ಬೈಲಹೊಂಗಲ: ವೀರಶೈವ ಲಿಂಗಾಯತ ಭವನ ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯಿಂದ ಪ್ರಪ್ರಥಮ ಬಾರಿಗೆ ವೀರಶೈವ ಮಹಾಸಭಾ ರಾಜ್ಯ ಸಮಿತಿಗೆ ಚುನಾಯಿತನಾಗಿ ಆಯ್ಕೆಯಾದ ಬೈಲಹೊಂಗಲ ನಗರದ ಗುರು ಮೆಟಗುಡ್ಡ ಅವರು ಅಧಿಕಾರ ಸ್ವೀಕರಿಸಿದರು .
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಸಂಸದರಾದ ಬಿ ವೈ ರಾಘವೇಂದ್ರ, ರಾಜ್ಯಾಧ್ಯಕ್ಷರಾದ ಶಂಕರ ಬಿದರಿ, ಸಚಿವರಾದ ಈಶ್ವರ ಖಂಡ್ರೆ, ಶರಣಗೌಡ ದರ್ಶಾನಾಪುರ, ಅನೇಕರು ಅಭಿನಂದಿಸಿದರು,
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಗುರು ಮೆಟಗುಡ್ಡ ಸಮಾಜದ ಸಹಸ್ರಾರು ಜನ ಸೇರಿ ನನ್ನನ್ನು ಆಯ್ಕೆ ಮಾಡಿದ್ದೀರಿ ಸಮಾಜದ ಪ್ರತಿಯೊಂದು ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಎಲ್ಲರಿಗೂ ಸೂಕ್ತ ನ್ಯಾಯ ಸಿಗಲು ಸಮಾಜದ ಹಿರಿಯರ ಜೊತೆ ಕಂಕಣಬದ್ಧನಾಗಿ ಸೇವೆ ಮಾಡುವೆ, ಬೆಳಗಾವಿ ಜಿಲ್ಲೆಯಿಂದ ಪ್ರಥಮ ಬಾರಿಗೆ ರಾಜ್ಯ ಸಮಿತಿಗೆ ನನ್ನನ್ನ ಆಯ್ಕೆ ಮಾಡಿದ ಎಲ್ಲ ಮತದಾರ ಬಾಂಧವರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.