spot_img
spot_img

ವಿಭಾಗೀಯ ಮಟ್ಟಕ್ಕೆ ಆಯ್ಕೆ

Must Read

- Advertisement -

ಸಿಂದಗಿ : ಇಲ್ಲಿನ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಜಯಪುರ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸ್ಥಳೀಯ ಪಿ.ಇ.ಎಸ್. ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ ಪ್ರೀತಮ್ ಶಾಬಾದಿ (ಪ್ರಥಮ) ಚಿತ್ರಕಲೆ, ಕುಮಾರಿ ಭವಾನಿ ಪಾಟೀಲ (ಪ್ರಥಮ) ಪ್ರಬಂಧ ಸ್ಪರ್ಧೆ ಹಾಗೂ ಕುಮಾರ ಸೋಮರಾಯ ಪೂಜಾರಿ (ದ್ವಿತೀಯ) ಜನಪದ ಗೀತೆ ಸ್ಥಾನ ಪಡೆಯುವುದರ ಮೂಲಕ ವಿಭಾಗೀಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಸಂತೋಷಕುಮಾರ ಭೀ. ಕರ್ಜಗಿ, ಗೌರವಕಾರ್ಯದರ್ಶಿಗಳಾದ ಬಿ.ಪಿ. ಕರ್ಜಗಿ, ಆಡಳಿತಾಧಿಕಾರಿಗಳಾದ ಆಯ್.ಬಿ. ಬಿರಾದಾರ, ಮಾರ್ಗದರ್ಶಕರಾದ ಕೆ.ಎಚ್. ಸೋಮಾಪೂರ, ಪ್ರಾಚಾರ್ಯರಾದ ಆರ್.ಬಿ. ಗೋಡಕರ, ಜಿ.ಎಸ್. ಕಡಣಿ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group