spot_img
spot_img

ಮಾನವನಿಂದ ಮಹಾನ್ ಮಾನವನಾಗಲು ರಾಜಯೋಗ  ಶಿಕ್ಷಣವೇ ಆಧಾರ – ಬ್ರಹ್ಮಾಕುಮಾರ ಕರುಣಾಜಿ ಅಭಿಮತ 

Must Read

spot_img
ಮೈಸೂರು – ಜಗತ್ತಿನಲ್ಲಿ ಎಲ್ಲಾ ಪ್ರಕಾರದ ಶಿಕ್ಷಣವಿದ್ದರೂ ಮಾನವೀಯ ಮೌಲ್ಯಗಳ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ. ಮಾನವನನ್ನು ಮಹಾಮಾನವನನ್ನಾಗಿ ಮಾಡುವ ಏಕೈಕ ಶಿಕ್ಷಣ ರಾಜಯೋಗ ಶಿಕ್ಷಣ ಎಂದು ಅಂತರಾಷ್ಟ್ರೀಯ ಅಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೌಂಟ್ ಅಬುವಿನ ಮೀಡಿಯಾ ರಾಷ್ಟ್ರೀಯ ಅಧ್ಯಕ್ಷ ರಾಜ ಯೋಗಿ ಬ್ರಹ್ಮಾಕುಮಾರ ಕರುಣಾಜೀ ಅಭಿಪ್ರಾಯಪಟ್ಟರು
   ಅವರು ಯಾದವಗಿರಿ ಶಾಖೆಯಲ್ಲಿ 84ನೇ ಜನ್ಮದಿನೋತ್ಸವದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡುತ್ತಾ ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಂಡರೆ ಮಾತ್ರ ಮುಂಬರುವ ದಿನಗಳಲ್ಲಿ ಬರುವ ಜೀವನದ ಪರೀಕ್ಷೆ ಪರಿಸ್ಥಿತಿಗಳನ್ನು ಎದುರಿಸಲು ಸಾಧ್ಯ ಎಂದರು.
   ರಾಜಯೋಗ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಅಂತರ್ಮುಖತೆ ಅಭ್ಯಾಸ ಮಾಡಿದರೆ ಒಳಿತು. ಅಂತರ್ ಮುಖಿ ಸದಾ ಸುಖಿ ಬಹಿರ್ಮುಖಿ ಸದಾ ದುಃಖಿ ಎಂದರು
    ಜ್ಞಾನ ಸರೋವರ ರಾಜಯೋಗ ರಿಟ್ರೀಟ್ ಸೆಂಟರ್ ನ ಪ್ರಾಂಶುಪಾಲರಾದ ಬ್ರಹ್ಮಾಕುಮಾರ  ರಂಗನಾಥ್ ಶಾಸ್ತ್ರಿಜಿ ಮಾತನಾಡಿ 60ರ ದಶಕದಲ್ಲಿ ಮೈಸೂರು ಮಹಾರಾಜರಿಂದ ಸಹಯೋಗ ಪಡೆದು ಪುಟ್ಟದಾದ ರೀತಿಯಲ್ಲಿ ಆರಂಭಿಸಿದ ಈಶ್ವರೀಯ ವಿಶ್ವವಿದ್ಯಾಲಯ ಇಂದು ನಾಲ್ಕು ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು  ಕರ್ನಾಟಕದಾದ್ಯಂತ ಹೆಮ್ಮರವಾಗಿ ಬೆಳೆದಿದೆ ಅದಕ್ಕೆ ಮೂಲ ಕಾರಣಕರ್ತರು ಕರುಣಾಜಿಯವರು  ಆಗಿದ್ದಾರೆ ಎಂದರು ಅಂತಾರಾಷ್ಟ್ರೀಯ ಮುಖ್ಯ ಕೇಂದ್ರವಾದ ಅಬು ಪರ್ವತದಲ್ಲಿ  ಕಳೆದ 52 ವರ್ಷಗಳಿಂದ ಸಂಸ್ಥೆಯ ಮಲ್ಟಿಮೀಡಿಯಾದ ರಾಷ್ಟ್ರ ಅಧ್ಯಕ್ಷರಾಗಿ ಸಂಸ್ಥೆಯ ಮ್ಯಾನೇಜ್ಮೆಂಟ್ ಕಮಿಟಿಯ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಜೊತೆಗೆ ಪೀಸ್ ಆಫ್ ಮೈಂಡ್ ಮತ್ತು ಅವೇಕನಿಂಗ್  ಎಂಬ ಎರಡು ಟಿವಿ ಚಾನಲ್ ಗಳನ್ನು ಪ್ರತಿಷ್ಠಾಪಿಸಿ 24 ಗಂಟೆಗಳ ಕಾಲ ನಿರಂತರ ಆಧ್ಯಾತ್ಮಿಕ ಏಳಿಗೆಯ ವಿಧಿ ವಿಧಾನಗಳನ್ನು ಯಾವುದೇ ಜಾಹೀರಾತುಗಳಿಲ್ಲದೆ  ಮುನ್ನಡೆಸುತ್ತಿದ್ದಾರೆ ಹಾಗೆ ಸಂಸ್ಥೆಯ ವಿಷಯಗಳನ್ನು ಜನರಿಗೆ ಮುಟ್ಟಿಸಲು ಹಿಂದಿ ಇಂಗ್ಲಿಷ್ ಮತ್ತು ಅನೇಕ ಭಾಷೆಗಳಲ್ಲಿ ನಿಯತ ಕಾಲಿಕಗಳನ್ನು ಪ್ರಕಟಿಸಲು ನಿಮಿತ್ತರಾಗಿದ್ದಾರೆ ಅನೇಕ ದೇಶಗಳಲ್ಲಿ ಪರಮಾತ್ಮನ ಸಂದೇಶವನ್ನು ನೀಡಲು ಪರ್ಯಟನೆ ಮಾಡಿರುವ ಕರುಣಾಜಿ ಇಂದು ಮೈಸೂರಿಗೆ ಆಗಮಿಸಿ ಅನೇಕ ಪ್ರೇರಣದಾಯಕ ಮಾತುಗಳನ್ನು ಆಡಿದ್ದಾರೆ ಎಂದು ತಿಳಿಸಿದರು.
    ಯೋಗ ಭವನದ ನಾಗರಾಜ್ ಭಾಯಿ ಮಾತನಾಡಿ ಇಲ್ಲಿ ನಡೆಯುತ್ತಿರುವ 140 ಅಡಿ ಎತ್ತರದ ಶಿವಲಿಂಗದ ಮ್ಯೂಸಿಯಂ ಬಗ್ಗೆ ಸಾಕಷ್ಟು ಮಾರ್ಪಾಟು ಮಾಡಿಕೊಳ್ಳಲು ತಿಳಿಸಿದ್ದಾರೆ ಎಂದು ತಿಳಿಸಿದರು.
     ರಾಜಾಯೋಗಿ  ಬ್ರಹ್ಮಾಕುಮಾರ ಪ್ರಾಣೇಶ್ ಜಿ ಶುಭಾಶಯವನ್ನು ಕೋರಿ ಕರುಣಾಜಿಯವರು  ಅಂದಿನ ದಿನಗಳಲ್ಲಿ ಹೇಗೆ ಜನತೆಗೆ ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳುವ ರೀತಿ ನೀತಿಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
     ಕಾರ್ಯಕ್ರಮದಲ್ಲಿ ರಾಜ ಯೋಗಿನಿ  ಬ್ರಹ್ಮಾಕುಮಾರಿ ಲಕ್ಷ್ಮೀ ಜಿ, ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನ ಪ್ರಶಸ್ತಿ ಪುರಸ್ಕೃತೆ ಬ್ರಹ್ಮಾಕುಮಾರಿ ದಾನೇಶ್ವರೀಜಿ ಮೀನಾಜಿ ಓಂ ಶಾಂತಿ ನ್ಯೂ ಸರ್ವಿಸ್ನ  ಬಿ ಕೆಆರಾಧ್ಯ ಮಾಧ್ಯಮದ ಮಹದೇವಸ್ವಾಮಿ ನಿವೃತ್ತ ಡಿವೖಎಸ್ಪಿ ಕೃಷ್ಣಮೂರ್ತಿ ಇಂಜಿನಿಯರ್ ರಾಮಚಂದ್ರ ಯೋಗ ಭವನದ ಕುಮಾರ್ ಮಣಿ ವೀಣಾ  ಮೀನಾಜಿ  ಸೇರಿದಂತೆ ಮೈಸೂರು ಉಪವಿಭಾಗದ ಅನೇಕ ರಾಜಯೋಗ ವಿದ್ಯಾರ್ಥಿಗಳು ಭಾಗವಹಿಸಿದ್ದರು
- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group