spot_img
spot_img

ಬೆಳಗಾವಿ ಅಧಿವೇಶನ ನಿಮಿತ್ತ ಇಂಡಿಗೋ ಏರ್ಲೈನ್ಸ್ ದಿಂದ ವಿಶೇಷ ವಿಮಾನ

Must Read

spot_img
- Advertisement -

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದ ನಿಮಿತ್ಯ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು 09 ಡಿಸೆಂಬರ್ 2024 ರಿಂದ 19 ಡಿಸೆಂಬರ್ 2024ರ ವರೆಗೆ ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ವಿಮಾನ ಸಂಚಾರವನ್ನು ಪ್ರಾರಂಭ ಮಾಡಲು ನಿರ್ಧರಿಸಿದೆ ಮತ್ತು ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಬೆಳಗಾವಿ ಮತ್ತು ಬೆಂಗಳೂರು ನಡುವೆ ಪ್ರಯಾಣಿಸುವ ಜನಪ್ರತಿನಿಧಿಗಳು, ವ್ಯಾಪಾರಿಗಳು, ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮನವಿ ಮಾಡಲಾಗಿತ್ತು. ನನ್ನ ಮನವಿಗೆ ಸ್ಪಂಧಿಸಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ವಿಮಾನ ಸಂಚಾರ ನಡೆಸಲಿದೆ. ಈ ವಿಮಾನಯಾನ ಸೇವೆ ಸೌಲಭ್ಯವನ್ನು ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.

ಇಂಡಿಗೋ ಏರ್‌ಲೈನ್ಸ್ ಸಂಸ್ಥೆಗೆ ಜಿಲ್ಲೆಯ ಜನತೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

- Advertisement -

ವಿಮಾನ ವೇಳಾಪಟ್ಟಿ: ಡಿಸೆಂಬರ 09 2024 ರಿಂದ
ವಿಮಾನ 6ಇ-492: ಬೆಂಗಳೂರಿನಿಂದ ಬೆಳಗ್ಗೆ 06:00ಕ್ಕೆ ಹೊರಟು ಬೆಳಗಾವಿಗೆ ಬೆಳಗ್ಗೆ 07:00ಕ್ಕೆ ತಲುಪಲಿದೆ
ವಿಮಾನ 6ಇ-639: ಬೆಳಗಾವಿಯಿಂದ ಬೆಳಗ್ಗೆ 07:30ಕ್ಕೆ ಹೊರಟು ಬೆಂಗಳೂರಿಗೆ ಬೆಳಗ್ಗೆ 08:30 ಗಂಟೆಗೆ ತಲುಪಲಿದೆ

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group