spot_img
spot_img

ಕೈಗಾರಿಕೋದ್ಯಮಿಗಳ ಸಂಘದಿಂದ ನೂತನ ಶಾಸಕ ಅಶೋಕ ಮನಗೂಳಿ ಸನ್ಮಾನ

Must Read

spot_img
- Advertisement -

ಸಿಂದಗಿ: ಉದ್ಯಮ, ಶಿಕ್ಷಣ, ಸಹಕಾರ ರಂಗದಲ್ಲಿ ಇಡೀ ಜಿಲ್ಲೆಯಲ್ಲಿಯೇ ಸಿಂದಗಿ ಮುಂದಿದೆ  ಕೈಗಾರಿಕೋದ್ಯಮಕ್ಕೆ ಬೇಕಾಗುವ ದಿನದ 24 ಗಂಟೆ ವಿದ್ಯುತ್ ಸರಬರಾಜು ಆಗಬೇಕು ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆಗೆ ಸ್ಪಂದಿಸುವೆ ಅಧಿಕಾರ ಶಾಶ್ವತವಲ್ಲ ಅಧಿಕಾರಾವಧಿಯಲ್ಲಿ ಮಾಡಿದ ಕಾರ್ಯಗಳು ಶಾಶ್ವತ ಆ ನಿಟ್ಟಿನಲ್ಲಿ ಕಾರ್ಯ ಮಾಡುವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕೈಗಾರಿಕೋದ್ಯಮಿಗಳಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ನಮ್ಮ ತಂದೆಯವರಾದ ದಿ.ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಸಿಂದಗಿ ಪಟ್ಟಣಕ್ಕೆ ನೀಡಿದ ಶಾಶ್ವತ ಕೊಡುಗೆಗಳಿಂದ ಅವರ ಹೆಸರು ಅಜರಾಮರವಾಗಿ ಉಳಿದುಕೊಂಡಿವೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದ ಅವರು, ಹೊಸ ಉದ್ಯಮಿಗಳಿಗೆ ನಿವೇಶನದ ಕೊರತೆಯಿದ್ದು ಕೈಗಾರಿಕಾ ಅಧಿಕಾರಿಗಳಿಂದ ಮಾಹಿತಿ ಪಡೆದು ಹೊಸ ಜಾಗೆ ಮಂಜೂರು ಮಾಡಿಸಿ ಕೈಗಾರಿಕೋದ್ಯಮದಲ್ಲಿ ಜಿಲ್ಲೆಗೆ ಮಾದರಿ ತಾಲೂಕನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಕೈಗಾರಿಕಾ ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಮಾತನಾಡಿ, ಸಿಂದಗಿ ತಾಲೂಕು ವಾಣಿಜ್ಯ ಉದ್ಯಮಿಗಳ ತಾಣವಾಗಿದ್ದಲ್ಲದೆ ಜಿಲ್ಲೆಯಲ್ಲಿಯೇ ಹೆಚ್ಚು ಕೈಗಾರಿಕಾ ಉದ್ಯಮ ಹೊಂದಿದೆ ಅದಕ್ಕೆ ಕೈಗಾರಿಕಾ ಉದ್ಯಮ ವೆಂದರೆ ಕಷ್ಟದಲ್ಲಿದೆ ಎನ್ನುವುದು ಗೊತ್ತಿದೆ ಒಂದು ಮನೆಗೆ ಕೈಗಾರಿಕಾ ಉದ್ಯಮ ಬಂದರೆ ಒಂದು ಕುಟುಂಬವಲ್ಲದೆ ನೆರೆಹೊರೆಯವರಿಗೂ ಉದ್ಯೋಗ ಕೊಡಬಹುದು ಕಾರಣ ಇನ್ನೂ 50 ಕೈಗಾರಿಕಾ ಉದ್ಯಮ ಮಾಡಲು ಮುಂದೆ ಬಂದರು ಕೂಡಾ ನಾನು ಸಹಕಾರ ನೀಡುವೆ ಅಲ್ಲದೆ ಕಡುಬಡ 500 ಜನರಿಗೆ ಸಣ್ಣ ಘಟಕ ಸ್ಥಾಪನೆಗೆ ರೂ 2.50 ಗಳಷ್ಟು  ಅನುವು ಮಾಡಿಕೊಡುತ್ತೇನೆ ಇಲ್ಲಿನ ಕೆಲ ಉದ್ಯಮಿಗಳು ನಿವೇಶನಗಳನ್ನು ಪಡೆದುಕೊಂಡು ಬಾಡಿಗೆ ಪ್ರವೃತ್ತಿಗೆ ಇಳಿದಿದ್ದಾರೆ ಅಂಥವರಿಂದ ನಿಜವಾದ ಉದ್ಯಮಿಗಳಿಗೆ ಅನ್ಯಾಯವಾಗುತ್ತಿದೆ. ಕೈಗಾರಿಕೆಗೆ ತಕ್ಕಂತೆ ಮಾನವ ಸಂಪನ್ಮೂಲ ನೀಡುವದು ಅತ್ಯವಶ್ಯಕತೆಯಿದ್ದು ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸುವೆ ಎಂದರು.

- Advertisement -

ಅನಿವೃದ್ಧ ಲೋಣಿ, ಇಮಾಮಸಾಬ ನದಾಫ ಮಾತನಾಡಿದರು. 

ಈ ಸಂದರ್ಭದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಚೇರ ಮನ್ ರಜಾಕಸಾಬ ದುದನಿ, ಅಬು ಶಿಕ್ಷಣ ಸಂಸ್ಥೆಯ ಚೇರಮನ್ ಎಂ.ಎ.ಖತೀಬ, ಅರ್ಬನ್ ಬ್ಯಾಂಕ ನಿವೃತ್ತ ಪ್ರಧಾನ ವ್ಯವಸ್ಥಾಪಕ ಮಹಾಂತೇಶ ಪಟ್ಟಣಶೆಟ್ಟಿ, ಜಿಪಂ ಮಾಜಿ ಸದಸ್ಯ ಮಹಾಂತಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಸದಸ್ಯೆ ಪ್ರತಿಭಾ ಕಲ್ಲೂರ, ಎಪಿಎಂಸಿ ಮಾಜಿ ಅದ್ಯಕ್ಷ ಸಿದ್ದಣ್ಣ ಹಿರೇಕುರಬರ, ಉದ್ದಿಮೆದಾರರಾದ ಗುರುಗೌಡ ಬರಾದಾರ, ಸಿದ್ದು ಉಪ್ಪಿನ, ಬಸವರಾಜ ಅಂಬಲಗಿ, ಗೌಸೀಯಾ ಬಮ್ಮನಜೋಗಿ, ಕೃಷ್ಣಾ ಈಳಗೇರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಕೈಗಾರಿಕಾ ಉದ್ದಿಮೆದಾರರ ಸಂಘದ ಅಧ್ಯಕ್ಷ ತಮ್ಮಣ್ಣ ಈಳಗೇರ ಸ್ವಾಗತಿಸಿದರು.

- Advertisement -

ಶಿಕ್ಷಕ ಶ್ರೀಕಾಂತ ಕುಂಬಾರ ನಿರೂಪಿಸಿದರು. ಎಲ್.ಎಸ್ ವಾಲೀಕಾರ ವಂದಿಸಿದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group