spot_img
spot_img

ವಚನಗಳು ಮನುಷ್ಯನ ಅರಿವಿಗೆ ಮಹಾ ಬೆಳಕು

Must Read

spot_img
- Advertisement -

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದ್ದ ಪ್ರೊ. ಶಾರದಮ್ಮ ಪಾಟೀಲ ಬದಾಮಿ ಇವರ ಶ್ರಾವಣ ಮಾಸದ ದತ್ತಿ ಉಪನ್ಯಾಸ ಕಾರ್ಯಕ್ರಮ ಎರಡನೆ ದಿನ ಮುಂದುವರೆಯಿತು.

ಕಾರ್ಯಕ್ರಮದ ಮೊದಲಿಗೆ ಶರಣೆ ವಿದ್ಯಾ ಮುಗ್ದುಮ್ ಅವರು ಸ್ವಾಮಿ ನೀನು ಶಾಶ್ವತ ನೀನು ಎನ್ನುವ ಶರಣರ ವಚನದೊಂದಿಗೆ ಸುಮಧುರವಾಗಿ ವಚನ ಪ್ರಾರ್ಥನೆ ಮಾಡಿದರು.

ನಂತರ ಡಾ. ಸರಸ್ವತಿ ಪಾಟೀಲ ಅವರು ಶ್ರಾವಣಮಾಸದ ಪ್ರಾಮುಖ್ಯತೆಯನ್ನು ಹೇಳುತ್ತಾ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಶರಣ-ಶರಣೆಯರನ್ನು ಪ್ರೀತಿಯಿಂದ ಸ್ವಾಗತಿಸಿ, ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವೇದಿಕೆಯ ಬಗೆಗೆ ಅತ್ಯಂತ ಅಭಿಮಾನದ ನುಡಿಗಳನ್ನಾಡಿದರು. ದತ್ತಿ ದಾಸೋಹಿಗಳಾದ ಶಾರದಮ್ಮ ಪಾಟೀಲ ಅವರ ಪರಿಚಯ ಮತ್ತು ಇಂದಿನ ಉಪನ್ಯಾಸಕರಾದ ಅಕ್ಕಮಹಾದೇವಿ ತೆಗ್ಗಿ ಅವರು, ಗಿರಿಜಾ ಮುಳುಗುಂದ ಅವರ ಪರಿಚಯವನ್ನು ಅತ್ಯಂತ ಆತ್ಮೀಯತೆಯಿಂದ ಮಾಡಿಕೊಟ್ಟರು.

