ಶಿವಾಪೂರ(ಹ)  ಮಲ್ಲಿಕಾರ್ಜುನ ಶಾಲೆಯಲ್ಲಿ ವನಮಹೊತ್ಸವ  ಆಚರಣೆ

Must Read
ಮೂಡಲಗಿ – ಮಾನವನ ಮನುಕುಲದ ಉಳಿವಿಗಾಗಿ ಸ್ವಚ್ಛ ಪರಿಸರ ಅತೀ ಅವಶ್ಯಕವಾಗಿದೆ ನಿರಂತರ ಪರಿಸರ ಸಂರಕ್ಷಣೆ ಮಾಡುವ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡೋಣ ಎಂದು ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರು ಹಾಗೂ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಹೇಳಿದರು.
   ಅವರು ಮೂಡಲಗಿ ತಾಲೂಕಿನ ಶಿವಾಪೂರ(ಹ)  ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಶಾಲಾ ಆವರಣದಲ್ಲಿ  ಕರ್ನಾಟಕ   ಸಂಘಗಳ ಒಕ್ಕೂಟ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾ ಮತ್ತು ಸಮಾಜ ಸೇವಾ ಸಂಘ, ಶಿವಾಪುರ ಇವರ ಸಂಯುಕ್ತ ಆಶ್ರಯದಲ್ಲಿ  “ವನ ಮಹೋತ್ಸವ” ನಿಮಿತ್ತ ಸಸಿಗಳಿಗೆ ಮುದ್ದು ಮಕ್ಕಳ ಜೊತೆ ನೀರು ಹಣಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು ಅವುಗಳನ್ನು ವರ್ಷಪೂರ್ತಿ ನೀರು ಹಾಕಿ ಬೆಳೆಸಲು ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು. ಪರಿಸರ ದಿನದಂದು ಮಾತ್ರ ಗಿಡಗಳನ್ನು  ನೆಡುವುದಲ್ಲದೆ ಜೂನ ತಿಂಗಳು ಪೂರ್ತಿ ಗಿಡ ಮರಗಳನ್ನು‌ ನೆಟ್ಟು ಪೋಷಿಸಿ ಬೆಳಸುವ ಒಂದು ಹವ್ಯಾಸವನ್ನು ಜೀವನಪೂರ್ತಿ ಮೈಗೂಡಿಸಿಕೊಳ್ಳುವ ಕೆಲಸ ಮಾಡೋಣ ಎಂದರು.
  ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಯಲ್ಲಾಲಿಂಗ ವಾಳದ ಮಾತನಾಡಿ, ಶುದ್ಧ ವಾತಾವರಣ ಉತ್ತಮ ಪರಿಸರ ನಿರ್ಮಾಣ ಮಾಡಲು ಯುವಕರು ಮತ್ತು ಸಂಘಟನೆಗಳು ನಿರಂತರ ಕಾರ್ಯ ಮಾಡಬೇಕು ಎಂದು ಹೇಳಿದರು.
    ಈ ಸಂದರ್ಭದಲ್ಲಿ   ಶ್ರೀ ಮಲ್ಲಿಕಾರ್ಜುನ ಶಾಲಾ ವ್ಯವಸ್ಥಾಪಕ ಈರಪ್ಪ ಜುಂಜರವಾಡ,ರೇವಪ್ಪ ಪಾಟೀಲ,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇನ್ನು ಅನೇಕರು  ಉಪಸ್ಥಿತರಿದ್ದರು.
Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group