spot_img
spot_img

ದ್ವಾರ ಬಾಗಿಲುಗಳು ಜನಜೀವನದ ನೈಜ ಪ್ರತಿಬಿಂಬಗಳು – ಈರಣ್ಣ ಕಡಾಡಿ

Must Read

spot_img
- Advertisement -

ಮೂಡಲಗಿ: ಗ್ರಾಮದ ದ್ವಾರ ಬಾಗಿಲುಗಳು ಗ್ರಾಮೀಣ ಜನಜೀವನದ ನೈಜ ಪ್ರತಿಬಿಂಬಗಳಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ವೆಂಕಟಾಪೂರ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡ ದ್ವಾರ ಬಾಗಿಲ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

ನಂತರ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಪುರಾತನ ಕಾಲದಿಂದಲೂ ಪ್ರತಿ ಗ್ರಾಮಕ್ಕೂ ದ್ವಾರ ಬಾಗಿಲುಗಳು ಇರುವುದು ರೂಢಿಗತ ವಾಗಿತ್ತು. ಗ್ರಾಮದ ಹಿರಿಯರೂ ಬಂದು ಕೂಡುತ್ತಿದ್ದರು ಗ್ರಾಮಕ್ಕೆ ಹೊಸಬರು ಬಂದರೇ ಅಥವಾ ಗ್ರಾಮದಿಂದ ಹೊರಗಡೆ ಹೊದರೆ ಗ್ರಾಮದ ಹಿರಿಯರಿಗೆ ಗೊತ್ತಾಗುತಿತ್ತು ಎಂದರು.

- Advertisement -

ಆಧುನಿಕತೆಯ ಭರದಲ್ಲಿ ಈ ಪದ್ದತಿ ನಶಿಸಿ ಹೋಗಿದೆ. ಆದರೆ ವೆಂಕಟಾಪೂರ ಗ್ರಾಮಸ್ಥರು ಶಿಥಿಲಗೊಂಡಿರುವ ದ್ವಾರ ಬಾಗಿಲನ್ನು ಇದ್ದ ಸ್ಥಳದಲ್ಲಿಯೇ ಮತ್ತೊಮ್ಮೆ ಅಭಿವೃದ್ಧಿ ಪಡಿಸಿ ಪ್ರಾರಂಭಿಸುತ್ತಿರುವುದು ಗ್ರಾಮೀಣ ಸಂಸ್ಕೃತಿ ಸೊಗಡಿನ ಪ್ರತೀಕವಾಗಿದೆ ಎಂದರಲ್ಲದೇ ಈ ಕಾಮಗಾರಿಯನ್ನು ಅಂದಾಜು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಗ್ರಾಮದ ಹಿರಿಯರ ವಿಶಾಲ ಕಲ್ಪನೆ, ನಿರ್ಮಾಣ ಮಾಡಲು ಪಟ್ಟ ಪರಿಶ್ರಮ ಹಾಗೂ ಗ್ರಾಮಸ್ಥರ ಸಹಕಾರವನ್ನು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಅವರಾದಿ-ವೆಂಕಟಾಪೂರ ರಸ್ತೆಯ ಕೆ.ಎಂ.ಎಫ್ ಡೈರಿ ಹತ್ತಿರ ಬಸ್ ಪ್ರಯಾಣಿಕರ ನೂತನ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಗ್ರಾಮದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸಂಸದರ ಪ್ರದೇಶಾಭಿವೃದ್ದಿ ನಿಧಿಯನ್ನು ಸಾಧ್ಯವಾದಷ್ಟು ಜನರ, ಗ್ರಾಮದ ಕಲ್ಯಾಣ ಕಾರ್ಯಕ್ಕೆ ಮಂಜೂರಾತಿ ನೀಡಿದ್ದೇನೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಪ್ರಮುಖರಾದ ತಮ್ಮಣ್ಣ ಹೊರಟ್ಟಿ, ಸಂಗಪ್ಪ ಕಂಠಿಕಾರ, ಭೀಮಶಿ ದಳವಾಯಿ, ಶಾಸಪ್ಪಗೌಡ ಪಾಟೀಲ, ಶ್ರೀಶೈಲ ಪೂಜೇರಿ, ರಂಗನಗೌಡ ಪಾಟೀಲ, ಈರಪ್ಪ ಢವಳೇಶ್ವರ, ವೆಂಕಪ್ಪ ಕೋಳಿಗುಡ್ಡ, ಮಾರುತಿ ಹಳ್ಳೂರ, ಯಲ್ಲಪ್ಪ ಗಾಂಜಿ, ಮಾದೇವ ವಟವಟಿ, ಶ್ರೀಕಾಂತ ಕವಟಕೊಪ್ಪ, ಮಾರುತಿ ನಗಚಟ್ಟಿ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group