- Advertisement -

ಮೊದಲಿಗೆ ಗಿರಿಜಾ ಮುಳುಗುಂದ ಅವರು ಶರಣೆ ಅಕ್ಕನಾಗಮ್ಮ ಅವರ ಬಗೆಗೆ ಹೇಳುತ್ತಾ , ಕ್ರಾಂತಿಗಂಗೋತ್ರಿ ಅಕ್ಕನಾಗಲಾoಬಿಕೆ ಎಂಬ ಬಿರುದು ಪಡೆದ ಅಕ್ಕನಾಗಮ್ಮ ಬಸವಣ್ಣನವರ ಅಕ್ಕ ಮತ್ತು ಪ್ರತಿಹೆಜ್ಜೆಯಲ್ಲಿ ಅವರನ್ನು ಪ್ರೋತ್ಸಾಹಿಸುತ್ತಿದ್ದರು ಎನ್ನುವುದನ್ನು ಅಭಿಮಾನದಿಂದ ಹೇಳಿದರು. ತಮ್ಮ ತಮ್ಮ ಅನುಭವದಿಂದ ಮೂಡಿಬಂದ ಅನುಭಾವದ ಚಿಂತನೆಯನ್ನು ವಚನಗಳ ಮೂಲಕ ಹಂಚಿಕೊಳ್ಳಲು ಅನುಭವ ಮಂಟಪಕ್ಕೆ ಪ್ರತಿನಿತ್ಯ ಬರುವ ಎಲ್ಲ ಶರಣರ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು, ಅವರಿಗೆ ಬಸವಣ್ಣನವರೇ ತಂದೆ, ಗುರು,
ಧರ್ಮದ ನೇತಾರ ಎಲ್ಲವೂ ಆಗಿದ್ದರು. ವಿಷಯಾದಿ ವಿಷಯಗಳನ್ನು ತ್ಯಜಿಸಬೇಕು, ಸದ್ಗುಣ ಸಂಪನ್ನರಾಗಿ ಸದಾಚಾರಿಯಾಗಬೇಕು, ಭವ ಬಂಧನವನ್ನು ಕಳೆದುಕೊಳ್ಳುವ ದಾರಿ ಗುರು ತೋರಿಸುತ್ತಾನೆ, ಯಾರು ಏನೇ ಅಂದರೂ ನಮ್ಮ ಕಾಯಕವನ್ನು ನಾವು ಮಾಡುತ್ತಾ ಹೋಗಬೇಕು, ದೇವನೊಬ್ಬನೆ ನಮ್ಮ ಸಂಗಾತಿ, ಸಾಧನೆಯಿಂದ ಅವನಲ್ಲಿ ಕೂಡಿಕೊಳ್ಳಬೇಕು ಎನ್ನುವ ಅವರ ಹಲವಾರು ನುಡಿಗಳ ಮೇಲೆ ಬೆಳಕು ಚೆಲ್ಲಿದರು.
ಕಡೆಯವರೆಗೂ ವಚನಕಟ್ಟುಗಳ ಸಂರಕ್ಷಣೆಗಾಗಿ ಹೋರಾಡಿದರು, ಮಗ ಚೆನ್ನಬಸವಣ್ಣ, ಗಂಗಾoಬಿಕೆ ಮತ್ತು ಹಲವಾರು ಶರಣರು ಕಣ್ಣ ಮುಂದೆ ಮಡಿದರೂ ಅಕ್ಕನಾಗಮ್ಮ ಕಡೆಯವರೆಗೂ ವೀರತನದಿಂದ ಹೋರಾಡಿದ ಮಹಿಳೆ ಎನ್ನುವುದನ್ನು ಅತ್ಯಂತ ಅಭಿಮಾನದಿಂದ ನಮಗೆಲ್ಲ ತಿಳಿಸಿಕೊಟ್ಟರು. ಎನ್ನ ಭವದ ಬೇರು ಹರಿದಿತ್ತಯ್ಯ ಮತ್ತು ಮನದೊಡೆಯ ಮಹಾದೇವ ಎನ್ನುವ ಅವರ ವಚನ ವಿಶ್ಲೇಷಣೆಗಳನ್ನು ಅರ್ಥಗರ್ಭಿತ ವಾಗಿ ಮಾಡಿದರು.

ಇನ್ನೊಬ್ಬ ಶರಣೆ ಅಕ್ಕಮಹಾದೇವಿ ತೆಗ್ಗಿ ಅವರು ಶರಣ ಚಂದಿಮರಸರ ಬಗೆಗೆ ಹೇಳುತ್ತಾ, ಅವರ ವಚನಗಳ ಅಂಕಿತನಾಮ ಸಿಮ್ಮಲಿಗೆಯ ಚೆನ್ನರಾಮ, ಇವರ ವಚನಗಳು ಸರಳವೂ, ಅರ್ಥಪೂರ್ಣವೂ, ಭಾವಪೂರ್ಣವೂ ಆಗಿದ್ದವು ಎನ್ನುವುದನ್ನು ನೆನಪು ಮಾಡಿಕೊಟ್ಟರು.ಕೆಂಭಾವಿಯ ಅರಸರಾಗಿದ್ದ ಚಂದಿಮರಸರು ಒಂದು ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲಿ ಅರಮನೆಯನ್ನು ಬಿಟ್ಟು ನಡೆದು ಎಷ್ಟು ದೂರ ಹೋದರೆಂದರೆ , ಈಗಿನ ಬಸವನ ಬಾಗೇವಾಡಿ ತಾಲೂಕಿನ ಚಿಮ್ಮಲಿಗೆವರೆಗೆ ಹೋದರು. ಅಲ್ಲಿ ನಿಜಗುಣ ದೇವರಿಂದ ಲಿಂಗದೀಕ್ಷೆ ಪಡೆದು ಷಟ್ ಸ್ಥಲ ಮಾರ್ಗ ಪಥಿಕರಾದರು.ಅಧ್ಯಾತ್ಮ ಅಧಿಪತಿಯಾದರು ಎಂದು ತಿಳಿಸಿದರು.

