spot_img
spot_img

ಭಾರತೀಯ ಪರಂಪರೆಯಲ್ಲಿ ಸಂಗೀತಕ್ಕೆ ಪ್ರಮುಖ ಪಾತ್ರವಿದೆ – ಸಿ.ವಿಶ್ವನಾಥ್ ಅಭಿಮತ

Must Read

- Advertisement -

ಮೈಸೂರು-ಮೈಸೂರಿನಲ್ಲಿ ಸಂಗೀತದ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಭಾರತೀಯ ಸಂಗೀತ ಪರಂಪರೆಯಲ್ಲಿ ಈ ಕೊಡುಗೆಯಲ್ಲಿ ಸ್ವರಾಲಯ ಸಂಗೀತ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ವಿದುಷಿ ಡಾ.ಸುಮ ಹರಿನಾಥ್ ಅವರ ಪಾಲಿದೆ ಎನ್ನುವುದಕ್ಕೆ ಸಂತೋಷವಾಗುತ್ತದೆ ಎಂದು ದೂರದರ್ಶನ ಹಾಗೂ ಆಕಾಶವಾಣಿ ಹಿರಿಯ ಶ್ರೇಣಿ ಕಲಾವಿದರಾದ ವಿದ್ವಾನ್ ವಿಶ್ವನಾಥ್ ಸಿ. ಅಭಿಪ್ರಾಯಪಟ್ಟರು.

ಅವರು (ಜು.೨೮ ರಂದು) ಗಾನಭಾರತಿ ಸಭಾಂಗಣದಲ್ಲಿ ಸ್ವರಾಲಯ ಸಂಗೀತ ಸಂಸ್ಥೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಆಯೋಜಿಸಿದ್ದ ಸ್ವರಾಲಯ ಸಾಂಸ್ಕೃತಿಕ ಹಬ್ಬ-೨೦೨೪ (ಭಾಗ-೩) ಅನ್ನು ಉದ್ಘಾಟಿಸಿ ಮಾತನಾಡಿದರು.

ವಿದುಷಿ ಡಾ.ಸುಮ ಹರಿನಾಥ್ ಅವರು ಸಮಾಜದಲ್ಲಿ ನಿತ್ಯ ಹೊಸತನದ ಹುಡುಕಾಟದಲ್ಲಿ ತೊಡಗಿರುತ್ತಾರೆ. ಇಂತಹ ವ್ಯಕ್ತಿತ್ವ ಎಲ್ಲರಲ್ಲೂ ನೋಡಲು ಸಾಧ್ಯವಿಲ್ಲ. ಇವರು ಕೆಲವು ನಾಟಕಗಳನ್ನೂ ರಚನೆ ಮಾಡಿ ಗಮನ ಸೆಳೆದಿದ್ದಾರೆ. ಅವರು ಕಲಿತ ಸಂಗೀತ ವಿದ್ಯೆಯನ್ನು ಬೇರೆಯವರಿಗೆ ತುಂಬಾ ಕೈಗೆಟಕುವ ದರದಲ್ಲಿ ಧಾರೆಯೆರೆಯುತ್ತಿರುವುದು ಸ್ವಾಗತಾರ್ಹ ಸಂಗತಿ. ಅವರು ಕಲಿಕೆಗೆ ಹೆಚ್ಚಿನ ಪ್ರಾಧ್ಯಾನ್ಯ ನೀಡುತ್ತಾರೆ ಎಂದು ತಿಳಿಸಿದರು.

