Homeಸುದ್ದಿಗಳುಕಾಂಗ್ರೆಸ್ ಶಾಸಕರಾರೂ ಮಾರಾಟಕ್ಕಿಲ್ಲ - ಶಾಸಕ ಸವದಿ

ಕಾಂಗ್ರೆಸ್ ಶಾಸಕರಾರೂ ಮಾರಾಟಕ್ಕಿಲ್ಲ – ಶಾಸಕ ಸವದಿ

ಕಾಂಗ್ರೆಸ್ ಶಾಸಕರು ಮಾರಾಟಕ್ಕಿಲ್ಲ ನಾವೆಲ್ಲರೂ ಸ್ವಾಭಿಮಾನಿಗಳು : ಶಾಸಕ ಲಕ್ಷ್ಮಣ ಸವದಿ

ಕಾಗವಾಡ : ನಾವು ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಸ್ವಾಭಿಮಾನಿಗಳಿದ್ದೇವೆ ಕಾಂಗ್ರೆಸ್ ಪಕ್ಷದ ಶಾಸಕರು ಮಾರಾಟಕ್ಕಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ಪಟ್ಟಣದಲ್ಲಿ ದಿ. ೧೫ ರಂದು  ವಕೀಲರು ನಡೆಸುತ್ತಿದ್ದ ಮುಷ್ಕರದ ಸ್ಥಳಕ್ಕೆ ಭೇಟಿ  ನೀಡಿ, ಅವರ ಅಹವಾಲನ್ನು ಸ್ವೀಕರಿಸಿ ನಿಮ್ಮ ನ್ಯಾಯಯುತ ಬೇಡಿಕೆಯನ್ನು ಮುಖ್ಯಮಂತ್ರಿ, ಕಾನೂನು ಹಾಗೂ ಕೃಷಿ ಮಾರುಕಟ್ಟೆ ಸಚಿವರೊಂದಿಗೆ ಚರ್ಚಿಸಿ ಅವರಿಗೆ ನ್ಯಾಯ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಯವರು, ಕಾಂಗ್ರೆಸ್ ಪಕ್ಷದ ಶಾಸಕರಿಗೆ ತಲಾ 50 ಕೋಟಿ ರೂ ಆಮಿಷ ಒಡ್ಡಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, 50 ಕೋಟಿ ಅಲ್ಲ, 100 ಕೋಟಿ ಕೊಟ್ಟರೂ ನಮ್ಮ ಶಾಸಕರು ಯಾರು ಮಾರಾಟಕ್ಕಿಲ್ಲ. ನಮ್ಮ ಮುಖ್ಯಮಂತ್ರಿಗಳು ಆ ರೀತಿ ಹೇಳಿದ್ದಾರೆಂದರೆ ಅವರ ಬಳಿ ಬಲವಾದ ಸಾಕ್ಷಿ ಇರಬಹುದು. ಅದಕ್ಕೆ ಅವರು ಆ ರೀತಿ ಹೇಳಿರಬಹುದು. ಆದರೆ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಸ್ವಾಭಿಮಾನಿಗಳಾಗಿದ್ದಾರೆ. ಯಾರೂ ಮಾರಾಟಕ್ಕಿಟ್ಟಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಿಜೆಪಿಯವರು ಏನೇ ತಿಪ್ಪರಲಾಗ ಹಾಕಿದರೂ ಅವರ ಆಸೆ ಈಡೇರುವುದಿಲ್ಲ ಎಂದು ಸವದಿ ನುಡಿದರು

RELATED ARTICLES

Most Popular

error: Content is protected !!
Join WhatsApp Group