spot_img
spot_img

ಮಕ್ಕಳಿಗೆ ಅಂತಾರಾಷ್ಟ್ರೀಯ ವಚನ ಕಂಠಪಾಠ ಸ್ಪರ್ಧೆ

Must Read

- Advertisement -

(ಕೊನೆಯ ದಿನಾಂಕ: 31.12.2024)

ಈ ಸ್ಪರ್ಧೆಯನ್ನು ಮಕ್ಕಳಲ್ಲಿ ವಚನ ಸಾಹಿತ್ಯದ ಅಭಿರುಚಿಯನ್ನು ಬೆಳೆಸಲು ಹಮ್ಮಿಕೊಂಡಿದ್ದೇವೆ. ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಪರಿಚಯ ಬಾಲ್ಯದಲ್ಲಿಯೇ ಆದರೆ ಅದನ್ನು ಮುಂದಿನ ಪೀಳಿಗೆಗೆ ಸಾಗಿಸುವ ನಿಟ್ಟಿನಲ್ಲಿ ಸಹಾಯಕವಾಗುತ್ತದೆ ಎನ್ನುವ ಸದಭಿರುಚಿಯ ಚಿಂತನೆ. ಭಾರತದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳೂ ಕೂಡ ಇದರಲ್ಲಿ ಭಾಗವಹಿಸಲು ಅವಕಾಶವಿದೆ. ಹಾಗಾಗಿ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ.

ಈ ಕಾರ್ಯಕ್ರಮದ ರೂವಾರಿಗಳೂ ಮತ್ತು ಪ್ರಾಯೋಜಕರಾದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ನಿವಾಸಿಯಾಗಿರುವ ಶ್ರೀಮತಿ ಶಶಿಕಲಾ (ಸಾವಕ್ಕಾ) ಕಲಗೌಡಾ ಪಾಟೀಲ ಅವರ ಆಶಯದಂತೆ ನಡೆಸಲು ತೀರ್ಮಾನಿಸಲಾಗಿದೆ. ಅವರಿಗೆ ವಚನ ಮಂದಾರದ ಪರವಾಗಿ ಹೃದಯಪೂರ್ವಕ ಧನ್ಯವಾದಗಳು ಮತ್ತು ಕೃತಜ್ಞತೆಗಳು.

- Advertisement -

ಇದರಲ್ಲಿ ಮೂರು ವಿಭಾಗಗಳು:
ವಿಭಾಗ-01 : 4 ವರ್ಷ 11 ತಿಂಗಳುಗಳವರೆಗಿನ ಮಕ್ಕಳು.
ವಿಭಾಗ-02 : 5 ವರ್ಷದಿಂದ 9 ವರ್ಷ 11 ತಿಂಗಳವರೆಗಿನ ಮಕ್ಕಳು.
ವಿಭಾಗ-03 : 10 ವರ್ಷದಿಂದ 16 ವರ್ಷದವರೆಗಿನ ಮಕ್ಕಳು.

ಮಕ್ಕಳು ವಚನಗಳನ್ನು ಕಂಠಪಾಠ ಮಾಡಿಕೊಂಡು ಹೇಳುವ ವೀಡಿಯೋವನ್ನು ಮಾಡಿ ನಮ್ಮ Whatsapp Number: +91 9741 357 132 ಗೆ ಕಳುಹಿಸಿ ಕೊಡಬೇಕು.

ವೀಡಿಯೋವನ್ನು ಮಾಡುವಾಗ ಒಂದು ಪೇಪರನಲ್ಲಿ
ಮಗುವಿನ ಹೆಸರು  :
ಮಗುವಿನ ವಯಸ್ಸು  :
ಊರು      :
ಮೋಬೈಲ್‌ ನಂಬರ್  :

- Advertisement -

ಬರೆದು ವೀಡಿಯೋದ ಹಿನ್ನೆಲೆಯಲ್ಲಿ ಅಂಟಿಸಿ ವೀಡಿಯೋ ಮಾಡಬೇಕು. ಹೆಸರನ್ನು ಹೇಗೆ ಬರೆಯಬೇಕು ಎನ್ನುವ ಕೆಲವು ವೀಡಿಯೋ Sample ಗಳನ್ನು ಇಲ್ಲಿ ನೋಡಬಹುದು.

