ಯಳಸಂಗಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿದವರ ವಿರುದ್ಧ ಕ್ರಮಕ್ಕೆ ಮನವಿ

Must Read

ಸಿಂದಗಿ; ಶೋಷಿತ ಸಮಾಜದ ಧ್ವನಿ, ಸಾಮಾಜಿಕ ಹೋರಾಟಗಾರ ಹನುಮಂತ ಯಳಸಂಗಿರವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಮಹಿಳೆಯರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತ ಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಗೃಹ ಮಂತ್ರಿಗಳಿಗೆ ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ  ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಎಮ್ ಎ ಸಿಂದಗಿಕರ ಮಾತನಾಡಿ, ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿರವರ ಮೇಲೆ ಸೆ. ೦೨ ರಂದು ಶ್ರೀಮತಿ ಪೂಜಾ ಜಂಗಮ ಹಾಗೂ ಪೂಜಾ ಗಂಡ/ರಾಜಕುಮಾರ ಹಾಗೂ ಇನ್ನೊಬ್ಬ ಮಹಿಳೆ ಹಾಗೂ ಅವರ ಹಿಂದಿರುವ ರೌಡಿಶೀಟರಳ ಕುಮ್ಮಕ್ಕಿನಿಂದ ಕಲಬುರ್ಗಿ ಸ್ಟೇಶನ್ ಬಜಾರ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಕಲಬುರ್ಗಿಯ ಕೆಲ ಗುಂಡಾ ಪಡೆ ರೌಡಿಶೀಟರಗಳು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿಯವರ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡಿ ಕಲಬುರ್ಗಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಮಾನ್ಯ ಗೃಹ ಮಂತ್ರಿಗಳು ಸೂಕ್ತ ತನಿಖೆಗೆ ಆದೇಶಿಸಿ ದೂರು ನೀಡಿದ ಮಹಿಳೆಯರು, ಹೈದ್ರಾಬಾದ್ ಕರ್ನಾಟಕದ ಗಣ್ಯ ವಕ್ತಿಗಳನ್ನು ರಾಜಕೀಯ ಮುಖಂಡರನ್ನು ಸರ್ಕಾರಿ ನೌಕರರನ್ನು ತಮ್ಮ ಬಲೆಗೆ ಬಿಳಿಸಿ ಹನಿ ಟ್ರಾಪ್ ಎಂದು ಕರೆಯಲ್ಪಡುವ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡು ಹಣ ಲೂಟಿ ಮಾಡುವ ದಂಧೆ ನಡೆಸಿದ್ದಾರೆ. ಕಾರಣ ಹನುಮತ ಯಳಸಂಗಿಯವರ ಮೇಲೆ ದೂರು ನೀಡಲು ಪ್ರಚೋದಿಸಿದ ವ್ಯಕ್ತಿಗಳನ್ನು ಕಂಡು ಹಿಡಿಯಬೇಕು. ಮತ್ತು ಈ ಹನಿ ಟ್ರಾಪ್ ಪ್ರಕರಣದಲ್ಲಿ ಶಾಮೀಲಾದ ಮಹಿಳೆಯರ ಮೇಲೆ ಕಲಬುರ್ಗಿ ಪೋಲಿಸ ವರಿಷ್ಠಾಧಿಕಾರಿಗಳು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲ ಮಾಡಿ ಈ ಪ್ರಕರಣವನ್ನು ಸೂಕ್ತ ತನಿಖೆ ಮಾಡಿ ನಿಜವಾದ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಆಗ್ರಹಿಸಿದರು.

