ಮೂಡಲಗಿ -ಪಟ್ಟಣದ ಆರ್.ಡಿ.ಎಸ್.ಕಾಲೇಜಿನಲ್ಲಿ ಮೂಡಲಗಿಯಲ್ಲಿ, ಬೆಳಗಾವಿ ಜಿಲ್ಲೆಯ 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್,23 ಮತ್ತು 24 ರಂದು ಎರಡು ದಿನ ನಡೆಯಲಿದೆ ಎಂದು ಕ ಸಾ ಪ ಮೂಡಲಗಿ ತಾಲೂಕಾ ಅಧ್ಯಕ್ಷರಾದ ಡಾ. ಸಂಜಯ ಶಿಂಧಿಹಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ಸಾಹಿತಿ ಪ್ರೊ,ಚಂದ್ರಶೇಖರ ಅಕ್ಕಿಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಹೇಶ ಜೋಶಿ ಉದ್ಘಾಟಕರಾಗಿ ಆಗಮಿಸುವರು ಮತ್ತು ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಅಧ್ಯಕ್ಷತೆ ವಹಿಸುವವರು ಎಂದು ಅವರು ತಿಳಿಸಿದ್ದಾರೆ.