ಕಲುಷಿತ ನೀರಿನಿಂದಾಗುವ ಅವಘಡ ತಡೆಗೆ ಕಾರ್ಯಾಗಾರ

Must Read

ಬೆಳಗಾವಿ – ಜಿಲ್ಲಾ ಪಂಚಾಯತ್ ಬೆಳಗಾವಿ ತಾಲೂಕ ಪಂಚಾಯತ ಚಿಕ್ಕೋಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗ/ಉಪವಿಭಾಗ ಚಿಕ್ಕೋಡಿ,ಅನುಷ್ಠಾನ ಬೆಂಬಲ ಸಂಸ್ಥೆ ರೂರಲ್ ಡೆವೆಲಪಮೆಂಟ ಸೊಸೖೆಟಿ (RDS) ಮುರಗೋಡ್ ಇವರ ನೇತೃತ್ವದಲ್ಲಿ ತಾಲೂಕ ಮಟ್ಟದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ತಾಲೂಕ ಮಟ್ಟದಲ್ಲಿ ಒಂದು ದಿನದ ಕಾರ್ಯಾಗಾರವನ್ನು ದಿ. 21 ರಂದು ಹಮ್ಮಿಕೊಳ್ಳಲಾಗಿತ್ತು.

“ಕಲುಷಿತವಾಗದಿರಲಿ ನಮ್ಮ ಜಲ, ಉಳಿಸಿ ಮನುಕುಲ” ಎಂಬ ಘೋಷ ವಾಕ್ಯದೊಂದಿಗೆ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ಈ ಕಾರ್ಯಕ್ರಮದಲ್ಲಿ ಚಿಕ್ಕೋಡಿ ತಾಲೂಕಿನ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಹಾಗೂ ವಾಟರ್ ಮ್ಯಾನ್ ಗಳಿಗೆ ಡೆಂಗ್ಯೂ ನಿಯಂತ್ರಣ ಕ್ರಮಗಳು ಹಾಗೂ ಕುಡಿಯುವ ನೀರಿನ‌ ಮೂಲಗಳ ಶುಚಿತ್ವದ ಕುರಿತು ತರಭೇತಿಯನ್ನು ಆಯೋಜಿಸಲಾಗಿತ್ತು. ಕಲುಷಿತ ನೀರು ಸೃಜನೆಗೆ ಕಾರಣ ಹಾಗೂ ಅದರ ಬಳಕೆಯಿಂದ ಆಗಬಹದುದಾದ ಪರಿಣಾಮಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಲ ಮಾಲಿನ್ಯ, ಜಲಮೂಲಗಳ‌ ಸಂರಕ್ಷಣೆ, ನೀರಿನ ಗುಣಮಟ್ಟ ಪರಶೀಲನೆ ಮುಂತಾದ ಅಂಶಗಳ ಕುರಿತು ಅರಿವು ಮೂಡಿಸುವ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಹಾಗೂ ಎಲ್ಲಾ ಪಂಚಾಯಿತಿ ಅಭಿವೃದ್ಧಿಕಾರಿಗಳಿಗೆ ಹಾಗೂ ವಾಟರ ಮ್ಯಾನ್ ಗಳಿಗೆ ಕುಡಿಯುವ ನೀರಿನ ಗುಣ ಮಟ್ಟ ಪರಿಶೀಲಿಸುವ ಬಗ್ಗೆ ತಜ್ಞರು FTK ಕಿಟ್ ಬಳಕೆಯ ಬಗ್ಗೆ ಪ್ರತ್ಯಕ್ಷಿಕೆ ನೀಡಿದರು.

ವ್ಯಾಪ್ತಿಯಲ್ಲಿ ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಸೂಕ್ತ ಕ್ರಮವಹಿಸುವುದು ಹಾಗೂ ಮಾರಣಾಂತಿಕ ಕಾಯಿಲೆಯಾದ ಡೆಂಗ್ಯೂ ಜ್ವರದ ನಿಯಂತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪಾಂಡುರಂಗ ರಾವ ಕಾರ್ಯಪಾಲಕ ಅಭಿಯಂತರರು, ಚಿಕ್ಕೋಡಿ ಹಾಗೂ ಎಸ್ ಎಸ್ ಕಾದ್ರೋಳ್ಳಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ಚಿಕ್ಕೋಡಿ , ಹಾಗೂ ಚಿಕ್ಕೋಡಿ ತಾಲೂಕಿನ ಆರೋಗ್ಯ ಅಧಿಕಾರಿಗಳು ,ಸಮಾಜ ಕಲ್ಯಾಣ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು,ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು,ಸಹಾಯಕ ನಿರ್ದೇಶಕರು,ಜಿಲ್ಲಾ ಯೋಜನಾ ವ್ಯವಸ್ಥಾಪಕರು,ಹಾಗೂ ಐ. ಎಸ್ ಎ ಹಾಗೂ ಐ ಎಸ್ ಆರ್ ಎ ಸಿಬ್ಬಂದಿಗಳು ಮತ್ತು ನೀರು ಪರೀಕ್ಷಾ ಪ್ರಯೋಗಾಲಯದ ಸಿಬ್ಬಂದಿಗಳು ,ಹಾಗೂ ಚಿಕ್ಕೋಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು, ವಾಟರ ಮ್ಯಾನ ಗಳು ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group