟುಂಬದ ಎಲ್ಲ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ

RELATED ARTICLES

Most Popular

error: Content is protected !!
Join WhatsApp Group