ಹರ್ಷವರ್ಧನ ಪೂಜಾರಿ, ರಜತ್ ತಾಂಬೆ, ಜಾಫರ್ ಇನಾಮದಾರ ಮಾತನಾಡಿ, ಹನುಮಂತ ಯಳಸಂಗಿ ಅವರು ಶೋಷಿತ ವರ್ಗದ ಹಿತಾಸಕ್ತಿ ಕಾಯುವ ದೃಷ್ಟಿಯಿಂದ ಹೆಸರುವಾಸಿಯಾದ ಹೋರಾಟಗಾರರಾಗಿದ್ದಾರೆ. ಅವರ ವಿರುದ್ಧ ಅತ್ಯಂತ ಕೀಳು ಮಟ್ಟದಲ್ಲಿ ಮಾಡಲಾಗಿರುವ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಅವಿಶ್ವಾಸನೀಯವಾಗಿದ್ದು, ಕಲಬುರ್ಗಿಯ ಕೆಲವು ಗುಂಡಾ ಪಡೆಗಳು ಮತ್ತು ರೌಡಿಶೀಟರಗಳು ಹಗೆಸಾಧಿಸುವ ಉದ್ದೇಶದಿಂದ ದಲಿತ ಸೇನೆ ಸಂಘಟನೆಯವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿಸುತ್ತಿದ್ದಾರೆ. ಇವರ ಉದ್ದೇಶ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು ಹಾಗೂ ಹಣಮಂತ ಯಳಸಂಗಿಯವರನ್ನು ಸಾಮಾಜಿಕವಾಗಿ ಮೂಲೆ ಗುಂಪನ್ನಾಗಿಸುವ ದುರುದ್ದೇಶವಾಗಿದೆ. ಈ ಪ್ರಕರಣವನ್ನು ಸೂಕ್ತ ತನಿಖೆಗೆ ಒಳಪಡಿಸಿ, ದೂರು ನೀಡಿದ ಮಹಿಳೆಯರ ಸಮಗ್ರ ಮಾಹಿತಿ, ಅವರ ಕಾಲ ಡಿಟೇಲ್ಸ್ ಮತ್ತು ಹನುಮಮತ ಯಳಸಂಗಿಯವರ ಮೇಲೆ ದೂರು ನೀಡಲು ಪ್ರಚೋದಿಸಿದ ವ್ಯಕ್ತಿಗಳನ್ನು ಕಂಡು ಹಿಡಿಯಬೇಕು, ಹನುಮಂತ ಯಳಸಂಗಿರವರ ಮಾನಹಾನಿ ಸುಳ್ಳು ದೂರು ನೀಡಿದ ಮಹಿಳೆಯರ ವಿರುದ್ಧ ಕಲಬುರ್ಗಿ ಪೊಲೀಸ್ ವರಿಷ್ಠಾಧಿಕಾರಿ ಸುಳ್ಳು ದೂರು ನೀಡಿದ ಕಾರಣಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಹನಿ ಟ್ರಾಪ್ ದಂಧೆಯ ತನಿಖೆ ಮಾಡಬೇಕು. ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಖಾಜು ಹೊಸಮನಿ, ಆಶಾ ಹೊನಕೇರಿ, ಸುಭಾಸ ತಳವಾರ, ವಿನೋದ ಬನಸೋಡೆ,ಲಕ್ಷ್ಮಣ ಚಲವಾದಿ, ಕುಮಾರ ಸಂಕರ, ಶಾಹುಸೇನಿ ಬುಕ್ಕದ, ಅಂಬರೀಶ್ ಕೊಂಡಗುಳಿ, ಮಹೇಶ್ ಜಾಬಾನವರ್, ಅಬ್ದುಲ್ ರಜಾಕ್ ಸಿಂದಗಿಕರ, ಫಿರೋಜ್ ನಿಂಬರಗಿ, ತಾಲೂಕ ಮಹಿಳಾ ಅಧ್ಯಕ್ಷೆ ಸಫಿಯಾ ಶೇಖ ಸೇರಿದಂತೆ ಅನೇಕರಿದ್ದರು.

Latest News

ಸಿಂದಗಿ : ಉಲ್ಟಾ ಹಾರಿದ ರಾಷ್ಟ್ರಧ್ವಜ

ಸಿಂದಗಿ : ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ನಡೆಯಿತು.ಶಾಸಕ ಅಶೋಕ...

More Articles Like This

error: Content is protected !!
Join WhatsApp Group