- Advertisement -
ಬೀದರ – ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಣೆ ವೇಳೆ ಆಯತಪ್ಪಿ ನೀರಿಗೆ ಬೀಳುತ್ತಿದ್ದ ಸಚಿವ ಖಂಡ್ರೆ ಜಸ್ಟ್ ಮಿಸ್ ಆಗಿ ಬಚಾವಾಗಿದ್ದಾರೆ
ಜಲಾಶಯಕ್ಕೆ ಪೂಜೆ ಸಲ್ಲಿಸಿದ ಬಳಿಕ ಬಾಗಿನದ ಮೊರಕ್ಕೆ ಟೆಂಗು ಹಾಕಲು ಹೋಗಿ ಖಂಡ್ರೆ ಆಯತಪ್ಪಿದರು. ಬಳಿಕ ಸುಧಾರಿಸಿಕೊಂಡ ಈಶ್ವರ್ ಖಂಡ್ರೆ ಬ್ಯಾಲೆನ್ಸ್ ಮಾಡಿಕೊಂಡರು. ಕೆಳಗೆ ಬೀಳಲಿದ್ದ ತಮ್ಮ ಟೋಪಿಯನ್ನು ಕ್ಯಾಚ್ ಮಾಡಿದರು.
ಕಾರಂಜಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಬಾಗಿನ ಅರ್ಪಣೆ ಮಾಡಿದರು. 7.69 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯ ಸುಮಾರು 93%ಭರ್ತಿಯಾಗಿದೆ
- Advertisement -
ಸಚಿವ ಖಂಡ್ರೆಗೆ ಸಚಿವರಾದ ರಹೀಂ ಖಾನ್, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್, ಮಾಲಾ ಬಿ.ನಾರಾಯಣ, ಎಸ್ಪಿ, ಡಿಸಿ ಸೇರಿ ಹಲವು ಗಣ್ಯರು ಸಾಥ್ ನೀಡಿದರು.
ವರದಿ : ನಂದಕುಮಾರ ಕರಂಜೆ, ಬೀದರ