ಬಸವ ಅಂತರಾಷ್ಟ್ರೀಯ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ -ಪುಣೆಯ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಡಾ. ಸುಧಾ ಕೌಜಗೇರಿ ಅವರು ” ವಚನ ಸಾಹಿತ್ಯದಲ್ಲಿ ಕಾವ್ಯ ಮೀಮಾoಸೆ ” ವಿಷಯ ಕುರಿತು ಮಾತನಾಡಿದರು
ಕಾವ್ಯ ಮೀಮಾoಸೆ ಎನ್ನುವುದು ಜಟಿಲವಾದ ವಿಷಯ ಅಲ್ಲವೇ ಅಲ್ಲ ಎಂದು ನಮ್ಮನ್ನೆಲ್ಲ ಮಾನಸಿಕವಾಗಿ ಸಿದ್ದರನ್ನಾಗಿ ಮಾಡಿ, ಅದು ಜನಕ್ಕೆ ಹಿತವಾದದ್ದು, ಒಳ್ಳೆಯದು, ಮೌಲಿಕ ಬರಹ, ವಿಮರ್ಶೆ, ಮಾನದಂಡ, ಸತ್ವ, ಬೆಲೆ, ಸಾಮರ್ಥ್ಯ, ಪ್ರಯೋಜನ ಮತ್ತು ಅತ್ಯಗತ್ಯವಾದ ವಿಷಯ
ಜೀವನ ಮೀಮಾoಸೆ, ಸಾಮಾಜಿಕ ದರ್ಶನ, ಶುದ್ಧಾತಿಶುದ್ಧ ಮೌಲ್ಯಗಳು ಸಾಹಿತ್ಯ ಶಾಸ್ತ್ರ, ತಾತ್ವಿಕ ವಿಚಾರ ಹೀಗೆ ಅತ್ಯಂತ ಸರಳ ಭಾಷೆಯಲ್ಲಿ ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಹೋದರು.
ಒಂದನೆಯ ಶತಮಾನದಲ್ಲಿ ಭರತನ ನಾಟ್ಯಶಾಸ್ತ್ರದಿಂದ ಭಾರತೀಯ ಕಾವ್ಯ ಮೀಮಾoಸೆ ಪ್ರಾರಂಭವಾಗುತ್ತದೆ. ಸಾಹಿತ್ಯವು ಅಭಿಪ್ರಾಯ, ಭಾವ, ಶಬ್ದ, ಅಭಿನಯ, ರೇಖಾರೂಪ, ವರ್ಣ, ಕಲ್ಲು, ಮರ, ಲೋಹ ಕೆತ್ತನೆ ಹೀಗೆ ವಿವಿಧ ರೂಪದಲ್ಲಿ ವ್ಯಕ್ತವಾಗುತ್ತದೆ. ವಚನ ಸಾಹಿತ್ಯ, ಕಾವ್ಯ ಮೀಮಾಂಸೆ ಎರಡೂ ವಿಭಿನ್ನ. ಕಾವ್ಯ ಎಂದರೆ ಆರನೆಯ ಶತಮಾನದಲ್ಲಿ ಶಬ್ದ ಮತ್ತು ಅರ್ಥವೇ ಕಾವ್ಯದ ಆತ್ಮ, ವಾಮನನ ರೀತಿಯೇ ಕಾವ್ಯದ ಆತ್ಮ ಎಂದು ಹೇಳಿದರೆ, ಕುಂತಲನ್ನು ವಕ್ರೋಕ್ತಿಯೇ ಕಾವ್ಯದ ಆತ್ಮ ಎಂದು ಹೇಳಿದರೆ
ದoಡಿಯ ಗುಣವೇ ಕಾವ್ಯದ ಆತ್ಮ ಎಂದು ಹೇಳಿದರೆ, ಧ್ವನಿಯ ಕಾವ್ಯದ ಆತ್ಮ ಎಂದು ಹೇಳುತ್ತಾನೆ ಎಂದು ವಿವರಿಸಿದರು.
