- Advertisement -
ವಿಜಯಪುರದಲ್ಲಿರುವ ಶ್ರೀ ಗುರು ನೀಲಕಂಠೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ನಿರಂತರವಾಗಿ ಶ್ರೀ ಗುರು ನೀಲಕಂಠೇಶ್ವರನಿಗೆ ವಿಶೇಷ ಕಾರ್ತಿಕ ಪೂಜೆಯನ್ನು ನೆರವೇರಿಸಲಾಗುತ್ತಿತ್ತು, ದಿ 2-12-24 ರಂದು ಸೋಮವಾರ ಸಾಯಂಕಾಲ ದೀಪಗಳನ್ನು ಬೆಳಗಿಸುವುದರೊಂದಿಗೆ ಕಾರ್ತಿಕೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡುವ ಮುಖಾಂತರ ಮುಕ್ತಾಯಗೊಳಿಸಲಾಯಿತು .
ವಿಜಯಪುರ ಜಿಲ್ಲಾ ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷರಾದ ಡಾಕ್ಟರ್ ವೀರಣ್ಣ ತೋರವಿ, ಉಪಾಧ್ಯಕ್ಷರಾದ ಹಾಗೂ ದೇವಾಲಯ ಸಮಿತಿ ಅಧ್ಯಕ್ಷರಾದ ಈರಣ್ಣಎಸ್ ಶಹಾಪುರ ಬಡಾವಣೆಯ ಹಿರಿಯರಾದ ಜಿದ್ದಿಯವರು, ಸಮಾಜದ ಹಿರಿಯರಾದ ಗುರುರಾಜ್ ಕರಬಂಟನಾಳ, ಕೆವಿ ಜಾಡರ್, ಕಲ್ಲಪ್ಪ ಮಣೂರ, ಎಂ ವ್ಹಿ ಹಂದಿಗನೂರ, ಶ್ರೀಮತಿ ಕುರುಹಿನಶೆಟ್ಟಿ ಅಕ್ಕ ಅವರು ವರ್ತಕರಾದ ಮಹಾಂತೇಶ್ ಹೊಸಮನಿ, ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀಶೈಲ ದೇವೂರ ಸೇರಿದಂತೆ ಮಹಿಳೆಯರು ಮಕ್ಕಳು ಪಾಲ್ಗೊಂಡು . ಕಾರ್ತಿಕ ಪೂಜಾ ಮಹೋತ್ಸವ ನೆರವೇರಿಸಿದರು.