ನಿಬಂಧನೆಗಳು:
1. ಕೇವಲ ಬಸವಾದಿ ಶರಣ-ಶರಣೆಯರ ವಚನಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಇನ್ನಾವುದೇ ಸಾಹಿತ್ಯವನ್ನು ಪರಿಗಣಿಸಲಾಗುವುದಿಲ್ಲ.
2. ಸುಮಾರು 7 ನಿಮಿಷಗಳ ಅವಧಿ ಮೀರದಂತೆ ವಚನಗಳನ್ನು ಹೇಳಿದ ವೀಡಿಯೋ ಕಳಿಸಿ. ವಚನಗಳ ಸಂಖ್ಯೆಗೆ ಮಿತಿ ಇಲ್ಲ. 7 ನಿಮಿಷಗಳ ಅವಧಿಯಲ್ಲಿ ಎಷ್ಟಾಗುವುದೋ ಅಷ್ಟು ವಚನಗಳನ್ನು ಹಾಡಬಹುದು.
3. ಧ್ವನಿ ಸ್ಫಷ್ಟವಾಗಿರಲಿ ಮತ್ತು ಹಿನ್ನೆಲೆಯಲ್ಲಿ ಇತರೇ ಶಬ್ದಗಳು ಇರದಂತೆ ರಿಕಾರ್ಡ್ ಮಾಡಬೇಕು.
4. ವಯಸ್ಸನ್ನು ಕರಾರುವಾಕ್ಕಾಗಿ ನಮೂದಿಸಬೇಕೆಂದು ವಿನಂತಿಸುತ್ತೇವೆ.
5. ಮಗುವನ್ನು ಸಂಪರ್ಕಿಸಲು ಏಕ ಮಾತ್ರ ಮಾಧ್ಯಮವಾಗಿರುವುರಿಂದ ಮೋಬೈಲ್‌ ನಂಬರನ್ನು ಕಡ್ಡಾಯವಾಗಿ ಹಾಗೂ ಸ್ಪಷ್ಟವಾಗಿ ನಮೂದಿಸಬೇಕು.
6. ತೀರ್ಪುಗಾರರ ನಿರ್ಣಯವೇ ಅಂತಿಮ ಮತ್ತು ತೀರ್ಪನ್ನು ಯಾವುದೇ ಕಾರಣಕ್ಕೂ ಬದಲಾಯಿಸಲಾಗುವುದಿಲ್ಲ.

ಬಹುಮಾನಗಳು:
1. ಭಾಗವಹಿಸಿದ ಪ್ರತಿಯೊಬ್ಬರಿಗೂ ಬಸವಣ್ಣನವರ ಭಾವಚಿತ್ರವಿರುವ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
2. ಬಸವ ಜಯಂತಿಯ ದಿನ ಬಹುಮಾನ ಪಡೆದವರನ್ನು ಸನ್ಮಾನಿಸಿ ಅಲ್ಲಿಯೇ ಬಹುಮಾನ ವಿತರಣೆಯನ್ನು ಮಾಡಲಾಗುವುದು.
3. ಆಯಾ ವಯಸ್ಸಿನ ಪ್ರತಿ ವಿಭಾಗದಲ್ಲಿ:
• ಪ್ರಥಮ ಸ್ಥಾನ ಪಡೆದವರಿಗೆ Rs 3,000=00.
• ದ್ವಿತೀಯ ಸ್ಥಾನ ಪಡೆದವರಿಗೆ Rs 2,000=00.
• ತೃತೀಯ ಸ್ಥಾನ ಪಡೆದವರಿಗೆ Rs 1,000=00.
• ಸಮಾಧಾನಕರ ಬಹುಮಾನವಾಗಿ 5 ಸ್ಪರ್ಧಾಳುಗಳಿಗೆ ತಲಾ Rs 500=00.
• ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿ ಒಬ್ಬರಿಗಿಂತ ಹೆಚ್ಚು ಸ್ಪರ್ಧಿಗಳು ವಿಜೇತರಾದಲ್ಲಿ ಮೀಸಲಿಟ್ಟ ಹಣದಲ್ಲಿ ಎಲ್ಲರಿಗೂ ಸಮನಾಗಿ ಹಂಚಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಡಾ. ವಿಜಯಕುಮಾರ ಕಮ್ಮಾರ, ಅಧ್ಯಕ್ಷರು: ವಚನ ಮಂದಾರ, ತುಮಕೂರು ಇವರನ್ನು ಸಂಪರ್ಕಿಸಬಹುದು. (ಮೋಬೈಲ್‌ ಸಂ. +91 9741 357 132)

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group