- Advertisement -
ಕನಕ ಕೃಷ್ಣರ ಒಗೆತನ
ಕೃಷ್ಣ ಗೊಲ್ಲ ಕನಕ ಕುರುಬ
ಗೋವುಗಳಿಗೆ ಕೃಷ್ಣನ ಕೊಳಲೆಂದರೆ ಜೀವ
ಕುರಿಗಳಿಗೆ ಕನಕನ ಹಾಡುಗಳೆಂದರೆ ಪ್ರಾಣ
ಒಗೆತನಕೆ ಭೇದವಿಲ್ಲ ಭಕ್ತಿಗೆ ಕುಂದಿಲ್ಲ
ಕನಕ ಕೋಣಮಂತ್ರ ಜಪಿಸಿ
ಹೆಬ್ಬಂಡೆ ಸರಿಸಿ ವ್ಯಾಸರಾಯರ ಪ್ರೀತಿಪಾತ್ರನಾದ
ಕೃಷ್ಣ ಗುರುಗಳ
ಕಳೆದು ಹೋದ ಸಂತಾನವ ಮರಳಿಸಿ ಸಾಂದಿಪನಿ ಗುರುಗಳ ಪ್ರಿಯನಾದ
ಭಕ್ತಿಗೆ ಕುಂದಿಲ್ಲ
- Advertisement -
ಕನಕ ಭಕ್ತಿಯಿಂದ ಹಾಡಿದ
ಕೃಷ್ಣ ಪಶ್ಚಿಮದಿ ತಿರುಗಿ
ಅವಗೆ ದಶ೯ನ ಕೊಟ್ಟ
ಭಕ್ತಿಗೆ ಕುಂದಿಲ್ಲ
ಕನಕ ರಾಯರಿಗೆ ಸಾಸಿವೆ ಕೊಟ್ಟ
ಕೃಷ್ಣನ ನೈವೇದ್ಯಕೆ ಗಂಜಿ ಕೊಟ್ಟ
ಕೃಷ್ಣ ಪ್ರೀತನಾದ
ಭಕ್ತಿಗೆ ಕುಂದಿಲ್ಲ
ಕುಲ ಕುಲ ಕುಲವೆಂದು
ದೂರದಿರೋಣ
ಕನಕನಂತೆ ಭಕ್ತಿಗೈದು
ಭಗವಂತನ ಒಲಿಸೋಣ.
- Advertisement -
ರಾಧಾ ಶಾಮರಾವ