Homeಸುದ್ದಿಗಳುಸೀತಾ ಲಕ್ಷ್ಮೀ ಬೆಹೆಂಜೀಯವರಿಗೆ ಪುಷ್ಪ ನಮನ ಸಮರ್ಪಣೆ 

ಸೀತಾ ಲಕ್ಷ್ಮೀ ಬೆಹೆಂಜೀಯವರಿಗೆ ಪುಷ್ಪ ನಮನ ಸಮರ್ಪಣೆ 

 ಮೈಸೂರು-  ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಗಾಯತ್ರಿ ಪುರಂ ಸೇವಾಕೇಂದ್ರದ ಮುಖ್ಯ ಸಂಚಾಲಕಿ ದಿವಂಗತ ರಾಜಯೋಗಿನಿ ಬ್ರಹ್ಮಾಕುಮಾರಿ ಸೀತಾ ಲಕ್ಷ್ಮೀ ಬೆಹೆಂಜಿಯವರ ಪುಷ್ಪ ನಮನ ಕಾರ್ಯಕ್ರಮವನ್ನು ಹುಣಸೂರು ರಸ್ತೆಯಲ್ಲಿರುವ ರಾಜಯೋಗ ರಿಟ್ರೀಟ್ ಸೆಂಟರ್ ನಲ್ಲಿ ಏರ್ಪಡಿಸಲಾಗಿತ್ತು.
    ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಸೀತಕ್ಕ ರವರು ಇಳಿ ವಯಸ್ಸಿನಲ್ಲಿ ಇದ್ದರೂ ಸ್ವಲ್ಪ ಸಮಯವನ್ನು ವ್ಯರ್ಥ ಮಾಡದೆ ಈಶ್ವರನ ಸೇವೆಯಲ್ಲಿ ಹಗಲಿರುಳು  ತಮ್ಮನ್ನು ತಾವು ತೊಡಗಿಸಿಕೊಂಡು ಸುಸ್ತಿಲ್ಲದೆ ಸೇವೆಯನ್ನು ಸಲ್ಲಿಸುತ್ತಿದ್ದರು. ಇದು ಇಂದಿನ ಯುವ ಬ್ರಹ್ಮಾಕುಮಾರ ಬ್ರಹ್ಮಾಕುಮಾರಿಯರಿಗೆ ಪ್ರೇರಣೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಯೋಗ ಭವನದ ನಾಗರಾಜ್ ಭಾಯ್, ಪ್ರಾಣೇಶ್ ಬಾಯ್, ಪ್ರಾಂಶುಪಾಲರಾದ ರಂಗನಾಥ ಶಾಸ್ತ್ರೀಜಿ, ಬಿಕೆ ಶಾರದಾಜಿ, ಬಿಕೆ ಲಲಿತಮಣೀಜೀ, ಅಮೃತಕ್ಕ, ಮೋಹನಕ್ಕ, ನಾಗಶ್ರೀ ಅಕ್ಕ, ಪ್ರಭಾಮಣೀಜೀ, ಸ್ವಾಮಿ ವಿವೇಕಾನಂದ  ಸದ್ಭಾವನಾ ರಾಜ್ಯ  ಪ್ರಶಸ್ತಿ ಪುರಸ್ಕೃತೆ ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ, ರಮಾಜಿ, ಓಂ ಶಾಂತಿ ನ್ಯೂಸ್ ಸರ್ವಿಸ್ನ ಬಿಕೆ ಆರಾಧ್ಯ ಹಾಜರಿದ್ದರು
RELATED ARTICLES

Most Popular

error: Content is protected !!
Join WhatsApp Group