ಗ್ರೀಕ್, ರೋಮ್ ಮೂಲಕ ಯುರೋಪ್ ನಲ್ಲಿ ಪ್ರಾರಂಭವಾದ ಪಾಶ್ಚ್ಯಾತ್ಯ ಕಾವ್ಯ ಮೀಮಾoಸೆ , ಭಾರತದಲ್ಲಿ ಸಂಸ್ಕೃತದ ಮೂಲಕ ಉಗಮವಾಯ್ತು. ನಂತರ ಪ್ರಾದೇಶಿಕವಾಗಿ ಹೊಸ ಹೊಸ ಆಯಾಮಗಳೊಂದಿಗೆ ಮೂಡಿಬಂದಿತು ಎಂದು ನೆನಪು ಮಾಡಿಕೊಂಡರು
ಸ್ಥಾವರಕ್ಕಳಿವುoಟು ಜಂಗಮಕ್ಕಳಿವಿಲ್ಲ, ತೊಟ್ಟು ಕಳಚಿದ ಹಣ್ಣು, ಆನು ಒಲಿದಂತೆ ಹಾಡುವೆ ನಿನಗೆ ಕೇಡಿಲ್ಲವಾಗಿ, ನೀನೊಲಿದರೆ ಕೊರಡು ಕೊನರುವುದು, ಎತ್ತಣ ಮಾಮರ, ಎತ್ತಣ ಕೋಗಿಲೆ, ಕೊಟ್ಟ ಕುದುರೆಯನೇರದವರು, ಅಜ್ಞಾನದ ತೊಟ್ಟಿಲೊಳಗೆ, ಮಾಡುವಂತಿರಬೇಕು ಮಾಡದಂತಿರಬೇಕು, ಹಬ್ಬಕ್ಕೆ ತಂದ ಹರಕೆಯ ಕುರಿ ಹೀಗೆ ಹತ್ತು ಹಲವಾರು ವಚನಗಳ ಅರ್ಥ ವಿಶ್ಲೇಷಣೆಯೊಂದಿಗೆ ಶರಣರ ಸಾದೃಶವಾದ ಒಳತಿರುಳನ್ನು, ವಚನಗಳ ಪರಿಕಲ್ಪನೆಯನ್ನು, ಎಳೆ ಎಳೆಯಾಗಿ ಬಿಚ್ಚಿಟ್ಟು ನಮಗೆಲ್ಲರಿಗೂ ವಿವರಿಸಿದರು.
ಡಾ. ಶಶಿಕಾಂತ ಪಟ್ಟಣ ಅವರು ವಚನಗಳ ಪ್ರಮೇಯ ಮತ್ತು ಪ್ರತಿಮೆಗಳೊಂದಿಗೆ ಉದಕ ಬಾಯಾರಿ ಬಳಲಿತ್ತು ನೋಡಾ ಎನ್ನುವ ವಚನದೊಂದಿಗೆ ಶರಣ ಸಾಹಿತ್ಯದ ಮಹತ್ವವನ್ನು ಹಂಚಿಕೊಳ್ಳುತ್ತಾ, ಬೆಡಗಿನ ವಚನ, ಕಾಲಜ್ಞಾನ ವಚನ, ಟೀಕಿನ ವಚನ, ಸಾಂಗತ್ಯ ವಚನ ಹೀಗೆ ವಚನ ಪ್ರಕಾರಗಳನ್ನು ನಮಗೆಲ್ಲರಿಗೂ ಇನ್ನೊಮ್ಮೆ ನೆನಪು ಮಾಡಿಕೊಟ್ಟರು. ವಚನಗಳು ಕಾಯಕದ ಪಾರಿಭಾಷೆ ಮತ್ತು ದೇಸಿಶೈಲಿಯಲ್ಲಿ ಕೂಡಿದ್ದವು. ಅವು ಎಲ್ಲರಿಗೂ ಆದರ್ಶಪ್ರಾಯವಾಗಿದ್ದವು ಎಂದು ಹೇಳುತ್ತಾ ಮಲ್ಲಿಕಾರ್ಜುನ ಮನ್ಸೂರ ಅವರು ಹೇಗೆ ವಚನಗಳನ್ನು ಸಂಗೀತದ ಮೂಲಕ ಸಾದರಪಡಿಸಿದರು ಎಂದು ತಮ್ಮ ಮಾರ್ಗದರ್ಶನದ ನುಡಿಗಳನ್ನಾಡಿದರು.
ಡಾ. ದಾನಮ್ಮ ಝಳಕಿ ಅವರ ಸ್ವಾಗತ, ಡಾ. ಮೃತ್ಯುಂಜಯ ಶೆಟ್ಟರ ಅವರ ವಚನ ಪ್ರಾರ್ಥನೆ, ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಮಂಗಳ ಮತ್ತು ಡಾ.ಶಶಿಕಾಂತ ಪಟ್ಟಣ ಸರ್ ಅವರ ಕಾರ್ಯಕ್ರಮ ನಿರ್ವಹಣೆಯಿಂದ ಕಾರ್ಯಕ್ರಮ ಸಮರ್ಪಕವಾಗಿ ಮೂಡಿಬಂದಿತು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಅಧ್ಯಯನ ಕೇಂದ್ರ – ಪುಣೆ