spot_img
spot_img

ಕೆ.ಜಿ.ಕೊಪ್ಪಲಿನ ಕನ್ನಡ ಗೆಳೆಯರ ಬಳಗದಲ್ಲಿ ಕನಕದಾಸ ಜಯಂತಿ

Must Read

- Advertisement -

ಮೈಸೂರು -ಕನ್ನೇಗೌಡನಕೊಪ್ಪಲಿನ ಕನ್ನಡ ಗೆಳೆಯರ ಬಳಗದಲ್ಲಿ ಇಂದು ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕ, ಕ್ರೀಡಾಪಟು ಧನಗಳ್ಳಿ ಡಿ.ಶಿವಶಂಕರ್ ಅವರು ದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು.

ದೇವರು ಮಾನವರ ನಡುವೆ ಕಟ್ಟಿದ್ದ ಕೃತಕ ಗೋಡೆಗಳನ್ನು ಮೀರಿ, ಬೆಳೆದ ಕ್ರಾಂತಿ ಬೆಳಕು ಕನಕದಾಸರು. ಕನಕದಾಸರು ಭಕ್ತಿಯ ಶ್ರೇಷ್ಠತೆಗೆ ಹೆಸರಾದವರು. ಅವರ ಕೃತಿ ರಾಮಧಾನ್ಯದ ಕಣಕಣದಲ್ಲಿ ಶ್ರೇಷ್ಠತೆಗೆ ಹೊಸ ವೈಚಾರಿಕತೆಗೆ ಬೆಳಕನ್ನು ತೋರಿದ ಭಕ್ತ ಶ್ರೇಷ್ಠರು ಎಂದರಲ್ಲದೇ, ಮನುಷ್ಯ ಕುಲದ ಅನಿಷ್ಟವೆಂದು ಜಾತಿಯನ್ನು ವಿರೋಧಿಸಿದವರು. ಜಾತಿ, ಮತ, ಕಾಲ, ಧರ್ಮವನ್ನು ಮೀರಿ ನಿಲ್ಲುವ ಸಾಂಸ್ಕೃತಿಕ ಸಂದೇಶ ಚಿಂತಕರಾಗಿ ದಾಸಶ್ರೇಷ್ಠರನ್ನು ಕಾಣಬಹುದು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಗೆಳೆಯರ ಬಳಗದ ಗೌರವ ಅಧ್ಯಕ್ಷರಾದ ಬಿ.ಭೈರಪ್ಪ ಅವರು ಕನಕದಾಸರ ಕೀರ್ತನೆಗಳು ಸರ್ವ ಕಾಲಗಳಿಗೂ ಶ್ರೇಷ್ಠತೆಯನ್ನು ತರುತ್ತದೆ. ದಾಸ ಸಾಹಿತ್ಯದಲ್ಲಿ ಮೆರುಗನ್ನು ತೋರಿಸಿದ ಸಂತರು ಕನಕದಾಸರು. ಯುವ ಜನಾಂಗ ಕನಕದಾಸರ ಕೀರ್ತನೆಗಳನ್ನು ಓದುವುದರ ಮೂಲಕ ಅವರ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಗೌರವ ಕಾರ್ಯದರ್ಶಿ, ಸಮಾಜ ಸೇವಕರಾದ ಲಿಂಗರಾಜು ನಗರತಳ್ಳಿಯವರು ವಹಿಸಿ, ಕಾಲಜ್ಞಾನಿ ಕನಕ ಸರ್ವಕಾಲಕ್ಕೂ ಶ್ರೇಷ್ಠತೆಯನ್ನು, ಜ್ಞಾನವನ್ನು ನೀಡುವ ಸಮಾನತೆಯ ಹರಿಕಾರರು ಎಂದು ಮಾತನಾಡಿದರು. ವೇದಿಕೆಯಲ್ಲಿ ಸಮಾಜ ಸೇವಕರಾದ ಮಲ್ಲಣ್ಣ, ಜಯರಾಂ, ಬಸವಣ್ಣ, ಮೋಹನ್ ಕುಮಾರ್, ತುಷಾರ್ ಇದ್ದರು.

- Advertisement -
- Advertisement -

Latest News

ಪೌರಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಮುದಾಯ ಸಹಕರಿಸಲಿ- ಬಾಲಚಂದ್ರ ಜಾಬಶೆಟ್ಟಿ.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆ ಕುರಿತ ಉಪನ್ಯಾಸ   ಧಾರವಾಡ- ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ವಿಶೇಶ ಉಪನ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group