ಸಾಹಿತ್ಯದ ಅಧ್ಯಯನ ದೇಶಾಭಿಮಾನದ ಪ್ರತೀಕ : ಡಾ ಶೇಖರ ಹಲಸಗಿ

Must Read

ಎಂ ಕೆ ಹುಬ್ಬಳ್ಳಿ : ಇಂದಿನ ಯುವ ಜನಾಂಗವು ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಗತಿಸಿ ಹೋದ ಅನೇಕ ಸಂಗತಿ ಅರಿತುಕೊಂಡು, “ಭವಿಷ್ಯದ ಭಾರತ” ಕಟ್ಟಲು ವಿದ್ಯಾರ್ಥಿ ದೆಸೆಯಿಂದ ಅಧ್ಯಯನ ಮಾಡಿದಾಗ ಮಾತ್ರ ಉತ್ತಮ ಸಂಸ್ಕಾರ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಸುಭದ್ರವಾದ ನಾಡನ್ನು ಕಟ್ಟಲು ಸಾಧ್ಯವಿದ್ದು ಯುವಕರು ಮನಸ್ಸು ಮಾಡಬೇಕಿದೆ ಎಂದು, ಕಿತ್ತೂರು ತಾಲೂಕ ಕಸಾಪ ನಿಪೂ ಅಧ್ಯಕ್ಷರಾದ ಡಾ ಶೇಖರ ಹಲಸಗಿ ಯವರು ನುಡಿದರು,

ಎಂ ಕೆ ಹುಬ್ಬಳ್ಳಿ ಶ್ರೀ ಕಲ್ಮೇಶ್ವರ ಪದವಿ ಮಹಾ ವಿದ್ಯಾಲಯದ “ರಾಷ್ಟ್ರೀಯ ಸೇವಾ ಯೋಜನೆಯ” ಶಿಬಿರದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಯುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಕನ್ನಡ ಸಾಹಿತ್ಯದಲ್ಲಿ ದೇಶಾಭಿಮಾನ ” ಕುರಿತು ಮಾತನಾಡುತ್ತ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ರಾಜೇಂದ್ರ ಈರಪ್ಪ ಮುತ್ನಾಳ. ವಹಿಸಿದ್ದರು. ಅತಿಥಿಗಳಾಗಿ ಎಸ್ ಎಸ್ ಗಂಗಾಧರಮಠ, ನಿರ್ದೇಶಕರಾದ ಲಕ್ಷ್ಮಣ ಗೋಕಾರ, ಕಾಲೇಜು ವಿಭಾಗದ ಪ್ರಾಚಾರ್ಯ, ಪ್ರೊ, ಜಿ ಆರ್ ವಾಲಿ, ಎ ಆರ್ ಪಾಟೀಲ್, ಎಸ್ ಎಸ್ ಸಿದ್ರಾಮನಿ ಎನ್ ಎಸ್ ಎಸ್ ಘಟಕದ ಸಂಯೋಜಕ ಪ್ರೊ ಡಿ ಎಂ ಅಜ್ಮಿರ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು
ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಯಶಸ್ವಿ ಯಾಗಿ ಕಾರ್ಯಕ್ರಮ ಜರುಗಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group