ಮೂಡಲಗಿ: ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಿಂಚಣಿದಾರರಿಗೆ ವಿವಿಧ ಸಾಲದ ಯೋಜನೆಗಳು ಇದ್ದು ಪಿಂಚಣಿದಾರರು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಎಸ್‌ಬಿಐ ಮೂಡಲಗಿ ಶಾಖೆಯ ಹಿರಿಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಅವರು ಹೇಳಿದರು.
ಇಲ್ಲಿಯ ಸ್ಟೇಟ್ ಬ್ಯಾಂಕ್ ಇಂಡಿಯಾ ಕಚೇರಿಯಲ್ಲಿ ಪಿಂಚಣಿದಾರರಿಗೆ ಬ್ಯಾಂಕ್ ಸೌಲಭ್ಯಗಳು ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಡಿಮೆ ಬಡ್ಡಿ ದರ ಮತ್ತು ಹೆಚ್ಚು ಕಂತುಗಳಲ್ಲಿ ಮರಳಿ ಕೊಡುವ ಸಾಲದ ಯೋಜನೆಗಳಿದ್ದು ಪಿಂಚಣಿದಾರರಿಗೆ ಯಾವುದೇ ದಾಖಲೆಗಳು ಇಲ್ಲದೆ ಸಾಲವನ್ನು ಕಡಿಮೆ ಅವಧಿಯಲ್ಲಿ ನೀಡಲಾಗುವುದು ಎಂದರು.
ಎಸ್‌ಬಿಐ ಅಮೃತ ವೃಷ್ಟಿ ಠೇವಣಿ ಸೇರಿದಂತೆ ಡಿಬೆಂಚರ್‌ಗಳಲ್ಲಿ ಉಳಿತಾಯ ಮಾಡುವ ಅವಕಾಶಗಳು ಇದ್ದು ಠೇವಣಿ ಇಡುವ ಹಣಕ್ಕೆ ಭದ್ರತೆ ಇರುತ್ತದೆ ಎಂದರು.
ಎಸ್‌ಬಿಐ ಯೋನೋ ಆಪ್. ಪೆನಶೆನ್ ಸೇವಾ ಆಪ್‌ಗಳ ಬಳಕೆಯ ಬಗ್ಗೆ ತಿಳಿಸಿದರು. ಸಹಾಯಕ ಪ್ರಬಂಧಕರಾದ ಹಣಮಂತ ವ್ಯಾಪಾರಿ, ರಾಜು ಕಾನಡಾ, ವಿಜಯಕುಮಾರ ಧಾನಾವಥ ಬ್ಯಾಂಕ್ ಸೌಲಭ್ಯಗಳ ಕುರಿತು ತಿಳಿಸಿದರು.
ನಿವೃತ್ತ ಪ್ರಾಚಾರ್ಯರಾ ಪ್ರೊ. ಆರ್.ಎ.ಶಾಸ್ತ್ರಿಮಠ, ಪ್ರೊ. ಹೊಂಗಲ, ಪಿ.ಕೆ. ರಡ್ಡೇರ, ಖಾನಟ್ಟಿಯ ಗುಗ್ಗರಿ, ಎಸ್.ಎ. ಶಾಸ್ತ್ರಿಮಠ, ಬಿ.ಸಿ. ಪಾಟೀಲ, ಬಾಲಶೇಖರ ಬಂದಿ ಸೇರಿದಂತೆ ವಿವಿಧ ಇಲಾಖೆಯ ಪಿಂಚಣಿದಾರರು ಭಾಗವಹಿಸಿದ್ದರು.