ಸಿಂದಗಿ ನಗರವನ್ನು ಸುಂದರವಾಗಿಸುವ ಗುರಿ ಇದೆ – ಮನಗೂಳಿ

Must Read

ಸಿಂದಗಿ ಪಟ್ಟಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಆ ನಿಟ್ಟಿನಲ್ಲಿ ಸಿಂದಗಿಯ ಪ್ರಮುಖ ರಸ್ತೆಗಳನ್ನು ಅಭಿವೃದ್ದಿಪಡಿಸಿ ಸಿಂದಗಿ ನಗರವನ್ನು ಅತ್ಯಂತ ಸುಂದರ ನಗರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಅವರು ಜಿಲ್ಲಾ ಪಂಚಾಯತ್ ವಿಜಯಪುರ ಹಾಗೂ ಪಂಚಾಯತ್ ರಾಜ್ಯ ಇಲಾಖೆ ಉಪವಿಭಾಗ ಸಿಂದಗಿ 2023 -24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಪಟ್ಟಣದ ಶರಣು ಶ್ರೀಗಿರಿ ಅವರ ಮನೆಯಿಂದ ಡಾ. ಕಾಗಿ ಅವರ ಮನೆಯವರೆಗೆ ಅಂದಾಜು ರೂ. 20 ಲಕ್ಷಗಳ ಅನುದಾನದಲ್ಲಿ ಸಿಸಿ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಗರ ಅಭಿವೃದ್ದಿಯಾಗಲು ಮೊದಲು ರಸ್ತೆಗಳು ಉತ್ತಮವಾಗಿರಬೇಕು. ಮುಂಬರುವ ದಿನಗಳಲ್ಲಿ ಸಿಂದಗಿಗೆ ಪಟ್ಟಣದ ಎಲ್ಲ ವಾರ್ಡುಗಳ ರಸ್ತೆಗಳನ್ನು ಹಾಗೂ ಮುಖ್ಯ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.

ಈ ವೇಳೆ ಪುರಸಭೆಯ ಅಧ್ಯಕ್ಷ ಶಾಂತವೀರ ಬಿರಾದಾರ, ಸದಸ್ಯರಾದ ಹಸೀಮ್ ಆಳಂದ, ರಾಜು ಖೇಡ್, ಸೈಫನ್ ನಾಟಿಕಾರ್, ಮಾಜಿ ಸದಸ್ಯರಾದ ಇಕಬಾಲ್ ತಲಕಾರಿ, ರಹೀಮ್ ಮರ್ತುರ, ಮೈಬುಬ್ ಮರ್ತುರ್, ಕಾಂಗ್ರೆಸ್ ಮುಖಂಡ ಅಶೋಕ್ ವಾರದ್, ಶರಣು ಶ್ರೀಗಿರಿ, ರಾಜಶೇಖರ ಸಂಗಮ್, ಗುರು ತಾರಾಪುರ, ಶಿವಾನಂದ ಅರಲಗುಂದಗಿ, ಮುತ್ತು ಅರಳಗುಂಡಗಿ, ವೀರೇಶ್ ವಸ್ತ್ರದ, ಶಾಂತಪ್ಪ ರಾಣಾಗೋಳ, ಸೇರಿದಂತೆ ಅನೇಕರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group