ತಮ್ಮ ಅರಿವೇ ತಮಗೆ ಗುರು, ಅಂಗ -ಲಿಂಗ ಸಾಮರಸ್ಯ, ಯಾವುದು ತಪ್ಪು, ಯಾವುದು ಸರಿ ಎಂದು ತಿಳಿದು ನಡೆಯಬೇಕು, ಪಾರಮಾರ್ಥ ಮತ್ತು ಸಂಸಾರ ಎರಡನ್ನೂ ಸರಿಸಮನಾಗಿ ತೂಗಿಸಿಕೊಂಡು ಹೋಗಬೇಕು, ಅವಿಚಾರಾತ್ಮಕ ಘಟನೆಗಳು ಜೀವನದಲ್ಲಿ ನಡೆಯುತ್ತವೆ, ಅವನ್ನೆಲ್ಲ ಸರಿದೂಗಿಸಿಕೊಂಡು ಹೋಗಬೇಕು ಎನ್ನುವ ಅವರ ವಚನಗಳ ಅರ್ಥದ ಸಾರಾಂಶವನ್ನು ನಮಗೆಲ್ಲ ಮನದಟ್ಟು ಮಾಡುತ್ತಾ, ಅತ್ಯಂತ ಅರ್ಥಪೂರ್ಣವಾಗಿ ತಮ್ಮ ಉಪನ್ಯಾಸ ನೀಡಿದರು.

- Advertisement -

ಇವತ್ತಿನ ಮಾರ್ಗದರ್ಶಕರಾದ ಕೆ. ಸಿ. ಪಾಟೀಲ ಸರ್ ಅವರು ಚಿಕ್ಕದಾಗಿ ಚೊಕ್ಕದಾಗಿ ಇವತ್ತಿನ ವಿಷಯದ ಬಗೆಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ನಂತರ ನಮ್ಮ ವಚನ ಅಧ್ಯಯನ ವೇದಿಕೆಯ ರೂವಾರಿಯಾದ ಡಾ. ಶಶಿಕಾಂತ ಪಟ್ಟಣ ಅವರು ಮಾತನಾಡಿ, ಅಕ್ಕನಾಗಮ್ಮನವರ ಹಾಗೆ ಇಂದಿನ ಸಹೋದರಿಯರು ವಚನದ ಉಳಿವಿಗಾಗಿ ಸತತವಾಗಿ ಅಧ್ಯಯನ ಶೀಲರಾಗಿ, ವೈಚಾರಿಕತೆಯ ನಿಲುವಿನಲ್ಲಿ ತಮ್ಮನ್ನು ಗಟ್ಟಿಗೊಳಿಸಬೇಕು, ಕನ್ನಡ ನಶಿಸಿಹೋಗುತ್ತಿರುವ ಭಾಷೆ ಆಗಲಾರದಂತೆ ನೋಡಿಕೊಳ್ಳಬೇಕು ಎನ್ನುವ ಕಿವಿ ಮಾತನ್ನು ಹೇಳಿದರು. ಪ್ರಕ್ಷಿಪ್ತ ವಚನಗಳ ಪರಿಷ್ಕರಣೆಗೆ ತಾವೆಲ್ಲರೂ ಕೈಜೋಡಿಸಬೇಕು ಎನ್ನುವ ಕಳಕಳಿಯ ವಿನಂತಿ ಮಾಡಿಕೊಂಡರು.

