ಸಿಂದಗಿ; ಅಖಂಡ 32 ವರ್ಷಗಳ ಕಾಲ ಕೃಷಿ ಇಲಾಖೆಯಲ್ಲಿ ಗ್ರಾಮ ಸೇವಕರಾಗಿ ರೈತರ ಒಡನಾಡಿಯಾಗಿ ಕಾರ್ಯನಿವೃಹಿಸಿದ ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆಯವರಿಂದ ಇನ್ನೂ ಸಮಾಜಮುಖಿ ಕಾರ್ಯ ನಡೆಯಲಿ ಅವರು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಸ್ವಾಗತಾರ್ಹ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ಹೇಳಿದರು.
ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನೂತನ ನಿರ್ದೇಶಕರಾಗಿ ಆಯ್ಕೆಯಾದ ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆಯವರಿಗೆ ನಿವೃತ್ತ ನೌಕರರ ಸಂಘದವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ನಿರ್ದೇಶಕ ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆಯವರು ಮಾತನಾಡಿ, ದಿ.ಎಂ.ಸಿ.ಮನಗೂಳಿ ಕಾಕಾ ಅವರ ಅಭಿಮಾನಿಯಾಗಿದ್ದ ನನ್ನನ್ನು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ ಚೇರಮನ್ ಅಶೋಕ ಮನಗೂಳಿಯವರು ನನಗೆ ಇನ್ನೂ ತಾಲೂಕಿನಲ್ಲಿ ಸಕ್ರೀಯವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿ.ಎಸ್.ಶಾಪೂರ, ರಮೇಶ ಬಬಲೇಶ್ವರ, ಎಸ್.ಎಲ್.ಪಾಟೀಲ, ಎಸ್.ಎನ್.ಬಿರಾದಾರ, ಎಸ್.ಡಿ.ಜೋಗುರ, ಬಿ.ಸಿ.ಪಾಟೀಲ, ಎಂ.ಎಂ.ಹಂಗರಗಿ, ಮುರಗಾನೂರ ಶಿಕ್ಷಕರು, ರುಕುಂಪುರ ಶಿಕ್ಷಕರು ಸೇರಿದಂತೆ ಹಲವರು ಇದ್ದರು.