spot_img
spot_img

ಸಾರ್ಥಕ ಸಾಧಕ ಡಾ.ಕವಿತಾಕೃಷ್ಣ- ಹಿರಿಯ ಪತ್ರಕರ್ತ ಎಸ್ ನಾಗಣ್ಣ ಅಭಿಮತ

Must Read

spot_img
- Advertisement -

36 ಕೃತಿಗಳ ಲೋಕಾರ್ಪಣೆ – ನುಡಿ ನಮನ

ತುಮಕೂರು – ಅನ್ನಪೂರ್ಣ ಪಬ್ಲಿಶಿಂಗ್ ಹೌಸ್, ಕವಿತಾಕೃಷ್ಣ ಸಾಹಿತ್ಯ ಮಂದಿರ ಬಳಗ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ನಡೆದ 36 ಕೃತಿಗಳ ಲೋಕಾರ್ಪಣೆ ಸಮಾರಂಭ ಮತ್ತು ಕವಿತಾಕೃಷ್ಣ ನುಡಿ ನಮನ ಕಾರ್ಯಕ್ರಮವನ್ನು ತುಮಕೂರು ಕೌತಮಾರನಹಳ್ಳಿ ಆಕಾಶ್ ಫಾರಂ ಹೌಸ್ನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ ಎಸ್ ನಾಗಣ್ಣ ಮಾತನಾಡುತ್ತಾ ಕವಿತಾಕೃಷ್ಣರವರು ತುಮಕೂರಿಗೆ ಸಾಹಿತ್ಯ ಸಂಸ್ಕೃತಿಯ ದಿವ್ಯ ಸಂಸ್ಪರ್ಶ ಮಾಡಿದ ಕನ್ನಡ ಸಂಘಟನೆಯ ಮುಂಚೂಣಿಯಲ್ಲಿ ಕ್ರಿಯಾತ್ಮಕ ಶಕ್ತಿಯಾಗಿ ಶ್ರಮಿಸಿದವರು. ವಿದ್ಯೆ ವಿನಯ ವಿವೇಕಗಳ ತ್ರಿವೇಣಿ ಸಂಗಮವೆನಿಸಿರುವ ಅವರು ಕರ್ನಾಟಕದ ಉದ್ದಗಲಕ್ಕೂ ತಮ್ಮ ಅಭಿಮಾನಿಗಳನ್ನು ಹೊಂದಿದ್ದ ಶ್ರೀಯುತರು ಅರ್ಧಶತಮಾನಕ್ಕೂ ಹೆಚ್ಚು ಕಾಲ ತಮ್ಮ ಸಾಹಿತ್ಯದ ಸಾರ್ಥಕ ಸೇವೆಯನ್ನು ಸಲ್ಲಿಸಿ ಮಾದರಿ ಸಾಧಕರೆನಿಸಿಕೊಂಡಿದ್ದರು ಎಂದು ತಿಳಿಸಿದರು.

