spot_img
spot_img

ದೇಶದ ಅಭಿವೃದ್ಧಿಗೆ ಶಿಕ್ಷಕರು ಅತ್ಯವಶ್ಯಕ

Must Read

- Advertisement -

ರೋಟರಿ ಐವರಿ ಸಿಟಿ ಮೈಸೂರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಜಿ.ಎಲ್.ಶೇಖರ್ ಅಭಿಮತ

ಮೈಸೂರು -ದೇಶದ ಪ್ರಗತಿಯನ್ನು ತರಗತಿಗಳಲ್ಲಿ ಬರೆಯಲಾಗುತ್ತದೆ. ಹೀಗಾಗಿಯೇ ಒಬ್ಬ ವ್ಯಕ್ತಿ ಅಥವಾ ದೇಶದ ಪ್ರಗತಿಗೆ ಶಿಕ್ಷಕರು ಅತ್ಯವಶ್ಯಕ ಎಂದು ಎನ್‌ಐಇ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಜಿ.ಎಲ್.ಶೇಖರ್ ಅಭಿಪ್ರಾಯಪಟ್ಟರು.

ಶಿಕ್ಷಕ ಶಿಕ್ಷಣ ನೀಡುವುದರ ಮೂಲಕ ಸಮಾಜದಲ್ಲಿ ಸುಧಾರಣೆಯನ್ನು ತರಲು ಸಾಧ್ಯವಾಗುತ್ತದೆ. ಜ್ಞಾನವೆಂಬ ಸಂಪತ್ತನ್ನು ಯಾರು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕಲಿಕೆಯಿಂದ ಮಾತ್ರ ಸಾಧ್ಯ ಎಂದರು.

- Advertisement -

ಅವರು ರೋಟರಿ ಐವರಿ ಸಿಟಿ ಮೈಸೂರು ಇವರು ಶಿಕ್ಷಕರ ದಿನಚರಣೆ ಅಂಗವಾಗಿ ವನಿತಾ ಸದನ ಶಾಲೆಯ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. ಶಿಕ್ಷಣ ಇಲ್ಲದ ಮನುಷ್ಯ ದಿಕ್ಸೂಚಿ ಇಲ್ಲದ ನಾವೆಯಂತೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮೈಸೂರು ಹಾಗೂ ಸುತ್ತಮುತ್ತಲಿನ ಶಾಲೆಗಳ ಶಿಕ್ಷಕ-ಶಿಕ್ಷಕಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪೀಪಲ್ಸ್ ಪಾರ್ಕ್ ಶಾಲೆಯ ಶ್ರೀಮತಿ ಸಿ.ರಮಾಮಣಿ, ವನಿತಾ ಸದನ ಶಾಲೆಯ ಶ್ರೀಮತಿ ಬಿ.ತ್ರಿವೇಣಿ, ಕೆಪಿಎಸ್ ಶಾಲೆಯ ಜಿ.ರವಿಕುಮಾರ್, ಮಾದಾಪುರ ಸರ್ಕಾರಿ ಪ್ರೌಢಶಾಲೆಯ ಎನ್.ಭೀಮೇಶ್, ಹಾರ್ಡ್ವೀಕ್ ಪ್ರೌಢಶಾಲೆಯ ಶ್ರೀಮತಿ ಕೆ.ವಿ.ಪುಷ್ಪಲತಾ, ನಿವೃತ್ತ ಶಿಕ್ಷಕಿ ಡಾ.ಬಿ.ನಿವiðಲಾ, ಸತ್ಯ ಸಾಯಿಬಾಬಾ ಶಾಲೆಯ ಶ್ರೀಮತಿ ಜಿ.ಎನ್.ಕಾವ್ಯ ಹಾಗೂ ಆಕ್ಮೆ ಶಾಲೆಯ ಶ್ರೀಮತಿ ಎಸ್.ಗೀತಾ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಪ್ರತಿಯೊಬ್ಬರೂ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.

- Advertisement -

ಸಭೆಯ ಅಧ್ಯಕ್ಷತೆಯನ್ನು ರೋಟರಿ ಐವರಿ ಸಿಟಿ ಮೈಸೂರು ಅಧ್ಯಕ್ಷ ರೊ.ಕೆ.ಶಶಿಧರ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ರೊ.ಸಂಜಯ್ ಅರಸ್, ರೊ.ಸುನಿಲ್ ಬಾಳಿಗ, ಕಾರ್ಯದರ್ಶಿ ರೊ.ಶೋಭ ನಾಗರಾಜ್, ರೊ.ಎಂ.ಕೆ.ಸಚ್ಚಿದಾನAದನ್, ರೊ.ಎಂ.ಕೆ.ಮುಖೇಶ್, ರೊ.ಇಫ್ತಿಕರ್ ಅಹಮದ್, ರೊ.ಕೇಶವ್ ಬಿ.ಕಾಂಚನ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group