- Advertisement -

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಗೀತ ಶಿಕ್ಷಕಿ ಕ್ಷಮಾ ಕಟ್ವಾರ್ ಮಾತನಾಡಿ, ಸ್ವರಾಲಯ ಸಂಗೀತ ಸಂಸ್ಥೆ ಸಂಗೀತ ಪ್ರಾರಂಭವಾದಾಗಿನಿಂದ ಇದುವರೆಗೆ ಸಂಗೀತ ತರಗತಿಗಳನ್ನು ನಡೆಸುವುದರ ಜೊತೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ಸಂಗೀತ ‘ಸಂ’ ಎಂದರೆ ಸಂವೇದನೆಯೊಂದಿಗಿನ ಅದ್ಭುತ ಕಲೆಗಳು, ‘ಗೀ’ ಎಂದರೆ ಗೀರ್ವಾಣಿಯ ಕೃಪಾಕಟಾಕ್ಷದೊಂದಿಗೆ ನುಡಿಸುತ, ‘ತ’ ಎಂದರೆ ತನ್ಮಯತೆಯ ಅನಾವರಣಗೊಳಿಸುವ ಕಲೆ. ಸಂಗೀತ ಜಾತಿ, ಮತ ಬೇಧ-ಭಾವವಿಲ್ಲದಿರುವ ಕಲೆ. ಸಂಗೀತ ಎಲ್ಲರನ್ನೂ ತನ್ನತ್ತ ಸೆಳೆಯುತ್ತೆ. ಸಂಗೀತದ ಅರಿವಿನ ಬೆಳವಣಿಗೆಯ ಮೇಲೆಯೂ ಆಳವಾದ ಪ್ರಭಾವ ಬೀರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಸಂಗೀತವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದಂತಹ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಬಹುದು. ಇದು ಸಾಮಾಜಿಕ ಬೆಳವಣಿಯನ್ನು ಅಭಿವೃದ್ಧಿಪಡಿಸುತ್ತದೆ. ಸಂಗೀತ ಕೇಳುವುದರಿಂದ ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆ ದೂರವಾಗುತ್ತದೆ. ಸಂಗೀತಕ್ಕೆ ಮಾನಸಿಕ ಆರೋಗ್ಯ ವೃದ್ಧಿಪಡಿಸುವ ಗುಣ ಇದೆ. ಬಹುಶಃ ಸಂಗೀತದಷ್ಟು ಮನಸ್ಸಿಗೆ ಖುಷಿ ಕೊಡುವುದು ಬೇರೊಂದಿಲ್ಲ ಅಂತ ಹೇಳಬಹುದು. ಸ್ವರಾಲಯ ಸಂಗೀತ ಸಂಸ್ಥೆಯು ಸಂಗೀತದಂತಹ ದೈವಿಕ ಕಲೆಯನ್ನು ೧೯೯೦ರಿಂದ ೩೪ ವರ್ಷಗಳ ಕಾಲ ಬೆಳಿಸಿ ಪ್ರೋತ್ಸಾಹಿಸುತ್ತಿದೆ. ಸಾಧಕರು, ಕಲಾವಿದರನ್ನು ಗುರುತಿಸಿ, ವೇದಿಕೆಯನ್ನು ಕಲ್ಪಿಸಿ, ಗೌರವಿಸಿ ಬಿರುದುಗಳನ್ನು ನೀಡಿ ಸನ್ಮಾನಿಸಿದೆ ಎಂದು ಅವರು ಅಭಿಪ್ರಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಸ್ವರಾಲಯ ಅಧ್ಯಕ್ಷೆ ವಿದುಷಿ ಡಾ.