spot_img
spot_img

ಸಾಂಪ್ರದಾಯಿಕ ಯಶಸ್ಸಿಗಾಗಿ ಉಸಿರಾಡುವ ಹೃದಯವಂತ ಸಂಘಟಕ ಸಾಹಿತಿ ಇಂಗಳಗಿ ದಾವಲಮಲೀಕ

Must Read

- Advertisement -

ಇಂಗಳಗಿ ದಾವಲಮಲೀಕ ಬಡತನದಲ್ಲಿ ಬೆಳೆದು ತಮ್ಮ ಸ್ವ ಪ್ರತಿಭೆಯಿಂದ ಮೇಲ್ದರ್ಜೆಗೆ ಏರಿ ಎಲ್ಲರ ಪ್ರೀತಿಗೆ ಪಾತ್ರನಾದ ಯುವಕ. ಟೀಪುಸಾಬ ಇಂಗಳಗಿ ತಾಯಿ ಶ್ರೀಮತಿ ಮಮತಾಜ್ ಇವರ ಜೇಷ್ಠ ಪುತ್ರ.

ಸಂಘಟನೆ ವಿಷಯ ಬಂದಾಗ ಸಮಯ ಪ್ರಜ್ಞೆ ಜೊತೆಗೆ ಇಡೀ ಕಾರ್ಯಕ್ರಮದ ಯಶಸ್ಸಿಗಾಗಿ ಉಸಿರಾಡುವ ಹೃದಯವಂತ ಸಂಘಟಕ.ಸದಾ ನಗುನಗುತ್ತ ಎಲ್ಲವನ್ನೂ ಸ್ವೀಕರಿಸುವ ತೆರೆದ ಹೃದಯ ಇವರದು.ಸದಾಕಾಲಕ್ಕೂ ಕ್ರಿಯಾಶೀಲತೆ ಇವರ ಬದುಕಿನ ಹೆಚ್ಚುಗಾರಿಕೆ.ಸಾಹಿತ್ಯ ಸಂಘಟನೆ ವಿಷಯದಲ್ಲಿ ಏನೇ ಮಾಹಿತಿ ಕೇಳಿದರು ನಮ್ಮ ನಿರೀಕ್ಷೆಗೂ ಮೊದಲೇ ಒದಗಿಸುವ ಶ್ರದ್ದೆ,ವಿಧೇಯತೆ ಎಲ್ಲರಿಗೂ ಅಚ್ಚುಮೆಚ್ಚು.

ಕವಿಗೋಷ್ಠಿಗೆ ಇವರದೇ ಮೊದಲ ಹೆಸರು. ಆದರೆ ಪದ್ಯ ಓದುವುದು ಮಾತ್ರ ಎಲ್ಲರದೂ ಮುಗಿದ ಮೇಲೆ. ಒಮ್ಮೊಮ್ಮೆ ಅವಕಾಶವಿಲ್ಲದೆ ಕಾರ್ಯಕ್ರಮ ನಿರೂಪಣೆ ಮಾಡಿ ಸಮಾಧಾನ ಮಾಡಿಕೊಳ್ಳುವ ಮುಕ್ತ ಮನಸ್ಸು ದಾವಲಮಲೀಕನದು.

- Advertisement -

ಧರ್ಮದಿಂದ ಮುಸ್ಲಿಂ ಸಮುದಾಯದ ಹುಡುಗನಾಗಿದ್ದರೂ ರಾಮಾಯಣ, ಮಹಾಭಾರತ ಎಲ್ಲವೂ ಕರಗತ.ಭಗವದ್ಗೀತೆ ಶ್ಲೋಕಗಳನ್ನು ಯಾವಾಗಲೂ ಉಚ್ಚರಿಸುವ ಇವರು ಚಿಕ್ಕ ವಟುವಿನಂತೆ ಕಾಣುತ್ತಾನೆ.ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಉತ್ತಮ ಸ್ನೇಹ ಭಾವ. ಮಕ್ಕಳಲ್ಲಿ ಮಗುವಾಗಿ ಕಲಿ ನಲಿ ಸಿದ್ದಾಂತ ಬೆಸೆದುಕೊಂಡು ಆದರ್ಶತೆ ಮೆರೆದಿದ್ದಾರೆ.

ಯುವ ಜನತೆ ಹೇಳಿಕೊಳ್ಳಲು ಒಂದು ಉದ್ಯೋಗ ಕೈಯಲ್ಲಿ ನಾಲ್ಕು ಕಾಸು ಇದ್ದರೆ ಪ್ರಪಂಚ ಹೋಗಲಿ ,ತನ್ನವರು ತನ್ನ ಕಾಯಕ ನಿಷ್ಠೆಯನ್ನು ಮರೆತು ಯಾವುದೋ ಕೆಟ್ಟ ವ್ಯಸನಕ್ಕೆ ಬಲಿ ಆಗುತ್ತಿರುವ ಸಹಜ ಸಂಗತಿಯನ್ನು ನಾವು ಪ್ರತಿನಿತ್ಯ ನೋಡುತ್ತೇವೆ. ಆದರೆ ವೃತ್ತಿಯ ಜೊತೆಗೆ ಸಾಹಿತ್ಯದ ಗೀಳು,ರಚನಾತ್ಮಕ ಬರವಣಿಗೆಯಲ್ಲಿ ಕನ್ನಡ ನಾಡು ನುಡಿಗಾಗಿ ಸದಾ ತನ್ನುಳಿದ ಸಮಯವನ್ನು ವ್ಯರ್ಥ ಮಾಡದೇ ಸಮಾಜ ಮುಖಿ ಕೆಲಸದಲ್ಲಿ ಅನೇಕ ಸಂಘ ಸಂಸ್ಥೆಗಳಲ್ಲಿ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ರಾಜ್ಯಪಾಲರ ಪದಕ ಮತ್ತು ರಾಷ್ಟ್ರ ಪತಿ ಪದಕ ಪಡೆದ ಸಾಧನೆ ಇವರದು.

