ಕ್ರೀಡಾಕೂಟದಲ್ಲಿ ಬೂದಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

0
428

ಬಾಲಕರ ಖೋಖೋ ಮತ್ತು ರಿಲೇ ತಾಲೂಕಾ ಮಟ್ಟಕ್ಕೆ ಆಯ್ಕೆ

 

ಬೈಲಹೊಂಗಲ: 2024-25 ನೇ ಸಾಲಿನ ಬೆಳವಡಿ ಪೂರ್ವ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ ಖೋಖೋ ಹಾಗೂ 4×400 ಮೀ. ರಿಲೇ ತಂಡಗಳು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿವೆ. ಮುತ್ತುರಾಜ ಜೋಗಿಗುಡ್ಡ (1500 ಮೀ ಪ್ರಥಮ, 800 ಮೀ. ಪ್ರಥಮ, ತ್ರಿವಿಧ ಜಿಗಿತ ಪ್ರಥಮ) ಸ್ಥಾನ ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾನೆ.

ಬಾಲಕರ ವಿಭಾಗದಲ್ಲಿ ಕಾರ್ತಿಕ ಕುರಿ (100 ಮೀ ಓಟ ಪ್ರಥಮ), ಮಲ್ಲಪ್ಪ ದಳವಾಯಿ (400 ಮೀ ಓಟ ದ್ವಿತೀಯ), ಕಲ್ಮೇಶ ಗುಡ್ಡದ (1500 ಮೀ ಓಟ ದ್ವಿತೀಯ, ಹರ್ಡಲ್ಸ್ ದ್ವಿತೀಯ, ತ್ರಿವಿಧ ಜಿಗಿತ ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಲಕ್ಷ್ಮಿ ಶೀಗಿಹಳ್ಳಿ (400 ಮೀ  ಓಟ ಪ್ರಥಮ), ದೀಪಾ ಹೊನ್ನಕ್ಕನವರ (1500 ಮೀ ಓಟ ದ್ವಿತೀಯ), ಸೀಮಾ ಹೊಸೂರ(ನಡಿಗೆ ಪ್ರಥಮ), ಶ್ರೇಯಾ ಸೂರ್ಯವಂಶಿ (ಹರ್ಡಲ್ಸ್ ಪ್ರಥಮ), ಕಾವೇರಿ ಸೊಗಲದ (ಹರ್ಡಲ್ಸ್  ದ್ವಿತೀಯ, ಎತ್ತರ ಜಿಗಿತ ದ್ವಿತೀಯ), ಚೇತನ ಗಡಾದ (ತ್ರಿವಿಧ ಜಿಗಿತ ಪ್ರಥಮ) ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಲ್ಲದೇ ಬಾಲಕಿಯರ 4×100 ಮೀ ದ್ವಿತೀಯ
ಬಾಲಕಿಯರ 4×400 ಮೀ ದ್ವಿತೀಯ,
ಸಂತೋಷ ಮನಗುತ್ತಿ (100 ಮೀ ಓಟ, ಭಲ್ಲೆ ತೃತೀಯ) ಮಲ್ಲಪ್ಪ ದಳವಾಯಿ (ಎತ್ತರ ಜಿಗಿತ  ತೃತೀಯ), ಬಸವೇಶ ಹೂಲಿ (ಸರಪಳಿ ಎಸೆತ ತೃತೀಯ), ವಿದ್ಯಾ ಕುಲಕರ್ಣಿ ( 200 ಮೀ ಓಟ ತೃತೀಯ) ಸುನಿತಾ ಚಿಲಮೂರ (800 ಮೀ ಓಟ, ತ್ರಿವಿಧ ಜಿಗಿತ ತೃತೀಯ), ಸಾನಿಕಾ ಕುಲಕರ್ಣಿ (1500 ಮೀ ಓಟ ತೃತೀಯ), ವನಜಾ ಬಡಿಗೇರ  (3000 ಮೀ ಓಟ ತೃತೀಯ), ಸಾವಕ್ಕ ಶೀಗಿಹಳ್ಳಿ (ಉದ್ದ ಜಿಗಿತ ತೃತೀಯ), ಕವಿತಾ ಗೋಣಿ (ಸರಪಳಿ ಎಸೆತ ತೃತೀಯ) ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಜೆ.ಆರ್.ನರಿ, ಆರ್.ಸಿ.ಸೊರಟೂರ, ಎಚ್.ವಿ.ಪುರಾಣಿಕ, ಎಸ್.ವಿ.ಬಳಿಗಾರ, ಎಂ.ಎನ್.ಕಾಳಿ, ಕೆ.ಐ.ಯರಗಂಬಳಿಮಠ ಹಾಗೂ ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಎಸ್.ಗುರುನಗೌಡರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.