ಹುನಗುಂದ – ಜನರ ಕಲ್ಯಾಣಕ್ಕಾಗಿ ಮತ್ತು ಧರ್ಮ ಜಾಗೃತಿಗಾಗಿ ಗುಳೇದಗುಡ್ಡದ ಒಪ್ಪತ್ತೇಶ್ವರ ಮಹಾಸ್ವಾಮಿಗಳು ನೇತೃತ್ವದಲ್ಲಿ ಹಾಗೂ ಹಡಗಲಿ ನಿಡಗುಂದಿಯ ರುದ್ರಮುನಿಶ್ರೀಗಳು ಅಮೀನಗಡ ಪ್ರಭುಶಂಕರ್ ರಾಜೇಂದ್ರ ಶ್ರೀಗಳು ಪೂರ್ತಿಗೇರಿ ಶ್ರೀಗಳು ಹುನಗುಂದದ ಗಚ್ಚಿನಮಠದ ಅಮರೇಶ್ವರ ದೇವರು ಹಾಗೂ ನೂರಾರು ಭಕ್ತರೊಂದಿಗೆ ತಾಲೂಕಿನ ಬೇವಿನಮಟ್ಟಿಯಿಂದ ತಿಮ್ಮಾಪುರ ಮಾರ್ಗವಾಗಿ ತಾಲೂಕಿನ ಸುಕ್ಷೇತ್ರ ಅಣ್ಣ ಬಸವಣ್ಣನ ಐಕ್ಯ ಸ್ಥಳ ಕೂಡಲಸಂಗಮಕ್ಕೆ ಪಾದಯಾತ್ರೆ ದಿ. 30ರಂದು ಶನಿವಾರ ಮುಂಜಾನೆ ಪ್ರಾರಂಭಗೊಳ್ಳಲಿದೆ ಎಂದು ಒಪ್ಪತ್ತೇಶ್ವರ ಮಠದ ಶ್ರೀಗಳು ತಿಳಿಸಿದ್ದಾರೆ
ಪಾದಯಾತ್ರೆಯು ಬೇವಿನಮಟ್ಟಿ ಗ್ರಾಮದಿಂದ ಪ್ರಾರಂಭಗೊಂಡು ಬೇವಿನಮಟ್ಟಿ ಕ್ರಾಸ್ ನಂತರ ರಕ್ಕಸಗಿ ರಸ್ತೆಯ ಮೂಲಕ ತಿಮ್ಮಾಪುರ ರಸ್ತೆಯ ಮೂಲಕ ಸಂಜೆ ತಿಮ್ಮಾಪುರ ಗ್ರಾಮವನ್ನು ತಲುಪಲಿದೆ
ಧಾರ್ಮಿಕ ಸಭೆ: ತಿಮ್ಮಾಪುರ ಗ್ರಾಮದ ಮಾರುತೇಶ್ವರ ಬಸವೇಶ್ವರ ಕಾರ್ತಿಕೋತ್ಸವ ಮುಕ್ತಾಯ ಸಮಾರಂಭ ಹಾಗೂ ಪಾದಯಾತ್ರೆ ಕೈಗೊಂಡ ಶ್ರೀಗಳವರಿಗೆ ಮತ್ತು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ರಸಪ್ರಶ್ನೆ ಸ್ಪರ್ದೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರೀಮತಿ ಗೀತಾ ತಾರಿವಾಳ ಹಾಗೂ ಎಸ್ ಆರ್ ಕೆ ಫೌಂಡೇಶನ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಹುನಗುಂದ ತಾಲೂಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗ್ರಾಮದ ಶಿಕ್ಷಕಿ ಶಾರದಾ ಹೂಲಗೇರಿ ಅವರುಗಳನ್ನು ಸನ್ಮಾನಿಸಲಾಗುವುದು ನಂತರ ಕಾರ್ತಿಕೋತ್ಸವದ ನಿಮಿತ್ತ ವಿವಿಧ ಭಜನಾ ಮೇಳಗಳಿಂದ ಶಿವ ಭಜನ ಕಾರ್ಯಕ್ರಮ ಜರುಗಲಿದೆ ಪಾದಯಾತ್ರೆ ಕೈಗೊಂಡ ಸ್ವಾಮೀಜಿಗಳು ಹಾಗೂ ಭಕ್ತರು ವಾಸ್ತವ್ಯ ಹೂಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