ಹೊಸದೆಹಲಿ – ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಟಿ-೨೦ ಫೈನಲ್ ಪಂದ್ಯವನ್ನು ಗೆದ್ದಿರುವ ಭಾರತ ತಂಡವನ್ನು ಪ್ರಧಾನ ಮಂತ್ರಿ ಮೋದಿ ಅಭಿನಂದಿಸಿದ್ದಾರೆ. ರೋಹಿತ್ ಶರ್ಮಾ ಅವರ ಅದ್ಭುತ ನಾಯಕತ್ವ ಹಾಗೂ ವಿರಾಟ್ ಕೊಹ್ಲಿಯವರ ಅದ್ಭುತ ಆಟವನ್ನೂ ಅವರು ಶ್ಲಾಘಿಸಿದ್ದಾರೆ.
ಜೂ.೩೦ ರಂದು ಭಾರತ ತಂಡದೊಂದಿಗೆ ಫೋನ್ ನಲ್ಲಿ ಮಾತನಾಡಿದ ಮೋದಿಯವರು ಭಾರತ ಟಿ-೨೦ ವಿಶ್ವಕಪ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪಂದ್ಯದ ನಂತರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ- ೨೦ ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು. ಮೋದಿಯವರು ಹಾರ್ದಿಕ್ ಪಾಂಡ್ಯ ಅವರ ಕೊನೆಯ ಓವರನ್ನೂ ಹೊಗಳಿದ್ದು, ದಕ್ಷಿಣ ಆಫ್ರಿಕಾ ಆಟಗಾರ ಡೆವಿಡ್ ಮಿಲ್ಲರ್ ಅವರನ್ನು ಔಟ್ ಮಾಡಿದ ಸೂರ್ಯಕುಮಾರ ಯಾದವ ಅವರ ಬೌಂಡರಿ ಲೈನ್ ನ ಅದ್ಭುತ ಕ್ಯಾಚನ್ನೂ ಕೂಡ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ತಂಡಕ್ಕೆ ರಾಹುಲ್ ದ್ರಾವಿಡ ಅವರ ತರಬೇತಿ ಸಿಕ್ಕಿದ್ದು ದ್ರಾವಿಡ ಅವರಿಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ ಎಂಬುದಾಗಿ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.