ನಂತರ ಸಂವಾದದಲ್ಲಿ ಪಾಲ್ಗೊಂಡ ಪೊಲೀಸ ಪಾಟೀಲ, ರತ್ನಕ್ಕ ಕಾದ್ರೊಳ್ಳಿ, ಶಿವಾನಂದ ಹಾಲಭಾವಿ  ಮತ್ತು ನಾಗರಾಜ ಕೋಟಗಾರ ಎಲ್ಲರೂ ಇವತ್ತಿನ ಉಪನ್ಯಾಸದ ಬಗೆಗೆ ಅಭಿಪ್ರಾಯ ತಿಳಿಸಿ , ಪಟ್ಟಣ ಅವರ ಜೊತೆಗೆ ಪ್ರತಿಯೊಂದು ಕೆಲಸಕ್ಕೆ ತಾವು ಬೆಂಬಲ ನೀಡುತ್ತೇವೆ ಎನ್ನುವ ಭರವಸೆ ನೀಡಿದರು.

ನಂತರ ಶರಣೆ ತ್ರಿವೇಣಿ ವಾರದ ಅವರು ಶರಣು ಸಮರ್ಪಣೆ ಮಾಡಿದರು. ಕೊನೆಯಲ್ಲಿ ಬಬಿತಾ ಪಂಚಣ್ಣವರ ಅವರು ಸುಮಧುರವಾದ ವಚನಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಇವತ್ತಿನ ಕಾರ್ಯಕ್ರಮ ನಿರ್ವಹಣೆಯನ್ನು ಡಾ. ಶೈಲಜಾ ಪವಾಡಶೆಟ್ಟರ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಇವತ್ತಿನ ಕಾರ್ಯಕ್ರಮದಲ್ಲಿ ಸಂಯೋಜಕರಾಗಿ ಪಾಲ್ಗೊಂಡ ಡಾ. ಶುಭಾರಾಣಿ ಕಡಪಟ್ಟಿ, ಶರಣೆ ಅನ್ನಪೂರ್ಣ ಅಗಡಿ, ಡಾ. ಸಾವಿತ್ರಿ ಕಮಲಾಪುರ, ಡಾ. ವೀಣಾ ಬಿರಾದಾರ, ಡಾ. ವೀಣಾ ಎಲಿಗಾರ ಮತ್ತು ಸುಧಾ ಗಂಜಿ ಅವರಿಗೆ, ತಾಂತ್ರಿಕ ಸಹಾಯ ನೀಡಿದ ಡಾ. ದಾನಮ್ಮ ಝಳಕಿ ಅವರಿಗೆ, ಸಂಘಟಿಕರಾಗಿ ಕೆಲಸ ಮಾಡುತ್ತಿರುವ ಪ್ರೊ ಶಾರದಮ್ಮ ಪಾಟೀಲ,ಶರಣೆ ಗೌರಮ್ಮ ನಾಶಿ ಮತ್ತು ಶರಣೆ ಸುಧಾ ಪಾಟೀಲ್ ಅವರಿಗೆ, ಇವತ್ತಿನ ಉಪನ್ಯಾಸಕರಾದ ಶರಣೆ ಅಕ್ಕಮಹಾದೇವಿ ತೆಗ್ಗಿ, ಶರಣೆ ಗಿರಿಜಾ ಮುಳುಗುಂದ ಅವರಿಗೆ ಕೆ. ಸಿ. ಪಾಟೀಲ್ ಸರ್ ಅವರಿಗೆ ಮತ್ತು ಕಾರ್ಯಕ್ರಮ ನಡೆಸಿಕೊಟ್ಟ ಬಳಗದ ಎಲ್ಲ ಸಹೋದರಿಯರಿಗೆ, ಎಲ್ಲಕ್ಕಿಂತ ಹೆಚ್ಚು ಶ್ರಾವಣ ಮಾಸದಲ್ಲಿ ಇಂಥಹ ಅನುಭವಪೂರ್ಣ ಉಪನ್ಯಾಸಗಳನ್ನು ಏರ್ಪಡಿಸಿ ನಮ್ಮೆಲ್ಲರ ಜ್ಞಾನವನ್ನು ಇನ್ನೂ ಎತ್ತರದ ಮಟ್ಟಕ್ಕೇರಿಸುತ್ತಿರುವ ಡಾ. ಶಶಿಕಾಂತ ಪಟ್ಟಣ ಸರ್ ಅವರಿಗೆ ಅನಂತ ಧನ್ಯವಾದಗಳು.

ಸುಧಾ ಪಾಟೀಲ, ವಿಶ್ವಸ್ಥರು, ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ, ಪುಣೆ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group