ವಿಶಿಷ್ಟ ವ್ಯಕ್ತಿಗಳು, ವಾಸ್ತುಶಿಲ್ಪ, ದೇಶ ವಿದೇಶಗಳ ನಾಣ್ಯಗಳ ಸಂಗ್ರಹ, ಅಂಚೆಚೀಟಿ ಸಂಗ್ರಹ ವ್ಯಕ್ತಿ ಸಂಪುಟ ಸಂಗ್ರಹ, ತಂತ್ರಜ್ಞಾನ,ಜ್ಞಾನ ಪೀಠ ಪುರಸ್ಕೃತರು,ಇಂತಹ ಅನೇಕ ಮಹನೀಯರ ಮತ್ತು ಐತಿಹಾಸಿಕ ಮೆರಗು ನೀಡುವ ವಸ್ತುಗಳನ್ನು ಕಲೆಹಾಕಿದ ಇವರ ಸಂಗ್ರಹಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇವರ ಈ ಸಾಧನೆ ಇಂದು “ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್” ದಾಖಲೆಯನ್ನು ಸಹ ಮಾಡಿದ್ದಾರೆ. ಅಲ್ಲದೆ ಅನೇಕ ರಾಜ್ಯ,ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು,ಸನ್ಮಾನಗಳು ಇವರನ್ನು ಅರಸಿ ಬಂದಿವೆ.ಸಾವಿರಾರು ಕಾರ್ಯಕ್ರಮ ನಿರೂಪಣೆ ಮಾಡಿದ ಇವರು ಉತ್ತಮ ನಿರೂಪಕರು ಹೌದು.ಏಳು ಬಾರಿ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ ವಿಜೇತ ಇವರು ಅತ್ಯಂತ ಸರಳ ಜೀವಿ ಸದಾಕಾಲವೂ ಚಟುವಟಿಕೆಯಿಂದ ಕೂಡಿದ ಪಾದರಸದಂತೆ ಕಾರ್ಯತತ್ಪರತೆಯನ್ನು ಹೊಂದಿದ್ದಾರೆ.

- Advertisement -

ಹೀಗೆ ದಾವಲಮಲೀಕ ಇಂಗಳಗಿ ಎನ್ನುವವರು ಒಂದು ವಿಕಿಪೀಡಿಯ ಇದ್ದಂತೆ ಅವರ ಓದುವ ಕೊಠಡಿಯಲ್ಲಿ ಸದಾ ಪುಸ್ತಕದ ಹೊರೆಯಿರುತ್ತದೆ.ಅದೊಂದು ದೊಡ್ಡ ಸಂಗ್ರಹಣಾ ಕೊಠಡಿ.ಯಾವ ಕೇಂದ್ರ ಗ್ರಂಥಾಲಯಕ್ಕೂ ಕಡಿಮೆ ಇಲ್ಲದ ಗ್ರಂಥಗಳಿವೆ. ಸರಿ ಸುಮಾರು ೧೩೦೦ ಪುಸ್ತಕಗಳ‌ ಸ್ವಂತ ಗ್ರಂಥಾಲಯ.

ಪದವಿ ಪಡೆದ ವಿದ್ಯಾರ್ಥಿಗಳು ಇಲ್ಲಿ ಪ್ರತಿನಿತ್ಯ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಿಕೊಳ್ಳಲು ಬರುತ್ತಾರೆ. ಏನನ್ನಾದರೂ ಮಾಡುತ್ತಿರುವ ಇವರು ತಮ್ಮ ಸಮಯವನ್ನು ವ್ಯರ್ಥ ಮಾಡಬಾರದೆಂದು ಹೇಳುತ್ತಾರೆ. ನಮ್ಮೊಂದಿಗೆ ಮಾತನಾಡುತ್ತಲೇ ಒಂದು ಕೆಲಸ ಮಾಡುತ್ತಾರೆ. ಅವರ ಕೊಠಡಿಗೆ ಒಮ್ಮೆ ಭೇಟಿ ನೀಡಬೇಕು ಎಂದೆನಿಸದು. ಅವರ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೂ ಸಾಧಕರ ಪರಿಚಯದ ಲೇಖನಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.

ಶ್ರೀಮತಿ ಗಂಗಾ ಕೆ ಎಮ್‌
ಹವ್ಯಾಸಿ ಬರಹಗಾರರು
ಯಕ್ಷಗಾನ ಕಲಾವಿದರು
ಅಂಗನವಾಡಿ ಕಾರ್ಯಕರ್ತೆ
ಸುಳ್ಳಳ್ಳಿ ತಾ. ಸಾಗರ

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group