spot_img
spot_img

ಕಾಯಕದೊಂದಿಗೆ ದಾಸೋಹವಿರಲಿ – ಶರಣೆ ಮೀನಾಕ್ಷಿ ಸೂಡಿ

Must Read

spot_img
- Advertisement -

ಲಿಂಗಾಯಿತ ಸಂಘಟನೆ ಡಾ.ಫ, ಗು,ಹಳಕಟ್ಟಿ ಭವನ, ಬೆಳಗಾವಿ ಇಲ್ಲಿ ದಿನಾಂಕ 27  ರವಿವಾರ ಶರಣ ಸಾಮೂಹಿಕ ಪ್ರಾರ್ಥನೆ ಜರುಗಿತು.ಶರಣೆ ಮೀನಾಕ್ಷಿ ಸೂಡಿ ಅವರಿಂದ “ಶರಣರ ದೃಷ್ಟಿಯಲ್ಲಿ ದಾಸೋಹದ ಪರಿಕಲ್ಪನೆ” ಕುರಿತು ಉಪನ್ಯಾಸ ಜರುಗಿತು.

ಮರವಿದ್ದು ಫಲವೇನು ನೆರಳಿಲ್ಲದ್ದನ್ನಕ್ಕ ಎಂಬ ಅಕ್ಕಮಹಾದೇವಿ ವಚನ ಉದಾಹರಿಸುತ್ತಾ ಕಾಯಕವಿದ್ದು ಫಲವೇನು ದಾಸೋಹವಿಲ್ಲದ್ದನ್ನಕ್ಕ ಎಂಬ ನುಡಿಗಳನ್ನು ಚರ್ಚಿಸುತ್ತಾ ಶರಣ ಸಂಸ್ಕೃತಿಯ ಮೌಲ್ಯಯುತ ಸಿದ್ಧಾಂತಗಳಾದ ಕಾಯಕ ಮತ್ತು ದಾಸೋಹದ ವಿಶಾಲ ವ್ಯಾಪ್ತಿಯನ್ನು ಹಾಗೂ ದಾಸೋಹದ ಮೂಲ ತತ್ವಗಳಾದ ಸಹಪಂಕ್ತಿ, ಸಹಭೋಜನ, ಸಮಭಾವ, ಸಮನ್ವಯತೆಗಳ ಅರಿವು ಪ್ರತಿಯೊಬ್ಬ ಶರಣರಲ್ಲಿ ಸಾಕಾರಗೊಳ್ಳಬೇಕು. ಹಾಗೂ ಶರಣ ಸಂಸ್ಕೃತಿ ನೇರವಾಗಿ ಮಕ್ಕಳಿಗೆ ನೀಡುವ ಸಂಸ್ಕಾರವಾಗಬೇಕು.ಮಕ್ಕಳಿಗೆ ಬಾಲ್ಯದಿಂದಲೇ ಶರಣ ಸಂಸ್ಕೃತಿಯ ಮೌಲ್ಯಯುತ ಸಿದ್ಧಾಂತಗಳಾದ ಕಾಯಕ ಮತ್ತು ದಾಸೋಹದ ಅರಿವು ಮೂಡಿಸಬೇಕು.ಅಕ್ಷರ ದಾಸೋಹ,ಅನ್ನದಾಸೋಹ, ನಂಬಿಕೆ ದಾಸೋಹ, ಭಕ್ತಿದಾಸೋಹದ ವಿಶಾಲ ವ್ಯಾಪ್ತಿಯನ್ನು ಚರ್ಚಿಸುತ್ತ ದಾಸೋಹದ ಬಗ್ಗೆ ಮಾರ್ಮಿಕವಾಗಿ ಮನಮುಟ್ಟುವಂತೆ ತಿಳಿಸಿದರು.

ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿಯವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ  ವಿ ,ಕೆ,ಪಾಟೀಲ್, ಬಿ ಪಿ. ಜವಣಿ,ಮ೦ಗಳಾ ಕಾಗತಿಕರ, ಲಲಿತಾ ವಾಲಿ,ಇಟಗಿ,ಸುವರ್ಣ ಗುಡಸ, ಸುನೀಲ ಸಾಣಿಕೊಪ್ಪ, ಪ್ರಸಾದ ಹಿರೇಮಠ,ಶ೦ಕರ ಗುಡಸ,ಬಸವರಾಜ ಬಿಜ್ಜರಗಿ, ಜ್ಯೋತಿ ಬದಾಮಿ,ಸುಜಾತಾ ಮತ್ತಿ ಕಟ್ಟಿ, ಶ್ರೀದೇವಿ ನರಗುಂದ ಉಪಸ್ಥಿತರಿದ್ದರು.

- Advertisement -

ಆಹಾನ ಮುಕುಂದ್ ಕಾಗತಿಕರ ಅವರು ದಾಸೋಹ ಸೇವೆಗೈದರು. ಎಂ,ವೈ,ಮೆಣಸಿನಕಾಯಿ ಅವರು ಪರಿಚಯಿಸಿದರು. ಸ೦ಗಮೇಶ ಅರಳಿ ನಿರೂಪಿಸಿದರು
ಸುರೇಶ ನರಗುಂದ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group