ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ ಇವರಿಂದ ೭೮ ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ರಾಜ್ಯ ಮಟ್ಟದ ದೇಶಭಕ್ತಿ ಗೀತೆ ಕಾರ್ಯಕ್ರಮವನ್ನು ಗೂಗಲ್ ಮೀಟ್ ನಲ್ಲಿ ಏಪ೯ಡಿಸಲಾಗಿತ್ತು
ಸಂಘದ ಸಂಸ್ಥಾಪಕ ಅಧ್ಯಕ್ಷರು ಮಧುನಾಯ್ಕ ಲಂಬಾಣಿಯವರು ಉದ್ಘಾಟಿಸಿ ಮಾತನಾಡಿ ನಮಗೆ ದೊರಕಿರುವ ಸ್ವಾತಂತ್ರ್ಯ ಅನೇಕ ದೇಶಪ್ರೇಮಿಗಳ ತ್ರ್ಯಾಗ ಬಲಿದಾನದ ಫಲ. ನಾವು ದೇಶ ಪ್ರೇಮ ಬೆಳೆಸಿಕೊಂಡು ದೇಶದ ಐಕ್ಯತೆಗೆ ಶ್ರಮಿಸಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ. ರಾ. ಬ. ಸಂಘದ ಉಪಾಧ್ಯಕ್ಷ ರವೀಂದ್ರ ಡಿಗ್ಗಿ ಕನಾ೯ಟಕ ರಾಜ್ಯ ಬರಹಗಾರರ ಸಂಘವು ನಿರಂತರವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ನಾಡು ನುಡಿ ಸೇವೆ ಮಾಡುತ್ತಾ ಬಂದಿರುವುದು ಅಬಿನಂದನೀಯ ಎಂದರು.
ಗೌರವ ಅಧ್ಯಕ್ಷರು ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ದೇಶಪ್ರೇಮವನ್ನು ಬಿಂಬಿಸುವ ದೇಶಭಕ್ತಿ ಗೀತೆಗಳು ದೇಶದ ಬಗ್ಗೆ ಅಭಿಮಾನ, ಸ್ವಾಭಿಮಾನ ಮೂಡಿಸುವಲ್ಲಿ ಫಲದಾಯಕವಾಗಿವೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ದೇಶಭಕ್ತಿ ಗೀತೆಗಳು ತಮ್ಮದೇ ಪ್ರಭಾವ ಬೀರಿ ಸ್ವಾತಂತ್ರ್ಯ ಹೋರಾಟದಲ್ಲಿ ಕೆಚ್ಚು ತುಂಬಿದ್ದವು ಎಂದರು.
ರಾಜ್ಯಾದ್ಯಂತ 40 ಮಂದಿ ಗಾಯಕರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಹನುಮಂತನಾಯ್ಕ ಸಿ ನೆರವೇರಿಸಿದರು. ಪ್ರಾರ್ಥನೆ ಶ್ರೀಮತಿ ಭಾಗ್ಯ ನಾಗರಾಜ ಮತ್ತು ಸ್ವಾಗತ ಕು. ದೀಪಾಬಾಯಿ ಮಾಡಿದರು.