- Advertisement -
ದಿನಾಂಕ ೫ ರ ಸೆಪ್ಟೆಂಬರ ೨೪ ರಂದು ಕಟೀಲಿನ ದೇವಾಲಯದ ಎದುರಿನ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಏಳನೇ ಶಿಕ್ಷಕ ಸಾಹಿತಿಗಳ ಸಮ್ಮೇಳನ ನಡೆಯಲಿದೆ.
ಕಟೀಲು ಹರಿನಾರಾಯಣ ಅಸ್ರಣ್ಣನವರು ದೀಪ ಬೆಳಗಿಸಿ ಉದ್ಘಾಟಿಸುವ ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಹರಿಕೃಷ್ಣ ಪುನರೂರು ಆಗಮಿಸಲಿದ್ದು ಹಿರಿಯ ಶಿಕ್ಷಕ ಹೊಸಕೋಟೆ ಶ್ರೀಕಾಂತ್ ಕೆ.ವಿ ಸರ್ವಾಧ್ಯಕ್ಷತೆ ವಹಿಸಲಿರುವರು. ಪರಿಷತ್ತಿನ ಮುಖ್ಯಸ್ಥ ಕೃಷ್ಣ ಮೂರ್ತಿ ಕುಲಕರ್ಣಿ ಮತ್ತು ಜಯಾನಂದ ಪೆರಾಜೆ, ಪ್ರೊ ಜಿ.ಯು ನಾಯಕ ಉಪಸ್ಥಿತ ರಿರುವರು.
ಇದೇ ವೇಳೆ ಮಂಗಳೂರಿನ ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ ಡಾ ಸುರೇಶ ನೆಗಳಗುಳಿ ಸಹಿತ ಹಲವರಿಗೆ “ಚುಟುಕು ಚಿನ್ಮಯಿ” ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