- Advertisement -
ಸಮ್ಮಿಲನ
ಭಾವನೆಗಳ
ತಳುಕಾಟ
ಸ್ನೇಹ ಪ್ರೀತಿಯ
ಹುಡುಕಾಟ
ಭವ ಬಂಧನ
ಸೀಮೆ ದಾಟಿ
ಗಟ್ಟಿಗೊಳ್ಳ ಬೇಕು
ಮನಸ್ಸು ಕನಸುಗಳ
ಸಮ್ಮಿಲನ
ಹೃದಯ ಬೆಸುಗೆ
ಯಾರೂ ಇರದ
ಪುಟ್ಟ ವಿಶ್ವ
ಆನಂದ ಸಂತಸ
ಸಂಭ್ರಮದ ಜಪ
ಯಾರ ಕಡೆಗೂ
ಅತ್ತ ಇತ್ತ
ನೋಡದೆ
ಮುಂದೆ ಮುಂದೆ
ಸಾಗಬೇಕು
ದೂರ ಅನಂತಕೆ
ಒಲವ ಪ್ರೇಮ
ಹಂಚಿಕೊಂಡು
______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