ಬೆಳಗಾವಿ ದಿ – ದಿ 3-8-2024 ರ ಶನಿವಾರದಂದು ಶಿಕ್ಷಕರ ಸಹಕಾರ ಸೊಸಾಯಿಟಿ ಧಾರವಾಡದಲ್ಲಿ ಜರುಗಿದ “ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು” ಇದರ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಅವಿರೋಧವಾಗಿ ಪರಿಷತ್ತಿಗೆ ನೂತನ ರಾಜ್ಯಾಧ್ಯಕ್ಷರಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಕ್ಷಕರು, ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಸಂಗಮೇಶ್ವರ ಖನ್ನಿನಾಯ್ಕರ (ಬೆಳಗಾವಿ ಜಿಲ್ಲೆ) ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಾಧ್ಯಕ್ಷರಾಗಿ ರಾಮಪ್ಪ ಹಂಡಿ (ಬಾಗಲಕೋಟಿ ಜಿಲ್ಲೆ)ಯವರನ್ನು ಉಪಾಧ್ಯಕ್ಷರಾಗಿ ವಿಜಯಕುಮಾರ (ತುಮಕೂರ ಜಿಲ್ಲೆ)ರವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಆರ್.ಎಸ್.ಹಿರೇಗೌಡರ(ಧಾರವಾಡ ಜಿಲ್ಲೆ) ರವರನ್ನು ಆಯ್ಕೆ ಮಾಡಲಾಯಿತು.
ಅವರಿಗೆ ಬೆಳಗಾವಿ ಜಿಲ್ಲೆಯ ಶಿಕ್ಷಕರ ಪರವಾಗಿ ಬೆಳಗಾವಿಯ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರು, ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಮಾಸ್ತಮರಡಿಯ ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಫಕೀರಪ್ಪ ಸುಣಗಾರ ರವರು ಅಭಿನಂದಿಸಿ ಅವರ ಅಧಿಕಾರ ಅವಧಿಯಲ್ಲಿ ಶಿಕ್ಷಕರ ಸಮಸ್ಯೆ ಗಳಿಗೆ ಸ್ಪಂದಿಸಿ ಉತ್ತಮ ಕಾರ್ಯ ಮಾಡಲೆಂದು ಆಶಿಸಿ ಅಭಿನಂದಿಸಿದ್ದಾರೆ, ಅವರ ಆಯ್ಕೆ ಬೆಳಗಾವಿ ಜಿಲ್ಲೆಯ ಶಿಕ್ಷಕರಿಗೆ ಅಭಿಮಾನ ತಂದಿದೆ ಎಂದಿದ್ದಾರೆ
ಪರಿಷತ್ತಿನ ಗೌರವಾಧ್ಯಕ್ಷರಾದ ಗುರು ತಿಗಡಿ ಯವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಪರಿಷತ್ತಿನ ಕೋಶಾಧ್ಯಕ್ಷರಾದ ಶಂಕರ ಘಟ್ಟಿ ಪೋಷಕರುಗಳಾದ ಗುರು ಪೋಳ, ಸಿ.ಎಂ ಕಿತ್ತೂರ , ಎಚ್.ಎಸ್.ಬಡಿಗೇರ, ಪರಿಷತ್ತಿನ ಹಾವೇರಿ ಜಿಲ್ಲಾಧ್ಯಕ್ಷರಾದ ಹೆಗ್ಗೇರಿ ಸರ್ ಮತ್ತು ಅವರ ಬಳಗ , ರಾಯಚೂರ ಜಿಲ್ಲಾಧ್ಯಕ್ಷರಾದ ಪರಸಪ್ಪ ಸರ್ ಹಾಗೂ ಅವರ ಬಳಗ ಮತ್ತು ವಿವಿಧ ಹಂತದ,ವಿವಿಧ ಸಂಘಗಳ ಪದಾಧಿಕಾರಿಗಳಾದ ಅಕ್ಬರ ಅಲಿ ಸೊಲ್ಲಾಪುರ, ಕಾಶಪ್ಪ ದೊಡವಾಡ, ಎಸ್.ಬಿ.ಶಿವಶಿಂಪಿ, ಎ.ಎಚ್.ನದಾಫ, ಎಸ್.ಎಸ್ ಧನಿಗೊಂಡ, ಶ್ರೀಮತಿ ಗಂಗವ್ವ ಕೋಟಿಗೌಡರ, ಶ್ರೀಮತಿ ಮಹಾದೇವಿ ದೊಡಮನಿ, ಶ್ರೀಮತಿ ರಂಜನಾ ಪಂಚಾಳ, ಶ್ರೀಮತಿ ಅನಸೂಯಾ ಡಬ್ಬು, ಚಂದ್ರಶೇಖರ ತಿಗಡಿ, ರಾಜು ಮಾಳವಾಡ, ರಮೇಶ್ ಸಣಮನಿ,ಹನುಮಂತ ಡೊಕ್ಕನವರ, ಸೇರಿದಂತೆ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರು, ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು,ವಿವಿಧ ಶಿಕ್ಷಕರ ಸಂಘಗಳ ಪ್ರತಿನಿಧಿಗಳು ಪರಿಷತ್ತಿನ ಪದಾಧಿಕಾರಿಗಳು ಹಾಗೂ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಗುರು ಬಳಗ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು
ಸಭೆಯ ಆರಂಭದಲ್ಲಿ ಸೇವಾ ನಿವೃತ್ತಿ ಹೊಂದಿದ ಪರಿಷತ್ತಿನ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ನಾರಾಯಣ ಸ್ವಾಮಿ ಚಿಂತಾಮಣಿ ಇವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಿ,ಗೌರವಿಸಲಾಯಿತು.