ಸಿಂದಗಿ: ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಂಭ್ರಮ ಕಾರ್ಯಕ್ರಮದ ಅಡಿಯಲ್ಲಿ “ಪೌಷ್ಟಿಕತೆ, ಆರೋಗ್ಯ ಮತ್ತು ಶುಚಿತ್ವ ” ವಿಷಯದ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಸದರಿ ವಿಷಯದ ಕುರಿತು ಸಾರ್ವಜನಿಕ ಆಸ್ಪತ್ರೆ ಸಿಂದಗಿಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳಾದ ರಾಜಶೇಖರ ನರಗೋದಿ ಇವರು ಮಕ್ಕಳನ್ನು ಉದ್ದೇಶಿಸಿ ಪೌಷ್ಟಿಕತೆ ಆರೋಗ್ಯ ಶುಚಿತ್ವದ ಕುರಿತು ಮಕ್ಕಳಿಗೆ ಮನಮುಟ್ಟುವಂತೆ ಉಪನ್ಯಾಸ ನೀಡಿದರು ಮತ್ತು ಸೊಳ್ಳೆಗಳಿಂದ ಹರಡುವ ಮಲೇರಿಯಾ ಡೆಂಗು, ಚಿಕನ್ ಗುನ್ನೆರೋಗದ ಬಗ್ಗೆ ವಿವರಣೆ ನೀಡಿದರು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೌಷ್ಠಿಕ ಆಹಾರ ದ್ವಿದಳ ಧಾನ್ಯ ಸಿರಿಧಾನ್ಯ ಹಾಗೂ ಹಸಿರು ತರಕಾರಿಗಳು ಸೇವಿಸಬೇಕೆಂದು ಹೇಳಿದರು ಮತ್ತು ಕುರುಕುರೆ ಪಿಜ್ಜಾ ಬರ್ಗರ್ ಇವೆಲ್ಲ ಜಂಗ್ ಫುಡ್ ಇದರಿಂದ ದೇಹಕ್ಕೆ ಹಾನಿಕರ ವಾಗುವುದೆಂದು ವಿವರಣೆ ಕೊಟ್ಟರು.
ಇದೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಕುಸುಮ ಯಾಳಗಿ ಇವರು ಆರೋಗ್ಯದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು ಅಭಿನಯ ಭಾಷಣ ಆಹಾರ ಮತ್ತು ಪೌಷ್ಟಿಕತೆಯ ಕುರಿತು ಮಕ್ಕಳು ಪ್ರದರ್ಶನ ನೀಡಿದರು ಕಾರ್ಯಕ್ರಮದ ಸ್ವಾಗತವನ್ನು ಶ್ರೀಮತಿ ಸಕ್ಕುಬಾಯಿ ಡಾಂಗಿ ಮತ್ತು ನಿರೂಪಣೆಯನ್ನು ವಿಕಾಸ, ವಂದನಾರ್ಪಣೆಯನ್ನು ಶ್ರೀಮತಿ ದೀಕ್ಷಾ , ಶ್ರೀಮತಿ ರೂಪಾ ಪ್ರತಿಜ್ಞಾವಿಧಿ ಭೋಧಿಸಿದರು. ಮಕ್ಕಳಾದ ಕು. ಈಶ್ವರಿ, ಸೃಷ್ಟಿ, ಭುವನ್ ಭೂತಿ, ಕಾರ್ತಿಕ್ ಭಾಷಣ ಮಾಡಿದರು . ಅರ್ಪಿತ, ಪೂರ್ಣಿಮಾ, ಸಂಗಮೇಶ್, ಶಂಕರ್, ಈಶ್ವರ್, ಹರೀಶ್, ಪೌಷ್ಟಿಕಾಂಶಗಳಿಗೆ ಸಂಬಂಧಿಸಿದ ಕಥೆಗಳನ್ನು ವಾಚಿಸಿದರು. ರವಿಕುಮಾರ್, ಮಲ್ಲಿಕಾರ್ಜುನ್, ಭಗವಂತ, ಮಲ್ಕಪ್ಪ, ಪೌಷ್ಟಿಕಾಂಶದ ಗೀತೆಯನ್ನು ಹಾಡಿದರು . ಕಾರ್ಯಕ್ರಮದಲ್ಲಿ ಪ್ರಗತಿ, ಲಕ್ಷ್ಮೀ ಗುರುಮಾತೆಯರು ಭಾಗವಹಿಸಿದ್ದರು ಮಕ್ಕಳು ಸಂಭ್ರಮದ ಶನಿವಾರ ಕಾರ್ಯಕ್ರಮವನ್ನು ಸಂಭ್ರಮದಿಂದ ಕಳೆದರು.