ಮೂಡಲಗಿ: ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತು ಗ್ರಾಮ ರಾಜಾಪೂರದಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ಜರುಗಿತು.
ಮುಖ್ಯ ಅತಿಥಿ ರಾಜು ಬೈರುಗೋಳ ಮಾತನಾಡಿ, ಎನ್.ಎಸ್.ಎಸ್. ಶೈಕ್ಷಣಿಕವಾಗಿ ಮಾತ್ರವಲ್ಲದೇ ಜೀವನದ ಸಾರವನ್ನು ತಿಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಪರಸ್ಪರ ಸಹಕಾರದ ಮನೋಭಾವ ಮೂಡಿಸುವಲ್ಲಿ ಸಹಕಾರಿಯಾದೆ ಎಂದರು.
ಮೂಡಲಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಂಜಯ ಶಿಂದಿಹಟ್ಟಿ ಮಾತನಾಡಿ ನಮ್ಮ ರಾಜ್ಯ, ದೇಶದ ಸೇವೆಗಾಗಿ ನಮ್ಮ ಜೀವನವನ್ನು ಮುಡಿಪಾಗಿ ಇಡಬೇಕು. ಆ ಮೂಲಕ ನಮ್ಮ ದೇಶದ ಋಣ ತೀರಿಸಬೇಕು ಎಂದರು.
ಗ್ರಾಮದ ಹಿರಿಯರಾದ ವಿಠ್ಠಲ ಉ. ಪಾಟೀಲ ಮಾತನಾಡಿ, ನಮ್ಮ ಗ್ರಾಮದಲ್ಲಿ ಶಿಬಿರವನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಕಾರ್ಯ ಶ್ಲಾಘನೀಯ ಎಂದರು.
ಎಸ್.ಆರ್.ಇ. ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ರಾಮಚಂದ್ರ ಪಾಟೀಲ, ವಾಶಪ್ಪ ಪಂಡ್ರೋಳಿ,ಶಿವಾನಂದ ಕಮತಿ, ನಾಗಪ್ಪ ಕಟ್ಟಿಕಾರ, ಗೋಪಾಲ ಪವಾರ, ಪ್ರಕಾಶ ಹುನ್ನೂರ, ಬೈರಪ್ಪ ಯಕ್ಕುಂಡಿ, ಲಕ್ಷ್ಮಣ ನಾಯಕ, ಹಾಲಪ್ಪ ಪಾಟೀಲ, ಬಸು ಪಾಟೀಲ, ವಿಲಾಸ ಬೈರುಗೋಳ ಇನ್ನಿತರರು ಉಪಸ್ಥಿತರಿದ್ದರು.
ಶಿಲ್ಪಾ ನಾಯಿಕವಾಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಹ ಕಾರ್ಯಕ್ರಮಾಧಿಕಾರಿ ಡಿ.ಎಸ್. ಹುಗ್ಗಿ ಸ್ವಾಗತಿಸಿದರು, ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೀಣಾ ಕಂಕಣವಾಡಿ ಹಾಗೂ ಲಕ್ಷ್ಮೀ ಪುಡಕಲಕಟ್ಟಿ ನಿರೂಪಿಸಿದರು. ವಿಲಾಸ ಕೆಳಗಡೆ ವಂದಿಸಿದರು