- Advertisement -

ಅನ್ನಪೂರ್ಣ ಪಬ್ಲಿಶಿಂಗ್ ಹೌಸ್ ವಿದ್ಯಾವಾಚಸ್ಪತಿ ಡಾ.ಕವಿತಾ ಕೃಷ್ಣ ರವರ ಮಕ್ಕಳ ಮಾಲಿಕೆ ಅಡಿಯಲ್ಲಿ ಪ್ರಕಟಿಸಿರುವ 36 ಪುಸ್ತಕಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ರವರು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ, ಅನ್ನಪೂರ್ಣ ಪಬ್ಲಿಶಿಂಗ್ ಹೌಸ್ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿ ಸುತ್ತ 600 ಪುಸ್ತಕಗಳನ್ನು ಪ್ರಕಟಿಸಿರುವ ಹಿರಿಮಗೆ ಮತ್ತೊಂದು ಗರಿಯಾಗಿ ಈ ಮಾಲೆ ಮೂಡಿ ಬರುತ್ತಿದ್ದು ಕಲೆ- ಸಾಹಿತ್ಯ -ಇತಿಹಾಸ ಜ್ಞಾನ -ವಿಜ್ಞಾನದ ಕುರಿತು ಶ್ರೀಸಾಮಾನ್ಯರಲ್ಲಿ ಓದುವ ಅಭಿರುಚಿಯನ್ನು ಬೆಳೆಸಲು ಮತ್ತು ಸಾಹಿತ್ಯದ ಮಹತ್ವದ ವಿಷಯಗಳನ್ನು ಮನನ ಮಾಡಿಸಲು ನೆರವಾಗುತ್ತದೆ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೊಡ ಮಾಡುವ ಜಿಪಿ ರಾಜರತ್ನಂ ಪುಸ್ತಕ ಪರಿಚರಿಕೆ ಪ್ರಶಸ್ತಿಗೆ ಕವಿತಾ ಕೃಷ್ಣ ರವರು ಎಲ್ಲ ರೀತಿಯಿಂದಲೂ ಅರ್ಹರಾಗಿದ್ದರು, ಅದು ಸಿಗುವಂತಾಗಲಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರ ‘ಕನ್ನಡ ನಾಡಿನ ಹೆಮ್ಮೆ ಶ್ರೀ ಮಧ್ವಾಚಾರ್ಯರು’, ಪ್ರಾಧ್ಯಾಪಕ ಡಾ. ಆರ್ ವಾದಿರಾಜುರವರ ಶ್ರೀ ವಾದಿರಾಜ, ದೀಪಶ್ರೀ ಎಸ್ ಕೂಡ್ಲಿಗಿ ರವರ ಸಂತ ಶಿಶುನಾಳ ಶರೀಫ, ಹನುಮಂತ ಮ ದೇಶ ಕುಲಕರ್ಣಿ ರವರ ನೇತಾಜಿ ಸುಭಾಷ್ ಚಂದ್ರ ಬೋಸ್, ಶಮಂತ್ ಕುಮಾರ್ ರವರ ವಶಿಷ್ಠ ಮಹರ್ಷಿ , ಲೇಖಕ ಡಾ ಪ್ರಕಾಶ್ ಕೆ ನಾಡಿಗ್ ರವರ ಆದಿಕವಿ ವಾಲ್ಮೀಕಿ, ಮಂಜೇಶ್ವರದ ಲಕ್ಷ್ಮಿ ವಿಭಟ್ ರವರ ದಾಸರೆಂದರೆ ಪುರಂದರ ದಾಸರು, ನವನೀತ್ ತಲ್ವಾಡಿ ರವರ ಕನ್ನಡ ಉಪಾಸಕ ಕುವೆಂಪು, ಕಮಲ ಬಡ್ಡಿ ಹಳ್ಳಿರವರ ಸಾಲುಮರದ ತಿಮ್ಮಕ್ಕ ಮುಂತಾದ ಕೃತಿಗಳು ಲೋಕಾರ್ಪಣೆ ಗುಂಡವು ಮತ್ತು ಲೇಖಕರನ್ನು ಅಭಿನಂದಿಸಲಾಯಿತು.

ಲೇಖಕರ ಪರವಾಗಿ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡುತ್ತಾ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಹಿರಿಯ ಕಿರಿಯ ಲೇಖಕರ ಕೃತಿಗಳ ಈ ಮಾಲಿಕೆ ಯಿಂದ ಯುವ ಜನರಲ್ಲಿ ಓದುವ ಆಸಕ್ತಿ ಮೂಡುವಂತಾಗಬೇಕು ಎಂದು ಆಶಿಸಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕವಿತಾಕೃಷ್ಣ ರವರ ಧರ್ಮಪತ್ನಿ ಶ್ರೀಮತಿ ನಾಗರತ್ನಮ್ಮ, ಪುತ್ರ ಅರವಿಂದ ಕೃಷ್ಣ, ಪ್ರಕಾಶಕರಾದ ಕೆಂಪಣ್ಣ ಮತ್ತು ಬಿ ಕೆ ಸುರೇಶ್ ಉಪಸ್ಥಿತರಿದ್ದರು.

ಸಮಾರಂಭದ ಆರಂಭದಲ್ಲಿ ಸಾಹಿತ್ಯ ಅಭಿಮಾನಿಗಳು ಕವಿತಾಕೃಷ್ಣ ರವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group