ಮಂಡ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿಗಳಿಗೆ ಡಾ. ಮಹೇಶ್ ಜೋಷಿ ಸ್ವಾಗತ

Must Read

ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆ ಅಗಮಿಸುವಂತೆ, ಮೈಸೂರಿನ ಹಿರಿಯ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾದ ಡಾ. ಮಹೇಶ್ ಜೋಶಿ ಅವರು ಸ್ವಾ ಗತಿಸಿದರು.

ಹಿರಿಯ ಸಾಹಿತಿಗಳಾದ ಎಸ್.ಎಲ್. ಬೈರಪ್ಪನವರು, ಸಿ. ಪಿ. ಕೆ. ಅವರು, ಕೆ. ಎಸ್. ಭಗವಾನ್, ಕುವೆಂಪು ಅವರ ಪುತ್ರಿ ತಾರಿಣಿ ಹಾಗೂ ಅಳಿಯ ಚಿದಾನಂದ ಗೌಡ ರಾಜ ಮಾತೆ ಶ್ರೀಮತಿ ಪ್ರಮೋದ ದೇವಿ ಒಡೆಯರ್, ಡಾ. ವೆಂಕಟಾಚಲ ಶಾಸ್ತ್ರಿ ಇವರುಗಳನ್ನು ಭೇಟಿ ಮಾಡಿದ ಮಹೇಶ್ ಜೋಷಿ ಅವ್ರು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳು ವಂತೆ ಎಲ್ಲ ಗಣ್ಯರನ್ನು ಕೋರಿದರು.

ಹಿರಿಯ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್, ಮ್ಯಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕ. ಸಾ. ಪ. ಅದ್ಯಕ್ಷರ ಕಾರ್ಯದರ್ಶಿ
ಶ್ರೀನಿವಾಸ ಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿ ಗೊ ರು ಚನ್ನ ಬಸಪ್ಪ ಅವರು ಆಯ್ಕೆ ಆಗಿರುವ ಬಗ್ಗೆ ಎಲ್ಲ ಗಣ್ಯರು ಸಂತಸ ವ್ಯಕ್ತಪಡಿಸಿದರು.

ಅಭಿನಂದನೆ :

ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಆದ್ಯಕ್ಷರಾಗಿ ಆಯ್ಕೆ ಗೊಂಡಿರುವ ಹಿರಿಯ ಸಾಹಿತಿಗಳಾದ ಹಾಗೂ ಜನಪದ ಚಿಂತಕರಾದ ಗೊ ರು ಚನ್ನಬಸಪ್ಪ ಅವರಿಗೆ ಕನ್ನಡ ಸಾಹಿತ್ಯ ಪರಿಷ ತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ, ಡಾ. ಭೇರ್ಯ ರಾಮಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group