ಕವನ

Must Read

ನಾವು ನಮ್ಮವರು

ಬಾಳ ದಾರಿ ಸಾಗುತಿದೆ ದಿನನಿತ್ಯ ತಪ್ಪದೆ
ಪಯಣದ ಅಂತ್ಯವೂ ಇನ್ನೂ ಕಾಣದಾಗಿದೆ
ಕಷ್ಟ ಸುಖಗಳ ಮನವು ಅನುಭವಿಸಿದೆ
ಕಾರಣ ಸಿಗದೆ ಪಯಣ ಮತ್ತೆ ನಿಂತಿದೆ

ಬದುಕಿನ ಪಯಣದಲ್ಲಿ ಸಿಕ್ಕರು ಹಲವರು
ನೋವು ನಲಿವನು ಕೆಲವರು ಹಂಚಿಕೊಂಡರು
ನಂಬಿದವರು ಮನಕೆ ಖುಷಿಯ ಕೊಟ್ಟರು
ಮಿಕ್ಕವರು ಬೆನ್ನಿಗೆ ಚೂರಿ ಹಾಕಿದರು

ಪ್ರೀತಿ ಪ್ರೇಮದ ಅರ್ಥವೇ ಗೊತ್ತಿಲ್ಲದವರು
ಬದುಕನ್ನೇ ಹಾಳು ಮಾಡಿ ಬೆಂಕಿ ಇಟ್ಟವರು
ಇವುಗಳ ಮಧ್ಯೆ ಬದುಕನ್ನೇ ಮೆಟ್ಟಿ ನಿಂತರು
ಅವರೇ ಸಮಾಜಕ್ಕಾಗಿ ಬದುಕಿದ ಸಾಧಕರು

ಬದುಕು ಒಂದು ನಿಲ್ಲದ ಜಂಜಾಟವು
ಬದುಕಿನಲ್ಲಿ ಬೇಕು ಪ್ರೀತಿ ಸೌಜನ್ಯವು
ನಿಲ್ಲಲಿ ನಾನು ನನ್ನದೆಂಬ ಅಹಂಕಾರವು
ಬೆಳೆಸಿಕೊಳ್ಳಿ ನಾವು ನಮ್ಮವರೆಂಬ ಭಾವನೆಯ

ಪ್ರತಿಯೊಬ್ಬರ ಮೇಲೆ ನಂಬಿಕೆ ಇಡಬೇಡಿರಿ
ಹಾಗಂತ ಎಲ್ಲರೂ ಕೆಟ್ಟವರಲ್ಲ ಅರಿಯಿರಿ
ಒಳ್ಳೆಯವರಿಗೂ ಕೆಟ್ಟವರಿಗೂ ಒಳ್ಳೆಯವರಾಗಿ ಬದುಕಿರಿ
ಮನುಷ್ಯನನ್ನು ಮನುಷ್ಯನಂತೆ ಅನುದಿನ ನಂಬಿರಿ

ಮುತ್ತು ಯ ವಡ್ಡರ
ಶಿಕ್ಷಕರು
ಬಾಗಲಕೋಟ
9845568484

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group