spot_img
spot_img

ಡಾ. ಶಶಿಕಾಂತ ಪಟ್ಟಣ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Must Read

- Advertisement -

ಬಸವ ತಿಳಿವಳಿಕೆ ಮತ್ತು ಅಧ್ಯಯನ ಕೇಂದ್ರದ ಅಧ್ಯಕ್ಷ  ಡಾ. ಶಶಿಕಾಂತ ಪಟ್ಟಣ ಅವರ ಬಸವತತ್ವ ಚಿಂತನೆ ಜೊತೆಗೆ ಅವರ ಕನ್ನಡ ಪ್ರೇಮವನ್ನು,ಕಾಳಜಿಯನ್ನು, ಕನ್ನಡ ಪರ ಸೇವೆಯನ್ನು ಗಮನಿಸಿ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ  “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಯನ್ನು ನವೆಂಬರ್ 3 ನೆಯ ತಾರೀಕಿನಂದು ಪ್ರದಾನ ಮಾಡಲಾಗುತ್ತಿದೆ

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಸುಜ್ಞಾನ ವಿದ್ಯಾಪೀಠ, ಸಾಂಸ್ಕೃತಿಕ ರಂಗ ಕಲಾವಿದರ ಸಾಧಕ ಶ್ರೀ ಮಾತಾ ಪ್ರಕಾಶನ (ರಿ), ಕಡಲಬಾಳು ( ತಾ. ಹಗರಿಬೊಮ್ಮನ ಹಳ್ಳಿ ) ಇವರು ಈ ಪ್ರಶಸ್ತಿ ಘೋಷಿಸಿದ್ದು ಮೈಸೂರಿನ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ನೀಡಲಿದ್ದಾರೆ

ಡಾ. ಶಶಿಕಾಂತ ಪಟ್ಟಣ ಅವರು ಇಲ್ಲಿಯವರೆಗೆ 56 ಪುಸ್ತಕಗಳನ್ನು ರಚಿಸಿದ್ದು, ಸದಾ ತಾವೂ ಬರೆಯುವುದಲ್ಲದೆ ಅಕ್ಕನ ಅರಿವು ವೇದಿಕೆಯ ಎಲ್ಲ ಸಹೋದರ -ಸಹೋದರಿಯರಿಗೆ ಕನ್ನಡದ ಲೇಖನಗಳನ್ನು ಬರೆಯಲು ಹಚ್ಚುತ್ತಾರೆ. ಈ ಮೂಲಕ ತನ್ನಿಂದ ತಾನೇ ಅಧ್ಯಯನಶೀಲತೆ,ಬರವಣಿಗೆ, ಸಂವಾದ ಎಲ್ಲವೂ ಹೆಚ್ಚುತ್ತಾ ಹೋಗುತ್ತದೆ. ಯಾವುದೇ ಯೂನಿವರ್ಸಿಟಿಗೆ ಕಮ್ಮಿ ಇಲ್ಲದಂತೆ ವೇದಿಕೆಯ ಕಾರ್ಯಗಳು ಇಡೀ ವರ್ಷ ಸತತವಾಗಿ ಯಾವುದೇ ಅಡೆ -ತಡೆಯಿಲ್ಲದೆ ಸಾಗುತ್ತವೆ.

- Advertisement -

ಕನ್ನಡ ಪುಸ್ತಕಗಳ ಪ್ರಕಟಣೆ ಅವ್ಯಾಹತವಾಗಿ ಮೂಡಿಬರುವುದು ಸಣ್ಣ ಮಾತೇನಲ್ಲ. ಅದೊಂದು ಕನ್ನಡಾoಬೆಗೆ ಸಲ್ಲಿಸುವ ಗೌರವ.ಅದು ಮನದಲ್ಲಿ ಕನ್ನಡದ ಬಗೆಗೆ ಅಪಾರವಾದ ಪ್ರೀತಿ ಇದ್ದಾಗ ಮಾತ್ರ ಸಾಧ್ಯ.

ವೇದಿಕೆಯಿಂದ ಪ್ರತಿ ಶನಿವಾರ ಸಾಯಂಕಾಲ ಮತ್ತು ರವಿವಾರ ಮಧ್ಯಾಹ್ನ ನಡೆಯುವ ಗೂಗಲ್ ಮೀಟಗಳಲ್ಲಿ ಬಸವತತ್ವ ಚಿಂತನೆಯೊಂದಿಗೆ ಕನ್ನಡಕ್ಕಾಗಿ ದುಡಿದ ಮಹನೀಯರು, ಸಾವಿಲ್ಲದ ಶರಣರು, ಶಿವಯೋಗ ಸಾಧಕರು ಹೀಗೆ ಕರ್ನಾಟಕದ ಎಲ್ಲ ಮರೆತುಹೋದ ಮಹನೀಯರನ್ನು ಇನ್ನೊಮ್ಮೆ ಪರಿಚಯಿಸುತ್ತಿರುವ ಘನಕಾರ್ಯಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಒಬ್ಬ ಅತ್ಯದ್ಭುತ ಮಾನವತಾವಾದಿ, ಸಾಮಾಜಿಕ ಕಳಕಳಿಯುಳ್ಳವರು, ಸುತ್ತಮುತ್ತಲಿನ ಆಗುಹೋಗುಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡುವವರು, ನಿಜವಾದ ಬಸವಣ್ಣನವರ ಅನುಯಾಯಿ ಮತ್ತು ಸಂಘಟನೆಯ ಹರಿಕಾರರಾಗಿರುವ ಡಾ.ಶಶಿಕಾಂತ ಪಟ್ಟಣ ಅವರಿಗೆ ಸಂದ ಅತ್ಯಂತ ಮೌಲಿಕವಾದ ಪ್ರಶಸ್ತಿಯಾಗಿದೆಯೆಂದರೆ ಅತಿಶಯೋಕ್ತಿಯಾಗದು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಅಧ್ಯಯನ ಕೇಂದ್ರ – ಪುಣೆ

- Advertisement -
- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group