ಮೂಡಲಗಿ: ‘ಮನುಷ್ಯನು ಅಂತರಂಗದ ಶ್ರೀಮಂತಿಕೆಯನ್ನು ವೃದ್ಧಿಸಿಕೊಳ್ಳುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ಪಡೆಯಬೇಕು’ ಎಂದು
ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠದ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ
ಅವರು ಶರಣರ ಕಾಯಕ ಮತ್ತು ದಾಸೋಹವು ಸಮಾಜಕ್ಕೆ ನೀಡಿರುವ ಬಹುದೊಡ್ಡ ಆದರ್ಶಗಳಾಗಿದ್ದು, ಶರಣರು ನೀಡಿದ ಸಂದೇಶಗಳನ್ನು ಅನುಸರಿಸುವ ಮೂಲಕ ಜೀವನವನ್ನು ಆನಂದವನ್ನಾಗಿಸಬೇಕು ಎಂದರು.
ಜನರು ಆಡಂಬರತೆಯಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಸಮಾಜದಲ್ಲಿ ಶಾಂತಿ, ಸಮೃದ್ಧಿ ಮತ್ತು ಸದ್ಭಾವ ತಂದುಕೊಳ್ಳಬೇಕಾದರೆ ಅದಕ್ಕೆ
ಒಂದೇ ದಾರಿ ಆಧ್ಯಾತ್ಮಿಕ ಮತ್ತು ಶರಣರ ನುಡಿ ಪಾಲಿಸುವುದು ಎಂದರು.
ಗೋಕಾಕ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಜ್ಞಾನ ಶಿಕ್ಷಕ ರಮೇಶ ಮಿರ್ಜಿ ಮನೆ ನೋಡಾ ಬಡವರು ಮನ ನೋಡಾ ಘನ ವಿಷಯ ಕುರಿತು ಮಾತನಾಡಿ,
ಅಂತರಾಳದ ಶ್ರೀಮಂತಿಕೆಯು ಬಳಸಿದಂತೆ ಬೆಳೆಯುತ್ತದೆ, ಆರ್ಥಿಕ ಶ್ರೀಮಂತಿಕೆಯು ಬಳಸಿದಂತೆ ಕರಗುತ್ತದೆ ಶೂನ್ಯವಾಗುತ್ತದೆ ಬದುಕು ಸಹ ಶೂನ್ಯವಾಗುತ್ತದೆ, ಶರಣರಂತೆ ಬದುಕುವುದನ್ನು ಕಲಿಯಬೇಕಾಗಿದೆ ಎಂದರು.
ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ, ಲಕ್ಷ್ಮೀ ಪೂಜಾರಿ, ಬಾಬುರಾವ ಬೆಳವಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು. ಗಣೇಶವಾಡಿ, ಹೊಸೂರ
ಗ್ರಾಮದ ಭಕ್ತರಿಂದ ದಾಸೋಹ ಸೇವೆ ಜರುಗಿತು.
ಅಪ್ಪಾಸಾಹೇಬ ಕುರುಬರ ಬಳಗದಿಂದ ಸಂಗೀತ ಸೇವೆ ಜರುಗಿತು, ಪ್ರೊ. ವಿ.ಕೆ. ನಾಯಿಕ ನಿರೂಪಿಸಿದರು.