- Advertisement -
ಬೀದರ- ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿರುವ ಮಹಿಳೆಯ ಸಂಬಂಧಿಕರು ಯುವಕನ ಮರ್ಮಾಂಗ ಕತ್ತರಿಸಿದ ಅಮಾನವೀಯ ಘಟನೆ ನಡೆದಿದೆ.
ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದಲ್ಲಿ ಘಟನೆ ನಡೆದಿದ್ದು ರಾತ್ರಿ ಮಹಿಳೆಯ ಜೊತೆ ಇದ್ದ ಸುನೀಲ್ (28) ಎಂಬಾತನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದಾರೆ.
ರಾತ್ರಿಯೇ ಯುವಕನನ್ನ ಲಾಕ್ ಮಾಡಿ, ಕೂಡಿ ಹಾಕಿದ್ದ ಮಹಿಳೆಯ ಕುಟುಂಬಸ್ಥರು. ಬೆಳಿಗ್ಗೆ ಯುವಕನ ಮೇಲೆ ಮಹಿಳೆಯ ಪತಿ ತೀವ್ರವಾಗಿ ಹಲ್ಲೆ ನಡೆಸಿ ಈ ದುಷ್ಕೃತ್ಯ ಎಸಗಿದ್ದಾನೆ.
ಮುನ್ನಾಏಖೇಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು, ಆರೋಪಿ ವಿಚಾರಣೆ ನಡೆದಿದೆ. ಗಾಯಾಳುವನ್ನು ಬೀದರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