ಸುಮ ಹರಿನಾಥ್ ಮಾತನಾಡಿ, ಇಂದಿಗೆ ನಮ್ಮ ಸ್ವರಾಲಯ ಸಂಗೀತ ಸಂಸ್ಥೆಗೆ ೩೪ ವರ್ಷ ಸಂದಿದೆ. ಸಾಮಾನ್ಯ ಮನುಷ್ಯರಿಗೆ ೩೪ ವರ್ಷವಾದರೆ ಅಯ್ಯೋ ೩೪ ವರ್ಷ ಆಗೋಯ್ತಾ? ಅಂತೀವಿ ಆದರೆ ನಮ್ಮ ಸಂಸ್ಥೆ ಇನ್ನೂ ಪುಟ್ಟ ಮಗು ತರ ಬೆಳೇತಾ ಇದೆ. ಹೀಗೆ ಇನ್ನೂ ಎತ್ತರಕ್ಕೆ ಬೆಳೆಯಬೇಕು ಅಂತ ಪದಾಧಿಕಾರಿಗಳ ಆಶಯ. ನಾವೆಲ್ಲ ಒಂದು ಮನೆ, ಕುಟುಂಬದ ತರ ಇದೀವಿ. ಪ್ರತಿ ವರ್ಷ ಕಾರ್ಯಕ್ರಮ ಮಾಡುವಾಗಲೂ ಮೂರು ತಿಂಗಳಿಂದ ಪೂರ್ವ ತಯಾರಿ ಮಾಡಿಕೊಳ್ಳುತ್ತೇವೆ. ಹಾಗೆ ಪದಾಧಿಕಾರಿಗಳೆಲ್ಲ ಸಹಕಾರ ಕೊಡುತ್ತಾ ಬಂದಿದ್ದಾರೆ. ಅವರೆಲ್ಲರ ಸಹಕಾರದಿಂದ ನಮ್ಮ ಸಂಸ್ಥೆಗೆ ೩೪ ವರ್ಷ ತುಂಬಿದೆ. ಪ್ರತಿ ವರ್ಷ ಒಬ್ಬೊಬ್ಬ ಗಣ್ಯ ವ್ಯಕ್ತಿಗಳನ್ನು ಕರೀತಾ ಬಂದಿದೀವಿ. ಒಬ್ಬರಿಗಿಂತ ಒಬ್ಬರು ಮೇದಾವಿಗಳು ಅಂತ ಅನಿಸುತ್ತೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಕು.ಅನಘ ಜಿ. ಪ್ರಾರ್ಥಿಸಿದರೆ ಸ್ವರಾಲಯದ ಕಾರ್ಯದರ್ಶಿ ಹೆಚ್.ಎಸ್.ಶ್ರೀಕಾಂತಾಮಣಿ ಎಲ್ಲರನ್ನೂ ಸ್ವಾಗತಿಸಿ, ನಿರೂಪಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕಿ ಶ್ರೀಮತಿ ಭಾನುನಿಶ್ವಲ್ ದಾಸರ ಪದಗಳ ಗಾಯನವನ್ನು ಪ್ರಸ್ತುತಪಡಿಸಿದರೆ, ಸಂಪ್ರದಾಯದ ಹಾಡುಗಳನ್ನು ಶ್ರೀಮತಿ ವಿದುಷಿ ಕಲ್ಪನಾ ಆನಂದ್ ಮತ್ತು ವೃಂದದವರು ನಡೆಸಿಕೊಟ್ಟರು. ಇವರಿಗೆ ವಯೋಲಿನ್‌ನಲ್ಲಿ ವಿದ್ವಾನ್ ಎಂ.ಆರ್.ಶ್ರೀಕಾಂತ್, ಮೃದಂಗದಲ್ಲಿ ಎಂ.ಆರ್.ಉದಯಕುಮಾರ್ ವಾದ್ಯ ಸಹಕಾರ ನೀಡಿದರು.

- Advertisement -
- Advertisement -

Latest News

ತತ್ವಬೋಧನೆಗೆ ಮಠಗಳು ಸಿದ್ಧವಾಗಬೇಕು – ಬಿಇಓ ಯಡ್ರಾಮಿ

ಸಿಂದಗಿ: ಆರ್ಥಿಕ ಸಬಲತೆಯ ಮಠಗಳಾಗದೇ ತತ್ವಭೋಧನೆಗೆ ಮಠಗಳು ಸಿದ್ಧವಾಗಬೇಕು. ಶಾಲೆಗಳಲ್ಲಿ ಶಿಸ್ತು ಮತ್ತು ಶಿಕ್ಷಣ ಕಲಿಯಬಹುದು ಮಠಗಳಿಂದ ಆಧ್ಯಾತ್ಮಿಕತೆ ಮತ್ತು ಸಂಸ್ಕಾರ ಸಿಗುವುದು ಅಲ್ಲದೆ ವಿದೇಶಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group