ಮೂಡಲಗಿ ಲಯನ್ಸ್ ಕ್ಲಬ್‌ದಿಂದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ
ಮೂಡಲಗಿ: ‘ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತಿದ್ದು, ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ವೃತ್ತಿಯಲ್ಲಿ ಇನ್ನು ಹೆಚ್ಚು ಕೆಲಸ ಮಾಡಬೇಕೆನ್ನುವ ಉತ್ಸಾಹ ತುಂಬಿದೆ’ ಎಂದು ವಡೇರಹಟ್ಟಿ ಸಿಆರ್‌ಪಿ ಆನಂದ ಹಮ್ಮನವರ ಹೇಳಿದರು.
ಮೂಡಲಗಿ ಲಯನ್ಸ್ ಕ್ಲಬ್ ಪರಿವಾದದಿಂದ ಹರ್ಷಾ ಸಾಂಸ್ಕೃತಿಕ ಭವನದಲ್ಲಿ ಆಚರಿಸಿದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಕೆರಳಿಸುವುದು ಇಂದಿನ ಅವಶ್ಯಕತೆ ಇದೆ ಎಂದರು.
ಪ್ರಶಸ್ತಿ ಪಡೆದ ಮೂಡಲಗಿಯ ನ್ಯಾಮಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ ಶಿಕ್ಷಕಿ ಗೀತಾ ವರಾಳೆ ಮಾತನಾಡಿ, ಲಯನ್ಸ್ ಕ್ಲಬ್‌ದವರು ಕೊಟ್ಟಿರುವ ಪ್ರಶಸ್ತಿಯ ಗೌರವವನ್ನು ಉಳಿಸುವ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಗ್ರಾಮೀಣ ಮಕ್ಕಳು ಕನ್ನಡದೊಂದಿಗೆ ಇಂಗ್ಲಿಷ್ ಭಾಷೆಯಲ್ಲಿಯೂ ಪರಿಣಿತಿ ಹೊಂದಬೇಕು ಎನ್ನುವುದು ನನ್ನ ಉದ್ಧೇಶವಾಗಿದ್ದು, ಸರ್ಕಾರಿ ಶಾಲೆಯಲ್ಲಿ ನನ್ನ ಶಿಕ್ಷಕ ವೃತ್ತಿಯಲ್ಲಿ ಅದನ್ನು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜಯ ಮೋಕಾಶಿ ಮಾತನಾಡಿ ಲಯನ್ಸ್ ಕ್ಲಬ್ ಸ್ಥಾಪನೆಯಾದಾಗಿನಿಂದ ಪ್ರತಿ ವರ್ಷವೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡುತ್ತಿರುವೆವು. ಶಿಕ್ಷಕರನ್ನು ಪ್ರೋತ್ಸಾಹಿಸುವುದು ನಮ್ಮ ಉದ್ಧೇಶವಾಗಿದೆ ಎಂದರು.
ವೇದಿಕೆಯಲ್ಲಿ ಲಯನ್ಸ್ ಗ್ಲೋಬಲ್ ಸರ್ವಿಸ್ ಮೆಂಬರ್ ವೆಂಕಟೇಶ ಸೋನವಾಲಕರ, ಲಯನ್ಸ್ ಕ್ಲಬ್ ಖಜಾಂಚಿ ಕೃಷ್ಣಾ ಕೆಂಪಸತ್ತಿ ಇದ್ದರು.
ಡಾ. ಪ್ರಕಾಶ ನಿಡಗುಂದಿ, ಡಾ. ಎಸ್.ಎಸ್. ಪಾಟೀಲ, ಮಹಾವೀರ ಸಲ್ಲಾಗೋಳ, ಶಿವಾನಂದ ಗಾಡವಿ, ಶಿವಬೋಧ ಯರಝರ್ವಿ, ಗಿರೀಶ ಆಸಂಗಿ, ಪುಲಕೇಶ ಸೋನವಾಲಕರ, ಡಾ. ಸಂಜಯ ಶಿಂಧಿಹಟ್ಟಿ, ಶ್ರೀಶೈಲ ಲೋಕನ್ನವರ, ಸುರೇಶ ನಾವಿ, ಅಪ್ಪಣ್ಣ ಬಡಿಗೇರ, ಶಿಕ್ಷಕರಾದ ಬಸವರಾಜ ತರಕಾರ, ಸಂತೋಷ ಪಾಟೀಲ, ಸಿ.ಎಸ್. ಮೋಹಿತೆ, ಶಿವನಗೌಡ ಪಾಟೀಲ, ಬಾಗವಾನ, ಹಣಮಂತ ಕೋಟೂರ ಇದ್ದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು, ಈರಣ್ಣ ಕೊಣ್ಣೂರ ಸ್ವಾಗತಿಸಿದರು, ಶಿವಾನಂದ ಕಿತ್ತೂರ ನಿರೂಪಿಸಿದರು.