spot_img
spot_img

ಮೂಡಲಗಿ: ಕಸಾಯಿ ಖಾನೆಗಳನ್ನು ಬಂದ್ ಮಾಡಲು ಶ್ರೀ ಬಸವ ಸೇನೆಯಿಂದ ಮನವಿ

Must Read

- Advertisement -

ಮೂಡಲಗಿ – ನಗರದಲ್ಲಿ ಇರುವ ಕಸಾಯಿಖಾನೆಗಳಿಂದ ನಗರದಲ್ಲಿ ಎಲ್ಲ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದು ಕಸಾಯಿ ಖಾನೆಗಳಿಂದ ಬರುತ್ತಿರುವ ತ್ಯಾಜ್ಯವಸ್ತು ಮೂಡಲಗಿ ನಗರದಲ್ಲಿ ಹರಿಯುವ ಹಳ್ಳದ ನೀರಿನಲ್ಲಿ ಮಿಶ್ರಣವಾಗಿ ಮೂಡಲಗಿಯಿಂದ ಸುಣಧೋಳಿ ಗ್ರಾಮಕ್ಕೆ ಹೋಗುವ (ಮೂಡಲಗಿ ರುದ್ರ ಭೂಮಿ) ರಸ್ತೆಯಲ್ಲಿ ಗಬ್ಬು ನಾರುತ್ತಿದ್ದು ಆ ರಸ್ತೆಯಲ್ಲಿ ಮೂಡಲಗಿಯ ಸುತ್ತಮುತ್ತಲಿನ ರೈತರು ಮತ್ತು ವ್ಯಾಪಾರಿಗಳು ಸಾಮಾನ್ಯ ಜನರು ನಡೆದುಕೊಂಡು ಹೋಗಲು  ಬಹಳ ತೊಂದರೆಯಾಗುತ್ತಿದೆ ಕಾರಣ ಸದರಿ ಕಸಾಯಿಖಾನೆಗಳನ್ನು ಈ ಕೂಡಲೇ ಸ್ಥಳಾಂತರಿಸಬೇಕು ಎಂದು ಶ್ರೀ ಬಸವ ಸೇನಾ ಯುವಕ ಸಂಘದ ಪರಶುರಾಮ ಬಾಳಿಗೇರಿ ಹೇಳಿದರು.

ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀ ಬಸವ ಸೇನಾ ಯುವಕ ಸಂಘದಿಂದ ತಹಶೀಲ್ದಾರ ರಿಗೆ ಮನವಿ ನೀಡಿದ ಅವರು, ಬಹಳ ದಿನಗಳಿಂದ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದಿರುವುದು ದುರದೃಷ್ಟಕರ ಸಂಗತಿ. ಈಗ ಮೂಡಲಗಿ ನಗರವು ತಾಲೂಕ ಸ್ಥಳವಾಗಿದ್ದು ಬೇರೆ ನಗರಗಳಿಂದ ಜನರು ಬರುತ್ತಿರುತ್ತಾರೆ ಇನ್ನು ಕೆಲವು ವರ್ಷಗಳ ನಂತರ ಜನಸಂಖ್ಯೆ ಹೆಚ್ಚಾಗಿ ಇನ್ನೂ ಹೆಚ್ಚು ತ್ಯಾಜ್ಯ ವಸ್ತು ಹಳ್ಳಕ್ಕೆ ಬರುವುದು ಕಾರಣ ಇದಕ್ಕೆ ಸರಿಯಾಗಿ ತ್ಯಾಜ್ಯವಸ್ತು ವಿಲೇವಾರಿಯಾಗದೆಯಿರುವುದು, ಮತ್ತು ನಗರದಲ್ಲಿ ಎಲ್ಲಿ ನೋಡಿದರು ಚರಂಡಿಗಳಿಂದ ತೆಗೆದ ತ್ಯಾಜ್ಯವು ವಿಲೆವಾರಿಯಾಗದೆ ರಸ್ತೆ ಪಕ್ಕದಲ್ಲಿ ಇರುವುದರಿಂದ ಸಾಂಕ್ರಾಮಿಕ ರೋಗ ಹೆಚ್ಚುವ ಸಂಭವ ಇರುತ್ತದೆ ಈ ಬಗ್ಗೆ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ಮೂಡಲಗಿ ಎಲ್ಲ ಕಸಾಯಿಖಾನೆಗಳನ್ನು ಸಂಪೂರ್ಣ ಬಂದ್ಮಾ ಡುವುದು ಆಗಬೇಕು. ಅದರ ಜೊತೆಗೆ ಮೂಡಲಗಿ ನಗರದಲ್ಲಿ ಹರಿಯುವ ಹಳ್ಳದ ಸ್ವಚ್ಛತಾ ಕಾರ್ಯವು ಹಲವು ವರ್ಷಗಳಿಂದ ಮಾಡದೆ ಇರುವುದರಿಂದ ಹಳ್ಳದಲ್ಲಿ ಬರುವ ಕಸ, ಕಡ್ಡಿ,ಕಂಟಿ ಮತ್ತು ತ್ಯಾಜ್ಯವಸ್ತುಗಳಿಂದ ಹಳ್ಳದ ನೀರು ಕಲುಷಿತಗೊಂಡು ದುರ್ವಾಸನೆ ಬರುತ್ತಿದೆ ಆದ್ದರಿಂದ ಈ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

- Advertisement -

ಶ್ರೀ ಬಸವ ಸೇವಾ ಯುವಕ ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ, ಉಪಾಧ್ಯಕ್ಷ ಪ್ರವೀಣ ಕುರುಬಗಟ್ಟಿ, ಕಾಯ೯ದಶಿ೯ ಉಮೇಶ ಶೆಕ್ಕಿ, ಈಶ್ವರ ಢವಳೇಶ್ವರ, ಶಿವಬೋಧ ಗೋಕಾಕ, ಸಿದ್ದು ಗೋಕಾಕ, ಬಸವರಾಜ ಶೆಕ್ಕಿ, ಮಲ್ಲು ಕುರುಬಗಟ್ಟಿ, ಮಲ್ಲು ಬೀಸನಕೊಪ್ಪ, ಸಂಗಮೇಶ ಗುಲಾ೯ಪೂರ, ಮಹಾಂತೇಶ ಪಿರೋಜಿ, ಚನ್ನಬಸು ನಿಡಗುಂದಿ, ಶ್ರೀಶೈಲ ಕೊಳವಿ, ಬಸವರಾಜ ಅಂಗಡಿ, ಮಲ್ಲಪ್ಪಾ ಯಾದವಾಡ, ಶಿವರಾಯ ಬಳಿಗಾರ ಇದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group