ಚೆಕ್ ಬೌನ್ಸ್ ಆರೋಪಿಗೆ ಜೈಲು

Must Read

ಮೂಡಲಗಿ :  ಸಾಲ ತೀರಿಸಲು ತಾನು ಕೊಟ್ಟ ಚೆಕ್ ಬೌನ್ಸ್ ಆಗಿದ್ದರಿಂದ ವ್ಯಕ್ತಿಯೊಬ್ಬನಿಗೆ ಒಂದು ವರ್ಷದ ಜೈಲು ಆದೇಶ ಮಾಡಿ  ದಿ. 21/06/2024 ರಂದು ಇಲ್ಲಿಯ ಮೂಡಲಗಿ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದೆ.

ಪಿರ್ಯಾದುದಾರ ಸೊಸೈಟಿ ಶ್ರೀ. ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ., ಸಂಕೇಶ್ವರ ಶಾಖೆ : ಮೂಡಲಗಿ ಇವರು ಆರೋಪಿಯಾದ ಮಿಟ್ಟುಸಾಬ ಕುತ್ಬುಸಾಬ್ ಅತ್ತಾರ ಸಾ. ಮೂಡಲಗಿ ಇವರು ಪಿರ್ಯಾದಿ ಸೊಸೈಟಿ ಮೂಡಲಗಿ ಶಾಖೆಯಲ್ಲಿ ಸಾಲ ಪಡೆದಿದ್ದು, ಸಾಲ ಮರುಪಾವತಿಗಾಗಿ ಚೆಕ್ಕನ್ನು ನೀಡಿದ್ದು, ಆರೋಪಿಯು ನೀಡಿದ ಚೆಕ್ ಬೌನ್ಸ್ ಆಗಿದ್ದರ ಸಲುವಾಗಿ ಪಿರ್ಯಾದಿ ಸೊಸೈಟಿಯವರು ಆರೋಪಿತನ ವಿರುದ್ಧ ನೆಗೋಶಿಯೇಬಲ್ ಇನಸ್ಟುಮೆಂಟ್ ಆ್ಯಕ್ಷ ಕಲಂ 138 ರ ಅಡಿಯಲ್ಲಿ ಪ್ರಕರಣ ದಾಖಲ ಮಾಡಿದ್ದರು.

ವಿಚಾರಣೆಯ ನಂತರ ಕೋರ್ಟು ದಿನಾಂಕ : 21/06/2024 ರಂದು ಆರೋಪಿಗೆ ಚೆಕ್ಕನ ಮೊತ್ತ ರೂ.8,05,197/- ಗಳನ್ನು ಪಾವತಿಸುವಂತೆ ಹಾಗೂ ಸರಕಾರಕ್ಕೆ ರೂ.10,000/- ಗಳನ್ನು ದಂಡ ಪಾವತಿ ಮಾಡುವಂತೆ ಆದೇಶ ನೀಡಿತ್ತು.

ಒಂದು ವೇಳೆ ಹಣ ಪಾವತಿಸದಿದ್ದಲ್ಲಿ ಒಂದು ವರ್ಷದ ಕಾಲ ಸಾದಾ ಕಾರಾಗೃಹ ವಾಸ ಶಿಕ್ಷೆ ಅನುಭವಿಸುವಂತೆ ಆದೇಶ ಮಾಡಿದ್ದು, ಸದರಿ ಪ್ರಕರಣದ ಆದೇಶವನ್ನು ನ್ಯಾಯಾದೀಶರಾದ ಶ್ರೀಮತಿ ಜ್ಯೋತಿ ಪಾಟೀಲ ರವರು ನೀಡಿದ್ದಾರೆ.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group