ಡಿ.೯ ಹಾಗೂ ೧೦ರಂದು ಶ್ರೀ ವರಾಹ ಮಹದೇಸಿಕನ್ ಸ್ವಾಮಿಗಳ ‘ವಿಜಯ ಯಾತ್ರೆ

Must Read

ಮೈಸೂರು -ಶ್ರೀ ಶ್ರೀ ಶ್ರೀ ಶ್ರೀರಂಗಂ ಶ್ರೀಮದ್ ಆಂಡವನ್ ಶ್ರೀ ವರಾಹ ಮಹದೇಸಿಕನ್ ಸ್ವಾಮಿಗಳ ‘ವಿಜಯ ಯಾತ್ರೆ’ ಡಿ.೯ ಸೋಮವಾರ ಹಾಗೂ ೧೦ರಂದು ಮಂಗಳವಾರ ಬೆಳಿಗ್ಗೆ ೧೦ರಿಂದ ರಾತ್ರಿ ೯ರವರೆಗೆ ಜಗನ್ಮೋಹನ ಅರಮನೆ ಸಮೀಪವಿರುವ ಶ್ರೀ ಪರಕಾಲ ಮಠದಲ್ಲಿ ನೆರವೇರಲಿದೆ.

ಈ ಸುವರ್ಣಾವಕಾಶವನ್ನು ಶ್ರೀ ವೈಷ್ಣವ ಸಮೂಹ ಉಪಯೋಗಿಸಿಕೊಂಡು ಪಂಚ ಸಂಸ್ಕಾರ ಮತ್ತು ಭರಣ್ಯಾಸ ಮಾಡಿಸಿಕೊಳ್ಳಬಹುದು. ನಗರದ ಭಕ್ತಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸುವರ್ಣಾವಕಾಶವನ್ನು ಬಳಸಿಕೊಂಡು ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥ ವಿದ್ವಾನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗಾಗಿ ಮೊಬೈಲ್ ೯೩೪೨೧೮೮೩೨೩ ಅಥವಾ ೭೫೯೮೮೩೨೨೭೧ ಸಂಪರ್ಕಿಸಬಹುದು.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group