ಕಲ್ಲೋಳಿ : ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭ

Must Read

ಮೂಡಲಗಿ: ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನ 2024- 25ನೇ ಸಾಲಿನ ವಿವಿಧ ವೇದಿಕೆಗಳ ಕಾರ್ಯ ಚಟುವಟಿಕೆಯ ಉದ್ಘಾಟನೆ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಇವರ ದೂರ ಸಂಪರ್ಕ ಕಲಿಕಾ ಅಧ್ಯಯನ ಕೇಂದ್ರ ಉದ್ಘಾಟನೆ ಮತ್ತು ಡಾ. ಸುರೇಶ್ ಹನಗಂಡಿ ಅವರ ಹಸ್ತಪ್ರತಿ ಮತ್ತು ಗ್ರಂಥ ಸಂಪಾದನೆ ಒಂದು ಚಿಂತನೆ ಕೃತಿ ಬಿಡುಗಡೆ ಸಮಾರಂಭ ಶನಿವಾರ ದಿನಾಂಕ 17-8-2024 ರಂದು ಮುಂಜಾನೆ 10 ಗಂಟೆಗೆ ಜರುಗಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಆರ್‌ಇ ಸಂಸ್ಥೆಯ ಚೇರಮನ್ನರಾದ  ಬಸಗೌಡ ಶಿವಗೌಡ ಪಾಟೀಲ ವಹಿಸಿಕೊಳ್ಳಲಿದ್ದಾರೆ. ಉದ್ಘಾಟಕರಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರಗಳ ಡೀನರಾದ ಪ್ರೊ. ಎಂ ರಾಮನಾಥಂ ನಾಯುಡು,  ಮುಖ್ಯ ಅತಿಥಿಗಳಾಗಿ ಬೆಳಗಾವಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪಿ.ಜಿ. ಕೆಂಪಣ್ಣವರ ಆಗಮಿಸುವರು. ಸಂಸ್ಥೆಯ ಸರ್ವ ಆಡಳಿತ ಮಂಡಳಿ ಉಪಸ್ಥಿತರಿರುವರು.

ಮಧ್ಯಾಹ್ನ ೨ ಗಂಟೆಗೆ ೨೦೨೩-೨೪ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್. ಹಾಗೂ ವಿವಿಧ ವೇದಿಕಗಳ ಕಾರ್ಯ ಚಟುವಟಿಕೆಗಳ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭ ಜರುಗಲಿದ್ದು, ಸಂಸ್ಥೆಯ ಚೇರಮನ್ನರಾದ  ಬಸಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರವೀಂದ್ರನಾಥ ಕದಮ್ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ತಿಳಿಸಿದ್ದಾರೆ.

Latest News

ಅಲ್ಲಮರ ವಚನ ವಿಶ್ಲೇಷಣೆ ; ಉಳಿ ಮುಟ್ಟದ ಲಿಂಗ

ಎನಗೊಂದು ಲಿಂಗ ನಿನಗೊಂದು ಲಿಂಗ.          ಮನೆಗೊಂದು ಲಿಂಗವಾಯಿತ್ತು,                   ...

More Articles Like This

error: Content is protected !!
Join WhatsApp Group