spot_img
spot_img

ರಾಜಯೋಗಿನಿ ಬ್ರಹ್ಮಕುಮಾರಿ ಸೀತಾಲಕ್ಷ್ಮಿ ಬೆಹನ್ ಜಿ ನಿಧನ

Must Read

spot_img
    ಮೈಸೂರು ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಗಾಯತ್ರಿಪುರಂ ಸೇವಾಕೇಂದ್ರದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ  ಸೀತಾಲಕ್ಷ್ಮಿಬೆಹೆನ್ ಜೀ (75) ನೆನ್ನೆ ರಾತ್ರಿ ನಿಧನ ಹೊಂದಿದರು.
   ಇವರು ಈಶ್ವರೀಯ ವಿಶ್ವವಿದ್ಯಾಲದಲ್ಲಿ 50 ವರ್ಷಗಳಿಂದ ಸಮರ್ಪಿತರಾಗಿ ರಾಜಯೋಗ ಶಿಕ್ಷಕಿಯಾಗಿ ಸಂಚಾಲಕರಾಗಿ ಮೈಸೂರು ಮಂಡ್ಯ ಹಾಸನ ಮಡಕೇರಿ ಚಾಮರಾಜನಗರ ಜಿಲ್ಲೆಗಳ ಸೇವಾ ಕೇಂದ್ರಗಳಲ್ಲಿ ಯಾವುದೇ ಸಂಭಾವನೆ ಇಲ್ಲದೆ ಗೌರವನ್ವಿತಾರಾಗಿ ಸೇವೆ ಸಲ್ಲಿಸಿ ಅಪಾರ ರಾಜಯೋಗ ವಿದ್ಯಾರ್ಥಿಗಳನ್ನು ಹೊಂದಿದ್ದರು.
   ಇವರ ಪಾರ್ಥೀವ ಶರೀರವನ್ನು ಹುಣಸೂರು ರಸ್ತೆಯಲ್ಲಿರುವ ಓಂಶಾಂತಿ ರಿಟ್ರೀಟ್ ಸೆಂಟರ್ ನಲ್ಲಿ ದರ್ಶನಕ್ಕಾಗಿ ಇಡಲಾಗಿದೆ. ಮೃತರ ಅಂತ್ಯಕ್ರಿಯೆಯನ್ನು ಹೂಟಗಳ್ಳಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಉಪವಲಯದ ಮುಖ್ಯಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜೀ, ಪ್ರಭಾಮಣೀಜೀ, ರಾಜಯೋಗಿನಿ ಬ್ರಹ್ಮಾಕುಮಾರೀ ದಾನೇಶ್ವರೀಜೀ, ಪ್ರಾಂಶುಪಾಲರಾದ ಬಿಕೆ ರಂಗನಾಥ ಶಾಸ್ತ್ರೀಜೀ, ಗಾಯತ್ರೀಜೀ, ಶಾರದಾಜೀ, ರತ್ನಾಜೀ ಸೇರಿದಂತೆ  ಸಮಸ್ತ ರಾಜಯೋಗ ಶಿಕ್ಷಕಿಯರು, ರಾಜಯೋಗ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.
- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group